Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಸೆಪ್ಟೆಂಬರ್ 08ರ ಸೋಮವಾರದ ರಾಶಿಫಲ
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 08ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಲ್ಲಿ ಇಂದು ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುವ ದಿನ. ಅನೇಕರಲ್ಲಿ ಅನಾರೋಗ್ಯ ಸಂಬಂಧ ಪರಿಹಾರ ಪಡೆಯುವಂತಹ ದಿನವಾಗುತ್ತಿದೆ. ಕೆಲಸ ಸಂಬಂಧ ಪ್ರಯಾಣ ಮಾಡಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಮಿಶ್ರ ಫಲ ನೋಡುವ ದಿನ. ನಿರುದೋಗಿ ಯುವತಿಯರಿಗೆ ಉತ್ತಮ ಅವಕಾಶ ಸಿಗಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಸಂಬಂಧವಾಗಿ ಎಚ್ಚರ ವಹಿಸಬೇಕು. ಸಮಯದೊಳಗೆ ನಿಮ್ಮ ಕೆಲಸಗಳ ಪೂರ್ಣ ಮಾಡುವಿರಿ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಇಂದು ಒತ್ತಡದಿಂದ ತುಂಬಿದ ದಿನ. ಕುಟುಂಬದಲ್ಲಿ ಹಣಕಾಸು ಸಂಬಂಧಿ ಒತ್ತಡ ಇರಲಿದೆ. ಹಣಕಾಸು ಸಮಸ್ಯೆಗಳು ನಿವಾರಣೆಯಾಗಬಹುದು. ನಿಮ್ಮ ಕೌಟುಂಬಿಕ ಸಮಸ್ಯೆಯಲ್ಲಿ ನಿವಾರಣೆ ಮಾಡಿಕೊಳ್ಳಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಲವು ವಿಚಾರಗಳಲ್ಲಿ ಧನಾತ್ಮಕವಾಗಿರಲಿದೆ. ಆಪ್ತರೊಬ್ಬರಿಂದ ನೀವು ಹಣಕಾಸಿನ ಬೆಂಬಲ ಕೋರಿದ್ದರೆ ಫಲಿತಾಂಶ ಧನಾತ್ಮಕವಾಗುತ್ತದೆ. ಅವಿವಾಹಿತರು ಕೆಲಸ ಅರಸುತ್ತಿದ್ದರೆ ಅವಕಾಶಗಳು ಒಲಿದುಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಬಹಳ ಅನುಕೂಲಕರ ದಿನ. ಕೆಲಸಗಳಲ್ಲಿ ಇಷ್ಟ ದಿನ ಇದ್ದ ಅಡೆತಡೆ ನಿವಾರಣೆಯಾಗಲಿದೆ. ಆರೋಗ್ಯ ಸಂಬಂಧವಾಗಿ ಹೆಚ್ಚು ಖರ್ಚು ಮಾಡಬೇಕಾತ್ತದೆ. ಆರ್ಥಿಕ ವಿಚಾರದಲ್ಲಿ ಹೊಸ ದಿಕ್ಕು ಸಿಗಬಹುದು. ಇದರಿಂದ ನೀವು ಕಳೆದುಕೊಂಡ ಹಣ ಮರಳಿ ಪಡೆಯಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಮಿಶ್ರ ಫಲ. ಕಲಸ ಸಂಬಂಧವಾಗಿ ಓಡಾಟಗಳಿವೆ. ನಿಮ್ಮ ದಾಂಪತ್ಯ ವಿಚಾರವಾಗಿ ಸಂತೋಷಕರ ದಿನ. ಮನೆಗಾಗಿ ನೀವು ಖರ್ಚು ಮಾಡುತ್ತೀರಿ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ದೈನಂದಿನ ಕೆಲಸಗಳಲ್ಲಿ ಸವಾಲುಗಳು ಎದುರಾಗಬಹುದು. ಆಪ್ತರೊಬ್ಬರಿಗೆ ನಿಮ್ಮಿಂದಾಗಿ ಹಣಕಾಸಿನ ನೆರವು ಸಿಗಬಹುದು. ದೂರ ಪ್ರಯಾಣಗಳ ಮಾಡುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಈ ಸಮಯ ಬಹಳ ಅನುಕೂಲವಾಗಿಲಿದೆ. ನಿಮ್ಮ ಹಿಂದಿನ ಸಾಲ ಮರುಪಾವತಿಯಾಗಬಹುದು. ಸ್ನೇಹಿತರಿಂದ ನಿಮಗೆ ಶುಭ ಸುದ್ದಿ ಬರಬಹುದು. ವಾಹನ ನಂಬಿ ಬದುಕುವರರಿಗೆ ಉತ್ತಮ ದಿನವಾಗಲಿದೆ. ವ್ಯಾಪಾರಿಗಳಿಗೂ ಇದು ಶುಭ ಫಲದ ದಿನ.
ಧನು ರಾಶಿ
ಧನು ರಾಶಿಯ ಜನರಿಗೆ ಸಮಸ್ಯೆಯ ದಿನ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿನ ಕಂಟಕ ಹೆಚ್ಚಾಗಬಹುದು. ಸಾಲದ ಪ್ರಮಾಣ ಏರಿಕೆ ಸಂಭವ. ಗೃಹಿಣಿಯರಲ್ಲಿ ಹೆಚ್ಚು ಖರ್ಚು ಮಾಡಬೇಕಾಗಿ ಬರಬಹುದು. ಆರೋಗ್ಯದ ಕಡೆ ಗಮನವಿಡುವುದು ಮುಖ್ಯ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ವ್ಯಾಪಾರಿಗಳು ದಿನದ ಆರಂಭದಲ್ಲಿ ಒತ್ತಡ ಎದುರು ನೋಡಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಾಗುತ್ತಿದೆ. ಪ್ರಯಾಣಗಳು ನೀವು ಅಂದುಕೊಂಡ ಫಲಿತಾಂಶ ತರಲಿವೆ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಅನುಕೂಲಕರ ದಿನವಾಗಿರಲಿದೆ. ನಿಮ್ಮ ಒತ್ತಡದ ಕೆಲಸದ ನಡುವೆಯೂ ನಿಮ್ಮಲ್ಲಿ ನೆಮ್ಮದಿ ಇರಲಿದೆ. ವಾಹನ ಸವಾರರು ಲಾಭ ಮಾಡುವ ದಿನ. ಸ್ವಂತ ಉದ್ಯಮಿಗಳು, ವ್ಯಾಪಾರಿಗಳು ಧನಾತ್ಮಕವಾಗಿ ದಿನದಂದು ಕಾಣಿಸುವರು.
ಮೀನ ರಾಶಿ
ನಿಮ್ಮ ಹೂಡಿಕೆ, ಉಳಿತಾಯ ದುಪ್ಪಟ್ಟಾಗಬಹುದು. ಹಾಗೆ ನಿಮ್ಮ ಪ್ರಯಾಣದಲ್ಲಿನ ಫಲಿತಾಂಶಗಳು ನಿಮಗೆ ಶುಭಕರವಾಗುತ್ತವೆ. ಹಲವು ಕೆಲಸಗಳು ಅಂದುಕೊಂಡಂತೆ ನೆರವೇರಲಿದೆ. ಆಪ್ತರ ಸಹಕಾರದಿಂದ ನಿಮ್ಮ ಕೆಲಸಗಳಲ್ಲಿ ಶುಭವಾಗಲಿದೆ.



Click it and Unblock the Notifications