Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
Dina Bhavishya: ಸೆಪ್ಟೆಂಬರ್ 04ರ ಗುರುವಾರ ಆರ್ಥಿಕ ಲಾಭ ಯಾರಿಗೆ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 04ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಲ್ಲಿ ಇಂದು ಬಹಳ ಅನುಕೂಲಕರ ದಿನವಿದೆ. ನೀವು ದೊಡ್ಡ ಆರೋಪವೊಂದರಿಂದ ಮುಕ್ತರಾಗುತ್ತೀರಿ. ಇದು ನಿಮ್ಮಲ್ಲಿ ಮಾನಸಿಕ ನೆಮ್ಮದಿ ತರಲು ಕಾರಣವಾಗಲಿದೆ. ಹೋಟೆಲ್ , ಕ್ಯಾಂಟೀನ್ ನಡೆಸುವವರಿಗೆ ಉತ್ತಮ ಸಮಯ ಆಗಿರಲಿದೆ. ಸಂಬಂಧಗಳಲ್ಲಿ ನಿಮಗೆ ಉತ್ತಮ ದಿನ. ಕಚೇರಿ ಕೆಲಸಗಳು ಸಲೀಸಾಗಿ ನಡೆಯಲಿವೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಇಂದು ಮಿಶ್ರ ಫಲದ ದಿನ. ಆರ್ಥಿಕ ಸ್ಥಿತಿ ಅಥವಾ ಹಣಕಾಸು ವಿಚಾರವಾಗಿ ಒತ್ತಡ ಇರಲಿದೆ. ಆದ್ರೆ ಅದನ್ನು ನಿಭಾಯಿಸುವುದು ಉತ್ತಮ. ಅನೇಕರಿಗೆ ಈ ದಿನದಂದು ಅನಾರೋಗ್ಯ ಕಾಡಬಹುದು. ಅದು ಕೂಡ ಖರ್ಚಿಗೆ ಕಾರಣವಾಗಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರು ಓಡಾಟದಲ್ಲಿ ಕಳೆಯಬಹುದು. ಅದರಲ್ಲೂ ಹೆಚ್ಚಿನವರ ಪ್ರಯಾಣಗಳು ಮಿಶ್ರಫಲದಿಂದ ತುಂಬಿರಲಿದೆ. ದೇವಾಲಯ ಭೇಟಿ ಅಥವಾ ಆಧ್ಯಾತ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗುತ್ತೀರಿ. ಮನೆಯ ವಿಚಾರವಾಗಿ ಖರ್ಚು ಸಹ ಇರಬಹುದು.
ಕರ್ಕ ರಾಶಿ
ನಿಮಗಿಂದು ಹಲವು ರೀತಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಆಪ್ತರೊಬ್ಬರಿಂದ ಹಣಕಾಸು ಸಂಬಂಧವಾಗಿ ನಿಮ್ಮ ಮೇಲೆ ಒತ್ತಡಗಳು ಬರಬಹುದು. ಹಲವು ರೀತಿಯ ಕೆಲಸಗಳಲ್ಲಿ ಅಡೆತಡೆ ನೋಡಬಹುದು. ಬೇರೆಯವರಿಗೆ ಬೇಕಾದ ವಸ್ತುವೊಂದನ್ನು ನೀವು ಪಡೆದು ಅವರಿಗೆ ನೀಡಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಇಂದು ಓಡಾಟದ ದಿನ. ನಿಮ್ಮ ಹಲವು ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಸಮಯ. ದೀರ್ಘಕಾಲದ ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ಬಗೆಹರಿಯುವ ಮುನ್ಸೂಚನೆ ಸಿಗಲಿದೆ. ಮನೆಯಲ್ಲಿ ಅಶಾಂತಿ ಇರಬಹುದು. ಪ್ರಯಾಣ ಮಾಡುವಿರಿ.
