ವಾರ ಭವಿಷ್ಯ (ಸೆಪ್ಟೆಂಬರ್ 1-7): ಈ 7 ದಿನಗಳು ಈ ರಾಶಿಯವರು ಸ್ವಲ್ಪ ಜಾಗ್ರತೆವಹಿಸಿ

ಈ ವಾರದ ಭವಿಷ್ಯ ಪ್ರಕಾರ ಈ ವಾರ ಈ ರಾಶಿಗಳಿಗೆ ಮಿಶ್ರಫಲ, ಈ ಸಮಯದಲ್ಲಿ ಈ ರಾಶಿಯವರು ಯಾವೆಲ್ಲಾ ವಿಷಯಗಳ ಬಗ್ಗೆ ಜಾಗ್ರತೆವಹಿಸಬೇಕು ಎಂದು ನೋಡೋಣ ಬನ್ನಿ:

September 1-7 Weekly Horoscope

ಮೇಷ ರಾಶಿ

ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಲೇಬೇಡಿ, ವೃತ್ತಿ ಬದುಕಿನ ಬಗ್ಗೆ ನೋಡುವುದಾದರೆ ಕೆಲಸದ ಒತ್ತಡ ಅಧಿಕವಿರಲಿದೆ. ಇದರಿಂದ ಕೂಡ ಮಾನಸಿಕ ಒತ್ತಡ ಹೆಚ್ಚಿರಲಿದೆ. ಇನ್ನು ಅರ್ಥಕವಾಗಿ ನೋಡುವುದಾದರೆ ನಿಮಗೆ ಅನುಕೂಲಕರವಾಗಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು.

ಈ ವಾರ ನಿಮಗೆ ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ :47
ಸೋಮವಾರ ಶುಭ ದಿನವಾಗಿದೆ

ಕರ್ಕ ರಾಶಿ

ಈ ವಾರ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಬಹುದು. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ನಿಮ್ಮ ಮನಸ್ಸಿನಲ್ಲಿ ಗೊಂದಲವಿದ್ದರೆ ಅದನ್ನು ಬಗೆಹರಿಸದೆ ಮದುವೆಯ ನಿರ್ಧಾರಕ್ಕೆ ಬರಬೇಡಿ. ಕೆಲಸದಲ್ಲಿ ಹೆಚ್ಚು ಒತ್ತಡ ಇರಲಿದೆ, ಹಣದ ವಿಷಯದಲ್ಲಿ ಈ ವಾರ ದುಬಾರಿಯಾಗಲಿದೆ. ಅನಗ್ಯತ ಚಿಂತೆಗಳು ನಿಮ್ಮ ಮನಸ್ಸಿಗೆ ಒತ್ತಡವನ್ನು ಉಂಟು ಮಾಡಬಹುದು, ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ.
ಈ ವಾರ ನಿಮಗೆ ಅದೃಷ್ಟದ ಬಣ್ಣ ಕೆಂಪು
ಅದೃಷ್ಟದ ಸಂಖ್ಯೆ 29
ಶುಭ ದಿನ: ಮಂಗಳವಾರ

ಸಿಂಹ ರಾಶಿ

ವಾರದ ಆರಂಭವು ನಿಮಗೆ ಸ್ವಲ್ಪ ಕಷ್ಟಕರವಾಗಿರುತ್ತದೆ, ಆರ್ಥಿಕ ನಷ್ಟವಾಗುವ ಸಂಭವವಿದೆ. ಕೆಲಸದ ಚಿಂತೆ ನಿಮಗೆ ಕಾಡಲಿದೆ. ನೀವು ಪಾಲುದಾರಿಕೆಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಇನ್ನೂ ಸ್ವಲ್ಪ ಕಾಯುವುದು ಒಳ್ಳೆಯದು. ಕೆಲಸದ ಒತ್ತಡ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುವುದು. ವಾರದ ಕೊನೆ ನಿಮಗೆ ಅನುಕೂಲಕರವಾಗಿದೆ. ನಿಮಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಕೋಪ, ಒತ್ತಡದಿಂದ ದೂರವಿರಿ.
ಈ ವಾರ ನಿಮಗೆ ಅದೃಷ್ಟದ ಬಣ್ಣ ಬಿಳಿ
ಅದೃಷ್ಟದ ಸಂಖ್ಯೆ 6
ಅದೃಷ್ಟದ ದಿನ ಶುಕ್ರವಾರ

ತುಲಾ ರಾಶಿ

ಹೆಚ್ಚಿನ ಕೆಲಸದ ಒತ್ತಡದಿಂದಾಗಿ, ಈ ಸಮಯದಲ್ಲಿ ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಆಲೋಚನೆಗಳು ತುಂಬಿಕೊಳ್ಳಲು ಬಿಡಬೇಡಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಖರ್ಚು ಹೆಚ್ಚಿರಲಿದೆ, ಆದರೆ ಅನಗ್ಯತ ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದಸಂಖ್ಯೆ: 8
ಶುಭ ದಿನ: ಸೋಮವಾರ

ವೃಶ್ಚಿಕ ರಾಶಿ

ಕೆಲಸದ ಸ್ಥಳದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ವಕೀಲರಿಂದ ಕಾನೂನು ಸಲಹೆ ಪಡೆಯಲು ಈ ಅವಧಿ ಅನುಕೂಲಕರವಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ಏಳು ದಿನಗಳು ನಿಮಗೆ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ : 42
ಶುಭ ದಿನ: ಶನಿವಾರ

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ತುಂಬಾ ಅಡೆತಡೆಗಳಿರಬಹುದು. ಕೆಲಸ ಕಾರ್ಯದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಯಕ್ಷಮತೆಯನ್ನು ನೀವು ಸುಧಾರಿಸಲು ಪ್ರಯತ್ನಿಸಬೇಕು. ಹಣದ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ವೈವಾಹಿಕ ಜಿವನದಲ್ಲಿ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ ಕಿತ್ತಳೆ
ಅದೃಷ್ಟದ ಸಂಖ್ಯೆ 16
ಶುಭ ದಿನ: ಭಾನುವಾರ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

September 1-7 Weekly Horoscope Prediction: Unlucky Time These Zodiacs

September 1-7 Weekly Horoscope Prediction: Unlucky Time These Zodiacs
Story first published: Saturday, August 31, 2024, 22:22 [IST]
X
Desktop Bottom Promotion