Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Dina Bhavishya: ಸೆಪ್ಟೆಂಬರ್ 07ರ ಭಾನುವಾರ ಯಾರಿಗೆ ಸಂಕಷ್ಟ ದಿನ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 076ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಲ್ಲಿ ಇಂದು ಬಹಳ ಅನುಕೂಲಕರ ದಿನವಾಗುತ್ತಿದೆ, ನಿಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರವಾಸ ತೆರಳುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯುವ ದಿನ. ರಿಯಲ್ ಎಸ್ಟೇಟ್, ಆಸ್ತಿ ವಿಚಾರವಾಗಿ ನಿಮಗೆ ಶುಭಕರ ದಿನವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳು ಇಂದು ಅಡ್ಡಿಗಳಿಂದ ಕೂಡಿರಬಹುದು. ಅನೇಕರಲ್ಲಿ ಇಂದು ಖರ್ಚು ಹೆಚ್ಚಾಗಬಹುದು. ಸಮಸ್ಯೆಗಳಿಗೆ ಪರಿಹಾರ ಪಡೆಯಲು ನೀವು ಮತ್ತೊಬ್ಬ ಸಲಹೆ ಪಡೆಯಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಮಿಶ್ರ ಫಲವಿದೆ. ನಿಮ್ಮ ಕೆಲಸ ಸಂಬಂಧವಾಗಿ ದೂರ ಪ್ರಯಾಣಗಳ ಮಾಡಬಹುದು. ನಿಮ್ಮಲ್ಲಿ ದೊಡ್ಡ ಕೆಲಸಗಳ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಸಭೆ ಸಮಾರಂಭದಲ್ಲಿ ನೀವು ಭಾಗಿಯಾಗುವ ನಿರೀಕ್ಷೆ ಇದೆ. ವಾಹನ ಸವಾರರು ಎಚ್ಚರಿಕೆ ವಹಿಸಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಇಂದು ಉತ್ತಮ ದಿನವಾಗುತ್ತಿದೆ. ಗೃಹಿಣಿಯರ ಬಹು ದಿನದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತಿದೆ. ಹಾಗೆ ನೀವು ಮನೆಯವರಲ್ಲಿ ಹಣದ ಬೇಡಿಕೆ ಇಟ್ಟಿದ್ದರೆ ಈ ದಿನ ನೆರವೇರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಅನುಕೂಲಕರ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಾಗುತ್ತಿದೆ. ನಿಮ್ಮ ಹಣಕಾಸು ವಿಚಾರಗಳು ಸುಗಮವಾಗಿ ನೆರವೇರಲಿದೆ. ಆಪ್ತರೊಬ್ಬರ ದೂರವಾಣಿ ಕರೆಯು ನಿಮ್ಮಲ್ಲಿ ಸಂತಸ ತರಬಹುದು. ನಿಮ್ಮಿಂದ ಇತರರಿಗೆ ಸಹಾಯ ಆಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಈ ಹಿಂದೆ ಇದ್ದ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಪ್ರಯಾಣಗಳ ಮಾಡುವಿರಿ. ಪೋಷಕರ ಆರೋಗ್ಯದಲ್ಲಿ ಏರುಪೇರು ಸಂಭವವಿದೆ. ದೀರ್ಘಕಾಲದ ಅನಾರೋಗ್ಯ ಸಂಬಂಧ ಆಸ್ಪತ್ರೆ ಭೇಟಿ ಮಾಡಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳು ಇರಬಹುದು. ನಿಮ್ಮ ದೈನಂದಿನ ಕೆಲಸದಿಂದ ವಿಶ್ರಾಂತಿ ಪಡೆಯಿರಿ. ಹಣಕಾಸು ಸ್ಥಿತಿ ಸುಧಾರಿಸುವ ಬದಲಾಗಿ ಮತ್ತಷ್ಟು ಬಿಗಡಾಯಿಸಬಹುದು. ವ್ಯಾಪಾರಿಗಳಿಗೆ ನಷ್ಟದ ದಿನ ಎನ್ನಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿಗೆ ಇಂದು ಬಹಳ ಅನುಕೂಲ. ನೀವು ಅಂದುಕೊಂಡಂತೆ ಕೆಲಸಗಳು ನಡೆಯಲಿವೆ. ಟೆಂಡರ್ ಕೆಲಸ ನಿರ್ವಹಿಸುವ ಮಂದಿಗೆ ಬಹಳ ಉತ್ತಮ ದಿನ. ಸವಾಲುಗಳ ಎದುರಿಸುಲು ನೀವು ಬಹಳ ಸಿದ್ದರಾಗಬೇಕಿದೆ. ಆಸ್ಪತ್ರೆ ಸಂಬಂಧ ಖರ್ಚು ಇರಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಮಿಶ್ರ ಫಲ. ನಿಮ್ಮ ಉಳಿತಾಯ ಹೆಚ್ಚಳವಾದರು ಅದರಿಂದ ತೃಪ್ತಿ ಇರದೆ ಇರಬಹುದು. ಆಧ್ಯಾತ್ಮಿಕ ವಿಚಾರಗಲ್ಲಿ ಬಲವಾಗುತ್ತೀರಿ. ಮನೆಯಿಂದ ಆದಷ್ಟು ಸಮಯ ಹೊರಗೆ ಉಳಿಯದಂತೆ ನೋಡಿಕೊಳ್ಳಿ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಮಿಶ್ರ ಫಲ. ಆರ್ಥಿಕ ವಿಚಾರದಲ್ಲಿ ನೀವು ಅಂದುಕೊಂಡ ಕೆಲಸ ನಡೆಯದೆ ಇರಬಹುದು. ಕಚೇರಿ ಕೆಲಸ ಸಂಬಂಧವಾಗಿ ನೀವು ಪ್ರಯಾಣ ಮಾಡಬಹುದು. ಸಂಬಂಧಿಕರ ಭೇಟಿಯಾಗುತ್ತೀರಿ. ಮನೆ ಕಟ್ಟುತ್ತಿದ್ದ ಮಂದಿಗೆ ಹಣದ ಸಮಸ್ಯೆ ಎದುರಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಸಮಸ್ಯೆಗಳು ಇರಬಹುದು. ಅನಾರೋಗ್ಯ ವಿಚಾದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಆಪ್ತರೊಬ್ಬರಿಂದ ಹಣಕಾಸು ಸಂಬಂಧ ದೊಡ್ಡ ಲಾಭವಿದೆ. ಆದ್ರೆ ಸಾಲ ಮರುಪಾವತಿ ಸಂಬಂಧ ಒತ್ತಡ ಬರಬಹುದು.
ಮೀನ ರಾಶಿ
ಮೀನ ರಾಶಿಯ ಗೃಹಿಣಿಯರಲ್ಲಿ ಇಂದು ಕಷ್ಟದ ದಿನವಾಗುತ್ತಿದೆ. ನಿಮ್ಮ ಉಳಿತಾಯದಲ್ಲಿ ದಿಕ್ಕು ತಪ್ಪಬಹುದು. ಪರಿಚಯಸ್ಥರಿಂದ ಹಣಕಾಸು ಸಂಬಂಧ ಸಮಸ್ಯೆ ಬರಬಹುದು. ಮನೆಯಲ್ಲಿ ಶಾಂತಿ ಇರಲಿದೆ. ವ್ಯಾಪಾರಿಗಳಿಗೆ ದಿನದ ಅಂತ್ಯದಲ್ಲಿ ಶುಭ ಸುದ್ದಿ ಇದೆ.



Click it and Unblock the Notifications