Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಸೆಪ್ಟೆಂಬರ್ 11ರ ಗುರುವಾರ ಅದೃಷ್ಟ ಯಾರ ಪಾಲು?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 11ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸಮಸ್ಯೆಯ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಹಿನ್ನಡೆ ಅನುಭವಿಸಬಹುದು. ನಿಮ್ಮ ಕೆಲಸ ಕಾರ್ಯಗಳಲ್ಲಿನ ಸಮಸ್ಯೆಗಳು ದೊಡ್ಡದಾಗಬಹುದು. ಅನಾರೋಗ್ಯ ಸಮಸ್ಯೆಯನ್ನು ನೀವು ನಿರ್ಲಕ್ಷ್ಯ ಮಾಡಿದ್ದ ಕಾರಣ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಕೆಲಸದಲ್ಲಿ ಯಶಸ್ಸು ಇರಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಬಹುದು. ಉತ್ತಮ ಸಂಬಂಧಗಳಲ್ಲಿ ನೀವು ಕಾಲ ಕಳೆಯುತ್ತೀರಿ.

ಮಿಥುನ ರಾಶಿ
ಗೃಹಿಣಿಯರಿಗೆ ಇಂದು ಉತ್ತಮ ದಿನಗಾಗಲಿದೆ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಹಲವು ದಿನದಿಂದ ನಿಮ್ಮಲ್ಲಿದ್ದ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಬಹುದು. ವ್ಯಾಪಾರಿ ವಲಯಕ್ಕೆ ಇಂದು ಉತ್ತಮ ಲಾಭದ ನಿರೀಕ್ಷೆ ಇದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಮಿಶ್ರ ಫಲವಿದೆ. ನಿಮ್ಮಲ್ಲಿ ಇಂದು ಆದಾಯದಷ್ಟೇ ಖರ್ಚು ಕೂಡ ಇರಲಿದೆ. ನಿಮ್ಮ ಪ್ರಯಾಣಕ್ಕಾಗಿ ತಯಾರಿ ಮಾಡಿಕೊಳ್ಳಬಹುದು. ದಾಂಪತ್ಯದಲ್ಲಿ ಸಂತಸ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನವು ಹಲವರಿಗೆ ಉತ್ತಮವಾಗಿರಲಿದೆ. ನಿಮ್ಮ ದುಂದುವೆಚ್ಚಗಳು ಕಡಿಮೆಯಾಗಲಿವೆ. ದೂರ ಸಂಬಂಧಿಕರೊಬ್ಬರಿಂದ ಬರುವ ಕರೆ ನಿಮ್ಮಲ್ಲಿ ಸಂತಸ ತರಲಿದೆ. ಕೆಲಸದಲ್ಲಿ ನೆಮ್ಮದಿ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ಮಿಶ್ರ ಫಲವಾಗಲಿದೆ. ನಿಮ್ಮ ಹಲವರಲ್ಲಿ ಕೆಲಸದ ಕಾರಣಕ್ಕೆ ಒತ್ತಡ ಹೆಚ್ಚಾಗಿರಲಿದೆ. ದೂರ ಪ್ರಯಾಣಗಳ ಮಾಡುವಿರಿ. ಅಚ್ಚರಿಯ ಫಲಿತಾಂಶವೊಂದು ನಿಮಗೆ ಕಾದಿದೆ. ಪ್ರವಾಸ ಸಂಬಂಧ ಯೋಚಿಸಬಹುದು.
ತುಲಾ ರಾಶಿ
ಈ ರಾಶಿಯವರಲ್ಲಿ ಇಂದು ವಾಹನ ಸಂಬಂಧಿ ಅಪಾಯ ಎದುರಾಗಬಹುದು. ಮಕ್ಕಳ ಸಂಬಂಧ ನೀವು ಹಣ ಖರ್ಚು ಮಾಡಬೇಕಾಗಿ ಬರಬಹುದು. ಮನೆಯ ವಸ್ತುವೊಂದು ದುರಸ್ಥಿಗೆ ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಇಂದು ಬಹಳ ಉತ್ತಮ ದಿನ. ನಿಮ್ಮ ಅನೇಕ ಶ್ರಮದಾಯಕ ಕೆಲಸಗಳಿಂದ ನೀವು ಉತ್ತಮ ಲಾಭ ನೋಡುವಿರಿ. ಅನೇಕರಲ್ಲಿ ಇದು ಉತ್ತಮ ದಿನವಾಗುತ್ತಿದೆ, ಹೋಟೆಲ್ ಉದ್ಯಮಿಗಳಲ್ಲಿ ಪ್ರಗತಿ ನೋಡಬಹುದು. ಪ್ರೀತಿಯ ವಿಚಾರವಾಗಿ ನಿಮಗೆ ಉತ್ತಮ ದಿನ.
ಧನು ರಾಶಿ
ಧನು ರಾಶಿಯವರಲ್ಲಿ ಇಂದು ಧನಾತ್ಮಕ ಘಟನೆಗಳು ನಡೆಯಲಿದೆ. ಗೃಹಿಣಿಯರು ವಾಹನ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ. ನಿರುದ್ಯೋಗಿಗಳಿಗೆ ಕೆಲಸದ ಸಂಬಂಧವಾಗಿ ಉತ್ತಮ ಅವಕಾಶ ಬರುವ ಸಾಧ್ಯತೆ ಇದೆ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಶ್ರಮದಾಯಕ ದಿನ. ನೀವು ಅಂದುಕೊಂಡ ಕೆಲಸದಲ್ಲಿ ಸಣ್ಣ ಪುಟ್ಟ ಅಡ್ಡಿ ಇದೆ. ರಾತ್ರಿ ವೇಳೆಯ ಪ್ರಯಾಣ ಮಾಡುವುದನ್ನು ತಪ್ಪಿಸುವುದು ಉತ್ತಮ. ಪೋಷಕರ ಆರೋಗ್ಯ ಸಂಬಂಧವಾಗಿ ಹೆಚ್ಚು ಗಮನವಿಡಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಸಮಸ್ಯೆಗಳಿರಬಹುದು. ಆರ್ಥಿಕ ವಿಚಾರದಲ್ಲಿ ಒತ್ತಡ ಇರಲಿದೆ. ವ್ಯಾಪಾರಿಗಳಿಗೆ ಅಂದುಕೊಂಡಂತೆ ಈ ದಿನ ಇರುವುದಿಲ್ಲ. ಹೊಸ ವ್ಯವಹಾರ ಮಾಡುವಾಗ ಎಚ್ಚರಿಕೆ ಇಡಿ. ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಅಚ್ಚರಿಯ ಫಲಿತಾಂಶ ಬರಬಹುದು. ಹಾಗೆ ನಿಮ್ಮ ಹಲವು ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ಯಾರೊಂದಿಗೂ ಅನಗತ್ಯ ಚರ್ಚೆಯಲ್ಲಿ ತೊಡಗಬೇಡಿ. ಆಪ್ತರೊಬ್ಬರಿಂದ ಹಣಕಾಸು ಸಂಬಂಧವಾಗಿ ಒತ್ತಡ ಬರಬಹುದು.



Click it and Unblock the Notifications