Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಸೆಪ್ಟೆಂಬರ್ 03ರ ಬುಧವಾರ ಕಾದಿದೆ ಇವರಿಗೆ ಧನಲಾಭ
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 03ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಬಹಳ ಅನುಕೂಲಕರ ದಿನ ಆಗಿರಲಿದೆ. ಮಧ್ಯದಲ್ಲಿ ಬಿಟ್ಟ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಬಹುಮುಖ್ಯ ಕೆಲಸವೊಂದಕ್ಕೆ ನಿಮ್ಮಲ್ಲಿ ಹಣಕಾಸು ಕೊರತೆ ಇದ್ದರೆ ಅದು ಕೂಡ ನಿವಾರಣೆಯಾಗಲಿದೆ. ಹಲವು ಕೆಲಸಗಳು ಅಂದುಕೊಂಡಂತೆ ನಡೆಯಲಿದೆ.
ವೃಷಭ ರಾಶಿ
ಇಂದು ನೀವು ಬಹಳ ಪ್ರಯಾಣ ಮಾಡಬೇಕಾಗಿ ಬರಬಹುದು. ಆಪ್ತರೊಬ್ಬರಿಗೆ ನೀವು ಹಣಕಾಸು ಸಹಾಯ ಮಾಡುವಿರಿ. ಮನೆಯ ವಾತಾವರಣದಲ್ಲಿನ ಒತ್ತಡವೊಂದು ನಿವಾರಣೆ ಆಗಲಿದೆ. ಯಾರಿಂದಾದರು ಸಾಲ ಪಡೆಯುವ ಆಲೋಚನೆ ಇದ್ದರೆ ಮುಂದೂಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ಅನುಕೂಲಕರ ವಾತಾವರಣ ಇರಲಿದೆ. ಕುಟುಂಬ ಸದಸ್ಯರೊಬ್ಬರ ಸಮಸ್ಯೆಯನ್ನು ನೀವು ನಿವಾರಣೆ ಮಾಡಲಿದ್ದೀರಿ. ವ್ಯಾಪಾರಿಗಳಿಗೆ ಲಾಭ ತರುವ ದಿನ. ಕಚೇರಿ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿದೆ. ಎಲ್ಲರೊಂದಿಗೆ ಇಂದು ಬೆರೆಯುವುದರಿಂದ ನಿಮ್ಮಲ್ಲಿ ಹೊಸತನ ಮೂಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಉತ್ತಮ ದಿನ. ನಿಮ್ಮ ವಾಹನ ಸಂಬಂಧಿ ಸಮಸ್ಯೆ ದೂರಾಗಲಿದೆ. ಹಲವು ದಿನದಿಂದ ಮಾಡಲು ಪ್ರಯತ್ನಿಸಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ಅಪರಿಚಿತರ ಭೇಟಿಯಿಂದ ಗೊಂದಲಗಳು ಇರಬಹುದು. ಕೆಲಸದ ವಿಚಾರದಲ್ಲಿ ಒತ್ತಡ ನಿವಾರಣೆಗೆ ಮಾರ್ಗವಿದೆ.
