Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಸೆಪ್ಟೆಂಬರ್ 14ರಂದು ಯಾರಿಗೆಲ್ಲಾ ಧನಾತ್ಮಕ ದಿನ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 14ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ನಿಮ್ಮ ಎಲ್ಲಾ ಕಾರ್ಯಗಳನ್ನು ಯೋಜನೆಯಂತೆ ಮಾಡುವಿರಿ. ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ. ಕುಟುಂಬದ ಭಿನ್ನಾಭಿಪ್ರಾಯವನ್ನು ಸರಿಪಡಿಸಿ. ಆಪ್ತರ ಭೇಟಿ ಮಾಡುವಿರಿ. ವಿಶ್ರಾಂತಿಯ ದಿನವಾಗುತ್ತಿದೆ. ಮಾನಸಿಕ ನೆಮ್ಮದಿ ಸಾಧ್ಯ.
ವೃಷಭ ರಾಶಿ
ಇಂದು ನಿಮಗೆ ಉತ್ತಮ ದಿನವಾಗುತ್ತದೆ. ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು ಆದ್ರೆ ಇದರಿಂದ ನಿಮಗೆ ಒತ್ತಡ ಇರುವುದಿಲ್ಲ. ಆರೋಗ್ಯದಲ್ಲಿನ ಏರುಪೇರು ನಿಮ್ಮ ಹಣಕಾಸಿನ ಸಮಸ್ಯೆ ದೊಡ್ಡದು ಮಾಡಬಹುದು. ಪ್ರಯಾಣ ಮಾಡಬೇಕಾಗಬಹುದು.

ಮಿಥುನ ರಾಶಿ
ಈ ದಿನ ನಿಮ್ಮ ದಿನ ಉತ್ತಮವಾಗಲಿದೆ. ಹಣಕ್ಕೆ ತೊಂದರೆಯಿಲ್ಲ, ಖರ್ಚು ಅಧಿಕವಾಗಬಹುದು. ಬಂಧುಗಳಿಂದ ಟೀಕೆ ಬರಬಹುದು. ಆತುರ, ಹಾಗೂ ತರಾತುರಿಯ ನಿರ್ಧಾರಗಳು ನಿಮಗೆ ನಷ್ಟ ಉಂಟು ಮಾಡಬಹುದು. ಪ್ರಯಾಣದಲ್ಲಿ ಸುಖವಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಮಿಶ್ರಫಲದ ದಿನ. ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಬಹುದು. ಸಹೋದರಿಯ ಚಿಂತೆಯಿಂದ ಬೇಸರ ಆಗಬಹುದು. ಸ್ನೇಹಿತರ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಲಿದೆ. ಪೋಷಕರನ್ನು ನಿಂದಿಸಬೇಡಿ, ಅವರ ಆಶೀರ್ವಾದ ಪಡೆಯಿರಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನ. ರಕ್ತದೊತ್ತಡ ರೋಗಿಗಳು ಎಚ್ಚರವಹಿಸಿ. ವ್ಯಾಪಾರಿಗಳಿಗೆ ಇಂದು ಉತ್ತಮ ದಿನ. ಸರ್ಕಾರಿ ನೌಕರಿಯಲ್ಲಿರುವವರು ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಕೌಟುಂಬಿಕ ಸಮಸ್ಯೆ ಬಗೆಹರಿಸಲು ಮುಂದಾಗಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಸಮಸ್ಯೆಗಳು ಬರುವ ದಿನ. ನಿಮ್ಮ ಅನಾರೋಗ್ಯ ಸಂಬಂಧವಾಗಿ ಇಂದು ಕಷ್ಟದ ದಿನ. ನಿಮ್ಮ ಹಲವು ದಿನದಿಂದ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣ ಮಾಡುವಿರಿ. ನಿಮ್ಮ ದೊಡ್ಡ ಪ್ರಯತ್ನವೊಂದಕ್ಕೆ ಫಲ ಸಿಗಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ಲಾಭವಿದ್ದರೂ ಎಚ್ಚರಿಕೆ ಇರಬೇಕು. ನಂಬಿದವರಿಂದ ಹಣ ಮೋಸ ಆಗಬಹುದು. ವೃತ್ತಿ ಅಥವಾ ನೌಕರಿಯ ಒತ್ತಡ ಹೆಚ್ಚಾಗಿರಲಿದೆ. ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು. ಇಂದು ಮಾನಸಿಕ ಒತ್ತಡವನ್ನು ದೂರಮಾಡಿ.
ವೃಶ್ಚಿಕ ರಾಶಿ
ಇಂದಿ ನಿಮ್ಮ ಅನೇಕ ಕೆಲಸಗಳನ್ನು ಪೂರ್ಣ ಮಾಡುವಿರಿ. ವಾಹನ ಸವಾರರು ಬಹಳ ಎಚ್ಚರಿಕೆ ವಹಿಸಿ. ಷೇರು ಮಾರುಕಟ್ಟೆಯಿಂದ ಲಾಭವಿದೆ. ನಾಯಕತ್ವ ಗೌರವ ತಂದುಕೊಡುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಬಹಳ ಉತ್ತಮ ದಿನ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಉತ್ತಮ ಸಮಯ. ನಿಮ್ಮ ದೈನಂದಿನ ಕೆಲಸಗಳಿಂದ ನಿಮಗೆ ನೆಮ್ಮದಿ ಪಡೆಯುವ ದಿನ. ನಿಮ್ಮ ಎಲ್ಲ ಕಾರ್ಯಗಳು ಯಶಸ್ವಿಯಾಗಲಿದೆ. ಈ ದಿನ ಎಲ್ಲರೊಂದಿಗೆ ಸಂತೋಷವಾಗಿರಿ. ಮನೋಬಲ ಹೆಚ್ಚಾಗುವ ದಿನ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಸಮಸ್ಯೆಗಳು ಬರಬಹುದು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಆಗಲಿದೆ ಗಾಬರಿ ಬೇಡ. ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ. ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ. ಹಣದ ಅಭಾವ, ಮಾನಸಿಕ ಒತ್ತಡ ಉಂಟಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ತೊಡಕಾಗಬಹುದು. ಪ್ರಮುಖ ವ್ಯಕ್ತಿಗಳ ಜೊತೆ ಮಾತು ಸಮಯ ವ್ಯರ್ಥ ಆಗಲಿದೆ. ಪ್ರಯಾಣದ ಆಯಾಸದಿಂದ ಕೆಲಸ ಮುಂದೂಡುತ್ತೀರಿ.
ಮೀನ ರಾಶಿ
ಹಿಂದೆ ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ ಆಗಬಹುದು. ಆದಾಯದಲ್ಲಿ ಇಳಿಕೆಯಾಗುವುದರಿಂದ ಬೇಸರ, ಆತಂಕ ಆಗಲಿದೆ. ಬಂಡವಾಳದಲ್ಲಿ ನಷ್ಟ ಮೂಲಕ್ಕೆ ಧಕ್ಕೆ ಉಂಟಾಗಬಹುದು. ಆರೋಗ್ಯ ಕುರಿತ ಆಲೋಚನೆಯು ನಿಮಗೆ ಚಿಂತೆ ಹೆಚ್ಚುವಂತೆ ಮಾಡಬಹುದು.



Click it and Unblock the Notifications










