Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಸೆಪ್ಟೆಂಬರ್ 15ರಂದು ಕಾಡಲಿದೆ ಹಣದ ಸಮಸ್ಯೆ!
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 15ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭಕರವಾದ ಲಾಭಗಳ ನೋಡಬಹುದು. ಅನೇಕ ಕೆಲಸ ಸಂಬಂಧವಾಗಿ ನೀವು ಪ್ರಯಾಣ ಮಾಡಬಹುದು. ಆಪ್ತರೊಂದಿಗೆ ನಿಮ್ಮದಲ್ಲದ ಕೆಲಸಗಳ ಸಂಬಂಧ ಚರ್ಚೆ ಮಾಡಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಬಹಳ ಮುಖ್ಯ ದಿನವಾಗಲಿದೆ. ಸಕಾರಣದಿಂದಾಗಿ ನಿಮ್ಮ ಕೆಲಸಗಳನ್ನು ಮುಂದೂಡುತ್ತೀರಿ, ಇದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಅನೇಕರಲ್ಲಿ ಹಣಕಾಸು ಸಂಬಂಧವಾಗಿ ಅನಿರೀಕ್ಷಿತ ಫಲಿತಾಂಶ ಇರಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಹಣಕಾಸು ಸಂಬಂಧ ಸಂತಸವಿದ್ದರೂ ಸಾಲ ಸಂಬಂಧವಾಗಿ ಒತ್ತಡ ಇರಲಿದೆ. ಬಹಳ ಸಮಯದಿಂದ ಮಾಡಲು ಇಚ್ಛಿಸಿದ್ದ ಕೆಲಸವನ್ನು ಮತ್ತೆ ಮುಂದೂಡಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತವಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಪ್ರಯಾಣದ ದಿನವಾಗುತ್ತಿದೆ. ನಿಮ್ಮ ಹಲವು ಪ್ರಯಾಣಗಳು ನೀವು ಅಂದುಕೊಂಡ ಫಲಿತಾಂಶ ತರಲಿವೆ. ನಿರುದ್ಯೋಗಿಗಳು ಇಂದು ಉದ್ಯೋಗ ಸಂಬಂಧವಾಗಿ ಶುಭ ಸುದ್ದಿ ಕೇಳಬಹುದು. ಹಣಕಾಸು ಸಂಬಂಧ ನಿಮ್ಮ ಯಾವುದೇ ಪ್ರಯತ್ನಗಳನ್ನು ಅರ್ಧಕ್ಕೆ ಬಿಡಬೇಡಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಬಹಳ ಅಪರೂಪದ ಫಲಿತಾಂಶಗಳ ಪಡೆಯಬಹುದು. ಮನೆಯ ಕೆಲವು ಜವಾಬ್ದಾರಿಯನ್ನು ನೀವು ನಿಭಾಯಿಸಬೇಕಾಗಬಹುದು. ಅನೇಕ ಕೆಲಸಗಳಲ್ಲಿ ನಿಮಗೆ ಶ್ರಮದಾಯಕ ದಿನ. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿ ನೀಡುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಬಹಳ ಅನುಕೂಲಕರ ದಿನ. ನಿಮ್ಮ ಶ್ರಮದ ಕೆಲಸ ಇಲ್ಲವೆ ಕಠಿಣ ಕೆಲಸಕ್ಕೆ ತಕ್ಕ ಪ್ರತಿ ಫಲ ಸಿಗಲಿದೆ. ಪೂರ್ವ ನಿಯೋಜಿತ ಕೆಲಸದಲ್ಲಿ ಯಶಸ್ಸು ಇದೆ. ಯಾರಿಗೂ ಹೆಚ್ಚಿನ ಹಣ ಸಾಲವಾಗಿ ನೀಡುವ ಕೆಲಸಕ್ಕೆ ಮುಂದಾಗಬೇಡಿ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಉತ್ತಮ ಫಲಿತಾಂಶ ದಿನ. ಅನೇಕ ಕೆಲಸಳಲ್ಲಿ ನೀವು ಮನೆಯಿಂದ ಹೊರಗುಳಿಯುತ್ತೀರಿ. ಇಲ್ಲವೆ ಪ್ರಯಾಣ ಮಾಡುತ್ತೀರಿ. ವ್ಯಾಪಾರಿಗಳಿಗೆ ಉತ್ತಮ ದಿನವಾಗುವ ಲಕ್ಷಣವಿದೆ. ಸವಾಲುಗಳು ಎದುರಿಸುತ್ತೀರಿ.
