Dina Bhavishya: ಸೆಪ್ಟೆಂಬರ್ 13ರಂದು ಯಾರ ಆಸೆ ಈಡೇರಲಿದೆ? ಯಾರಿಗೆ ಶುಭ!

ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 13ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ವ್ಯವಹಾರದ ದೃಷ್ಠಿಯಿಂದ ದೂರ ಪ್ರಯಾಣ ಮಾಡಬಹುದು. ಮನೆಯವರು ನಿಮ್ಮ ಪ್ರಗತಿಯ ವಿಚಾರವನ್ನು ಕೇಳಿ ಸಂತೋಷ ಪಡುತ್ತಾರೆ. ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಮ್ಮ ನಿರ್ಧಾರಗಳು ಫಲ ನೀಡಲಿವೆ.

ವೃಷಭ ರಾಶಿ

ಈ ದಿನ ನಿಮಗೆ ಮಿಶ್ರಫಲದ ದಿನ. ಹಣ ಹೂಡಿಕೆ ಮಾಡಲು ಹೊಸ ಆಲೋಚನೆಗಳು ನಿಮ್ಮನ್ನು ಹುಡುಕಿಕೊಂಡು ಬರುವ ದಿನ. ಅನಿವಾರ್ಯ ಕಾರಣಗಳಿಗೆ ಸಾಲವನ್ನು ಮಾಡಬೇಕಾಗಬಹುದು. ಮಧ್ಯಾಹ್ನದ ನಂತರ ಸ್ವಲ್ಪ ಆಲಸ್ಯ ಕಾಡಬಹುದು. ಹಣದ ವಿಚಾರದಲ್ಲಿ ಸ್ವಲ್ಪ ಚಿಂತೆಯಿರುತ್ತದೆ.

September-13-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಇಂದು ಬಹಳ ಉತ್ತಮ ದಿನವಾಗಲಿದೆ. ಚಿಕ್ಕ ಮಕ್ಕಳು ಸಂತೋಷದಿಂದ ಕಾಲ ಕಳೆಯುವ ಸಮಯವಾಗಿರುತ್ತೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚು ತೊಡಗುವುದು ಉತ್ತಮ. ತಂದೆ-ತಾಯಿಯ ಆರೋಗ್ಯ ಕುರಿತು ಮಕ್ಕಳ ಎಚ್ಚರದಿಂದ ಇರಬೇಕಿದೆ.

ಕರ್ಕ ರಾಶಿ

ಇಂದು ಅವಿವಾಹಿತರಿಗೆ ಉತ್ತಮ ದಿನ. ಮನೆಯ ವಾತಾವರಣ ಉತ್ತಮವಾಗಿರುವ ದಿನವಾಗಿದೆ. ಕುಲದೇವತಾ ಆರಾಧನೆ ಮಾಡುವುದರಿಂದ ಇಂದು ನಿಮಗೆ ಉತ್ತಮ ದಿನವಾಗಬಹುದು. ತಂದೆ-ತಾಯಿಯ ಆರೋಗ್ಯ ಸಮಸ್ಯೆ ಕಾಡಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರವಾಗಬಹುದು. ಅಣ್ಣ ತಮ್ಮಂದಿರೊಂದಿಗೆ ಮಾತಿನ ಘರ್ಷಣೆ ನಡೆಯಬಹುದು. ಈಗಾಗಲೇ ಆರಂಭಿಸಿದ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಮಿಶ್ರ ಫಲದ ದಿನ. ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ. ಮನೆಯ ಸಾಕು ಪ್ರಾಣಿಗಳಿಂದ ಜಾಗೃತೆ ವಹಿಸಬೇಕಿದೆ. ವಾಹನ ಸಂಬಂಧವಾಗಿ ನಿಮಗೆ ಈ ದಿನ ಉತ್ತಮವಾಗಿರುವುದಿಲ್ಲ.

ತುಲಾ ರಾಶಿ

ನಿಮಗೆ ಇಂದು ಲಾಭದಾಯಕ ದಿನ. ಧನಾಗಮನದಿಂದ ನಿಮ್ಮ ಯೋಜನೆ ಬೇರೆ ರೂಪ ಪಡೆದುಕೊಳ್ಳಬಹುದು. ಈ ದಿನ ತುಂಬಾ ಓಡಾಟ, ಒತ್ತಡಗಳಿರುತ್ತದೆ. ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ.

ವೃಶ್ಚಿಕ ರಾಶಿ

ಇಂದು ನಿಮಗೆ ಮಿಶ್ರ ಫಲದ ದಿನ. ಇಂದು ದುಂದು ವೆಚ್ಚದ ದಿನ. ಅದ್ರಲ್ಲೂ ಆಹಾರ ವಿಚಾರದಲ್ಲಿ ಖರ್ಚು ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ. ತಮ್ಮ ಕೆಲಸದ ಬಗ್ಗೆ ಆತ್ಮ ವಿಶ್ವಾಸ ಮೂಡುತ್ತದೆ.

ಧನು ರಾಶಿ

ಧನು ರಾಶಿಯ ಜನರಿಗೆ ಇಂದು ಮಿಶ್ರ ಫಲ. ಹಣದ ಸಮಸ್ಯೆಗಳಿದ್ದರೆ ಈ ದಿನ ಬಗೆಹರಿಯುವ ಸಾಧ್ಯತೆ. ತಾಳ್ಮೆ ಪರೀಕ್ಷೆಯ ಸಮಯವಾಗಿರುತ್ತದೆ. ಸಮಸ್ಯೆಗಳನ್ನ ನಿಧಾನವಾಗಿ ಆಲೋಚಿಸಿ ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭಕರವಾಗಲಿದೆ. ಮನೆಯಲ್ಲಿ ನಿಮ್ಮಿಂದಾಗಿ ಬೇಸರದ ವಾತಾವರಣ ಸೃಷ್ಟಿಯಾಗಬಹುದು ಜಾಗ್ರತೆ ವಹಿಸಿ. ಆರೋಗ್ಯದಲ್ಲಿ ಏರುಪೇರು ಸಂಭವವಾಗಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರು ಇಂದು ಬಹಳ ಓಡಾಟದಲ್ಲಿ ನಡೆಯಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲಸ ಮಾಡಬೇಡಿ. ವ್ಯಾಪಾರಿಗಳಿಗೆ ಇಂದು ಮಿಶ್ರಫಲದ ದಿನ.

ಮೀನ ರಾಶಿ

ಮೀನ ರಾಶಿಯ ಜನರಲ್ಲಿ ಇಂದು ಮಿಶ್ರ ಫಲ. ಹಳೆಯ ಆರ್ಥಿಕ ಸಮಸ್ಯೆಗಳು ಮತ್ತೆ ಎದುರಾಗಬಹುದು. ನಿಮ್ಮ ಸ್ನೇಹಿತರ ಸಹಾಯ ಈ ದಿನ ಸಿಗುವುದಿಲ್ಲ. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಂಕಷ್ಟಕ್ಕೆ ಸಿಲುಕಬಹುದು.

English summary

September-13-2025-daily-horoscope-prediction-for-12-zodiac-signs-in-kannada

Here is September 13 daily horoscope prediction for 12 zodiac signs read on...
X
Desktop Bottom Promotion