ಕನ್ಯಾ ರಾಶಿ
ಕೆಲಸದ ಸ್ಥಳದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿ ಹಾಗೂ ಒತ್ತಡ ಎದುರಾಗಬಹುದು. ಮಕ್ಕಳ ಕುರಿತಾದ ವಿಚಾರವಾಗಿ ಎಚ್ಚರಿಕೆ ಹಾಗೂ ವಿಶೇಷ ಕಾಳಜಿ ಇಡಿ. ಹಲವು ಅಪಾಯಕಾರಿ ಕೆಲಸದಲ್ಲಿ ಭಾಗಿಯಾಗುವವರು ಬಹಳ ಎಚ್ಚರಿಕೆ ವಹಿಸಬೇಕಿದೆ. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದಿರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಉತ್ತಮ ದಿನ. ನಿಮ್ಮ ಸಾಲ ಮರುಪಾವತಿಗೆ ನೀವು ಮುಂದಾಗಬಹುದು. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ಇಡಿ. ಗೃಹಿಣಿಯರು ಅಧಿಕ ಲಾಭ ನೋಡಬಹುದು. ದಿನಕೂಲಿ ಕಾರ್ಮಿಕರಲ್ಲಿ ಹಣಕಾಸಿನ ಲಾಭ ನೋಡುವ ದಿನ. ನಿಮ್ಮ ಶ್ರಮದಾಯಕ ಕೆಲಸಗಳಿಗೆ ಪ್ರತಿಫಲಸಿಗಲಿದೆ.
ವೃಶ್ಚಿಕ ರಾಶಿ
ನಿಮಗಿಂದು ಸಮಸ್ಯೆಗಳು ಎದುರಾಗುವ ದಿನವಾಗಬಹುದು. ನಿಮ್ಮೆಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಲು ಮುಂದಾಗಿ. ಸಣ್ಣ ಪುಟ್ಟ ಹಣಕಾಸು ಸಂಬಂಧಿ ಸಮಸ್ಯೆಗಳನ್ನು ಕೂಡ ನಿರ್ಲಕ್ಷ್ಯ ಮಾಡಬೇಡಿ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ನೀವು ಅಂದುಕೊಂಡಂತೆ ಫಲಿತಾಂಶ ಪಡೆಯಬಹುದು. ಸರ್ಕಾರಿ ಕೆಲಸ ಕಾರ್ಯಗಳಿಗೆ ಈ ದಿನ ಉತ್ತಮ. ಸ್ವಂತ ಉದ್ಯೋಗ ಮಾಡುವವರಿಗೆ ಸಾಮಾನ್ಯ ದಿನವಾಗಿದೆ.
ಮಕರ ರಾಶಿ
ನಿಮಗಿಂದು ಮಿಶ್ರ ಫಲದ ದಿನ. ಆದಾಯಕ್ಕಿಂತ ಖರ್ಚು ಹೆಚ್ಚಿರಬಹುದು. ಕಚೇರಿ ಕೆಲಸಗಳಲ್ಲಿ ಕೊಂಚ ಹಿನ್ನಡೆ ಇರಬಹುದು. ವಿದ್ಯಾರ್ಥಿಗಳಿಗೆ ಹಾಗೆ ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು. ಅವಿವಾಹಿತರಲ್ಲಿ ಅನಗತ್ಯ ಖರ್ಚು ಕಾಡಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಸಾಮಾನ್ಯ ದಿನಾಗಿರಲಿದೆ. ನಿಮ್ಮ ಬಹುದಿನದ ಕೆಲಸವೊಂದನ್ನು ಮಾಡಿ ಮುಗಿಸುವಿರಿ. ಯಾರಿಂದಲೂ ಹಣ ಪಡೆಯಲು ಮುಂದಾಗಬೇಡಿ. ಸ್ನೇಹಿತರಿಗೆ ಅಥವಾ ಪರಿಚಯಸ್ಥರಿಗೆ ಬೇರೆ ಅವರಿಂದ ಹಣ ಕೊಡಿಸುವ ಕಾರ್ಯಕ್ಕೂ ಮುಂದಾಗಬೇಡಿ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಮಿಶ್ರ ಫಲ ಅನುಭವಿಸುವ ದಿನ. ನಿಮ್ಮ ಕೆಲಸಗಳಿಗೆ ಅಡ್ಡಿ ಆತಂಕ ಎದುರಾಗಬಹುದು. ಬಹುಮುಖ್ಯ ಕೆಲಸವೊಂದನ್ನು ನೀವು ಮುಗಿಸಲು ಸಾಧ್ಯವಾಗದೆ ಇರಬಹುದು. ಆರೋಗ್ಯದ ಕಡೆ ಗಮನವಿಡಿ. ಪ್ರಯಾಣ ಮಾಡಲು ತಯಾರಿ ಮಾಡಿಕೊಳ್ಳುವಿರಿ.



Click it and Unblock the Notifications