ವೃಶ್ಚಿಕ ರಾಶಿ
ಇಂದು ನಿಮಗೆ ಸಮಸ್ಯೆಗಳ ದಿನ ಎನ್ನಬಹುದು. ಆರ್ಥಿಕ ಸಮಸ್ಯೆ ದೊಡ್ಡದಾಗಬಹುದು, ಅದ್ರಲ್ಲೂ ಸಾಲಗಾರರಿಂದ ಒತ್ತಡ ಬರಬಹುದು. ವಾಹನ ಕುರಿತಾದ ಒತ್ತಡ ಕಾಡಬಹುದು. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ಕೆಲಸ ಬರಬಹುದು. ನಿಮ್ಮ ಕೆಲಸಗಳಿಗೆ ಬಾಹ್ಯ ಅಡಚಣೆಗಳು ಬರಬಹುದು.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ಅನಿರೀಕ್ಷಿತ ಮೂಲದಿಂದ ನೀವು ಹಣ ಪಡೆಯಬಹುದು. ಯಾರಿಂದಾದರು ಹಣದ ಬೇಡಿಕೆ ಇಟ್ಟಿದ್ದರೆ ಪಡೆಯಬಹುದು. ಹಳೆಯ ಕಲಸಗಳು ಬಾಕಿ ಉಳಿದಿದ್ದರೆ ಪೂರ್ಣ ಮಾಡಬಹುದು.
ಮಕರ ರಾಶಿ
ಮಕರ ರಾಶಿಯವರಲ್ಲಿ ಇಂದು ಸುಲಭ ಫಲಿತಾಂಶ ಪಡೆಯುವ ದಿನ. ವ್ಯಾಪಾರ ವ್ಯವಹಾರಗಳು ಸುಖಾಂತ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಬರಬಹುದು. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗುವ
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಉತ್ತಮ ಸಂಬಂಧಗಳು ವೃದ್ಧಿಸುವ ದಿನ. ಕುಟುಂಬದಲ್ಲಿ, ಒಡನಾಡಿಗಳಲ್ಲಿ ನಿಮಗೆ ಸಂತಸ ಅನುಭವಿಸುವ ದಿನ. ದಿನದ ಅಂತ್ಯದಲ್ಲಿ ಮನೆ ಅಗತ್ಯವಾದ ವಸ್ತು ಖರೀದಿಸಬಹುದು. ಆಹಾರ ಸಂಬಂಧಿತ ಖರ್ಚು ಇರಬಹುದು.
ಮೀನ ರಾಶಿ
ಮೀನ ರಾಶಿಯವರಲ್ಲಿ ಇಂದು ಮಿಶ್ರ ಫಲ ನೋಡಬಹುದು. ಆದಾಯದಷ್ಟೇ ಖರ್ಚು ಇರಬಹುದು. ಯಾರಿಂದಾದರು ಹಣಕ್ಕೆ ಬೇಡಿಕೆ ಇಟ್ಟಿದ್ದರೆ ಪಡೆಯಬಹುದು. ಗೃಹಿಣಿಯರು ಅಗತ್ಯ ವಸ್ತು ಸಂಬಂಧಿ ಖರ್ಚು ಹೆಚ್ಚಾಗಬಹುದು.



Click it and Unblock the Notifications