ಸಿಂಹ ರಾಶಿ
ನಿಮ್ಮ ಬಹಳ ದಿನದ ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ. ಅನೇಕರಲ್ಲಿ ಇಂದು ಪ್ರಯಾಣ ಮಾಡುವ ದಿನ. ಆಪ್ತರೊಬ್ಬರಿಂದ ಹಣ ನಿಮಗೆ ಬರಲಿದೆ. ಉಳಿತಾಯ ಹೆಚ್ಚಾಗಲಿದೆ. ಅನಗತ್ಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಕಬ್ಬಿಣ ಕೆಲಸಗಾರರಿಗೆ ಇಂದು ಸವಾಲಿನ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ದಿನದ ಆರಂಭ ಪ್ರಯಾಣದಲ್ಲಿ ತೊಡಗಬೇಕಿದೆ. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದಿರಿ. ಹೊಸ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ದಾಂಪತ್ಯ ವಿವಾರವಾಗಿಯೂ ನಿಮಗೆ ಉತ್ತಮ ದಿನ. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಸಬಹುದು. ನಿಮ್ಮ ಹಲವು ಕೆಲಸಗಳ ಸಂಬಂಧವಾಗಿ ಇಂದು ಮಾಡುವ ಪ್ರಯಾಣ ಸುಖಕರವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ದೊಡ್ಡ ಸವಾಲುಗಳಿವೆ. ನಿಮ್ಮ ಖರ್ಚುಗಳ ಕಾರಣದಿಂದಾಗಿ ಮುಂದಿನ ಹಣಕಾಸು ದಿನಗಳ ಕುರಿತ ಚಿಂತೆ ಕಾಡಬಹುದು. ಆಪ್ತರೊಬ್ಬರಿಗೆ ನೀಡಿದ್ದ ಹಣ ಮರಳಿ ಪಡೆಯುವ ಯತ್ನ ಮಾಡಬಹುದು. ತಾಳ್ಮೆಯಿಂದ ವ್ಯವಹಾರದಲ್ಲಿ ಭಾಗಿಯಾಗಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಮಿಶ್ರ ಫಲ ನೋಡುವರು. ನಿಮ್ಮ ಒಂದಿಷ್ಟು ಸಮಯ ಮನೆಯಿಂದ ಹೊರಗೆ ಕಳೆಯುತ್ತೀರಿ. ಬೇರೆಯವರಿಗೆ ನೀಡಿದ ವಸ್ತುವೊಂದನ್ನು ಮರಳಿ ಪಡೆಯಬಹುದು. ನಿಮ್ಮ ಅನೇಕ ವಿಚಾರದಲ್ಲಿ ಧನಾತ್ಮಕ ದಿನವಾಗಬಹುದು.
ಧನು ರಾಶಿ
ಧನು ರಾಶಿಯವರು ಈ ದಿನ ನಿಮ್ಮ ಹಣಕಾಸು ವಿಚಾರದಲ್ಲಿ ಧನಾತ್ಮಕ ದಿನ. ದೈನಂದಿನ ಕೆಲಸ ಸಂಬಂಧವಾಗಿ ನೀವು ಪ್ರಯಾಣ ಮಾಡುವಿರಿ. ಇದರಲ್ಲಿ ಯಶಸ್ವಿಯಾಗುತ್ತೀರಿ. ಮಾತುಗಳ ನೀಡುವ ಮುನ್ನ ಆಲೋಚಿಸಿ. ವ್ಯಾಪಾರಿಗಳಿಗೆ ಉತ್ತಮ ದಿನ.
ಮಕರ ರಾಶಿ
ಮಕರ ರಾಶಿಯವರು ಇಂದು ಸಮಸ್ಯೆಗಳ ಎದುರಿಸಬಹುದು. ಸಾಲ ಮರುಪಾವತಿಯ ಒತ್ತಡ ಬರಬಹುದು. ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ. ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಿದೆ. ಆಪ್ತರೊಬ್ಬರ ಆಗಮನವು ನಿಮ್ಮಲ್ಲಿ ಹಣಕಾಸು ಕುರಿತಾದ ಒತ್ತಡಕ್ಕೆ ಕಾರಣವಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಈ ದಿನ ಸಾಮಾನ್ಯವಾಗಿರಲಿದೆ. ಶುಭ ಕಾರ್ಯ ಸಂಬಂಧವಾಗಿ ನೀವು ಪ್ರಯಾಣಗಳ ಮಾಡಬಹುದು. ಮನೆಗಾಗಿ ಖರ್ಚು ಕೂಡ ಮಾಡುವಿರಿ. ಮನೆಯ ಸದಸ್ಯರೊಬ್ಬರ ಅನಾರೋಗ್ಯ ನಿಮಗೆ ಚಿಂತೆ ತರಬಹುದು. ಸ್ನೇಹಿತರ ಭೇಟಿ ಆಗುವಿರಿ.
ಮೀನ ರಾಶಿ
ಇಂದು ನಿಮಗೆ ಬಹಳ ಶ್ರಮದಾಯಕ ದಿನವಾಗಲಿದೆ. ನಿಮ್ಮ ಕೆಲಸಗಳಲ್ಲಿ ನಿಧಾನಗತಿ ನೋಡಬಹುದು. ಖರ್ಚುಗಳ ಮೇಲೆ ನಿಗಾ ಇಡಿ. ದಾಂಪತ್ಯ ವಿಚಾರವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಹುಡುಕಿ ಬರಬಹುದು.



Click it and Unblock the Notifications




