Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
Dina Bhavishya: ಸೆಪ್ಟೆಂಬರ್ 09ರ ಮಂಗಳವಾರ ಯಾರ ಅದೃಷ್ಟದ ದಿನ
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 09ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸಮಸ್ಯೆಗಳು ಬರಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಹಣಕಾಸು ಸಮಸ್ಯೆ ಅಡ್ಡಿಯಾಗಿ ಬರಬಹುದು. ಯಾರ ಬಳಿಯಾದರು ಹಣ ಪಡೆದಿದ್ದರೆ ಈ ದಿನ ಅವರಿಂದ ಮರಳಿ ನೀಡುವ ಒತ್ತಡ ಬರಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಇಂದು ಉತ್ತಮ ದಿನದ ನಿರೀಕ್ಷೆ ಮಾಡಬಹುದು. ನಿಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಂದು ಉತ್ತಮ ದಿನ. ಅನೇಕ ವ್ಯಾಪಾರಿಗಳು ಪ್ರಗತಿಯ ಹಾದಿ ಹಿಡಿಯಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನವಾಗಿರಲಿದೆ. ನಿಮ್ಮ ಹಣಕಾಸು ಕುರಿತ ಸಮಸ್ಯೆಗಳು ದೊಡ್ಡದಾಗಬಹುದು, ಅದರಲ್ಲೂ ಬೇರೆಯವರಿಗೆ ನೀಡಿದ್ದ ಹಣ ಮರಳಿ ಪಡೆಯುವುದು ಕಷ್ಟವಾಗಬಹುದು. ಆಪ್ತರೊಬ್ಬರ ಅನಾರೋಗ್ಯ ಸಂಬಂಧವಾಗಿ ಖರ್ಚು ಬರಬಹುದು.
ಕರ್ಕ ರಾಶಿ
ಈ ದಿನ ನಿಮ್ಮ ಹಲವು ಕೆಲಸಗಳಿಗೆ ಹಣಕಾಸಿನ ಅಡ್ಡಿ ಇದೆ. ಕೆಲಸ ಸಂಬಂಧ ದೂರ ಪ್ರಯಾಣಗಳ ಮಾಡಬಹುದು. ಕೆಲಸದ ಒತ್ತಡದ ಕಾರಣ ಅಶಾಂತಿ ಕೂಡ ಇರಬಹುದು. ಪ್ರತಿದಿನದ ಕೆಲಸಗಳ ಮುಗಿಸುವುದು ಕಷ್ಟವಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ಕುಟುಂಬಸ್ಥರ ಮೂಲಕ ನಿಮಗೆ ಹಣಕಾಸಿನ ಒತ್ತಡ ಬರಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭದಾಯಕ ದಿನ. ಯಾವುದೇ ವಸ್ತು ಖರೀದಿಗೆ ಇಂದು ಉತ್ತಮ ದಿನ. ಹಲವರಿಗೆ ಈ ದಿನ ಸುಖಕರ ಪ್ರಯಾಣದ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನವು ಆರಾಮದಾಯಕ ದಿನ. ನಿಮ್ಮ ಕೆಲಸ ಕಾರ್ಯಗಳು ಸುಖಾಂತ್ಯವಾಗಲಿವೆ. ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುವ ನಿರೀಕ್ಷೆ ಇದೆ. ಪ್ರಯಾಣಗಳು ಉತ್ತಮ ಫಲಿತಾಂಶ ನೀಡಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ನಿತ್ಯದ ಕೆಲಸ ಕಾರ್ಯಗಳು ನಿಧಾನವಾಗಲಿದೆ. ಹಲವರು ದೂರ ಪ್ರಯಾಣ ಮಾಡಬೇಕಾಗಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ಚರ್ಚೆಗಳ ನೋಡಬಹುದು. ಹಣಕಾಸು ಕುರಿತಾದ ನಿಮ್ಮ ಆಲೋಚನೆಯಲ್ಲಿ ಬದಲಾವಣೆ ನೋಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇಂದು ಶಾಂತಿ ಹಾಗೂ ತಾಳ್ಮೆಯಿಂದ ಇರಬೇಕಿದೆ. ಗೃಹಿಣಿಯರು ನಷ್ಟ ಅನುಭವಿಸಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸುವುದು ಉತ್ತಮ. ರಾತ್ರಿ ಪ್ರಯಾಣವನ್ನು ಮುಂದೂಡುವುದು ಬಹಳ ಉತ್ತಮ.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಅನೇಕ ಸವಾಲುಗಳನ್ನು ಎದುರಿಸಲು ಇಂದು ಉತ್ತಮ ಸಮಯ. ಆಪ್ತರೊಬ್ಬರಿಂದ ಉದ್ಯೋಗ ಸಂಬಂಧವಾಗಿ ಅವಕಾಶಗಳು ಹುಡುಕಿ ಬರಬಹುದು. ಪೋಷಕರ ಆರೋಗ್ಯದ ಕಡೆಗೆ ಗಮನ ಹರಿಸಬೇಕಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಪ್ರಯಾಣ ಮಾಡುವಿರಿ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಾಗುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರಿಳಿತ ನೋಡುವಿರಿ. ದಾಂಪತ್ಯ ವಿಚಾರವಾಗಿ ನಿಮಗೆ ಉತ್ತಮ ದಿನ ಆಗದೆ ಇರಬಹುದು. ಹೊಸ ವಸ್ತು ಖರೀದಿಯ ಮನಸ್ಸು ಮಾಡುವಿರಿ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ವ್ಯಕ್ತಿಗತ ಸಮಸ್ಯೆಗಳು ಬರಬಹುದು. ಅನಗತ್ಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಅನೇಕರಿಗೆ ಉದ್ಯೋಗ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು. ವಾಹನ ಸವಾರರು ಬಹಳ ಎಚ್ಚರಿಕೆ ವಹಿಸಬೇಕಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಅತ್ಯಂತ ಶುಭ ದಿನ. ಮನೆಯ ವಾತಾವರಣ ಶಾಂತವಾಗಿರಲಿದೆ. ನೀವು ಬಹಳ ದಿನದಿಂದ ಬಯಸಿದ್ದ ವಸ್ತುವೊಂದು ನಿಮ್ಮ ಕೈ ಸೇರಲಿದೆ. ಆರೋಗ್ಯ ಸುಧಾರಣೆಯ ಭಾಗ್ಯವಿದೆ. ಮನೆಗಾಗಿ ಖರ್ಚು ಮಾಡುವುದು ಸಂತಸಕ್ಕೆ ಕಾರಣವಾಗಲಿದೆ.



Click it and Unblock the Notifications