Dina Bhavishya: ಸೆಪ್ಟೆಂಬರ್ 02ರ ಮಂಗಳವಾರ ಯಾರಿಗೆ ಅದೃಷ್ಟ?

ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 02ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಉತ್ತಮ ದಿನವಾಗಿರಲಿದೆ. ನಿಮ್ಮ ಅನೇಕ ಕೆಲಸಗಳು ನೀವು ಅಂದುಕೊಂಡಿರುವ ಸಮಯಕ್ಕೆ ಮುಗಿಯಲಿವೆ. ಅನೇಕರಲ್ಲಿ ಇಂದು ಸಮಸ್ಯೆಗಳು ಎದುರಾದರು ಅದನ್ನು ಜಾಗೃತವಾಗಿ ಬಗೆಹರಿಸಿಕೊಳ್ಳಿ. ನಿಮ್ಮ ಆರ್ಥಿಕ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳಲು ಮುಂದಾಗಬೇಡಿ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಹಲವು ವಿಚಾರದಲ್ಲಿ ಇಂದು ಯಶಸ್ಸು ಇರಲಿದೆ. ಅನೇಕರಲ್ಲಿ ಅನಾರೋಗ್ಯ ಕಾಡಬಹುದು, ಆದ್ರೆ ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆಗುವುದಿಲ್ಲ. ನಿಮ್ಮ ಮನೆಯಲ್ಲಿ ಶಾಂತಿ ಇರಲಿದೆ.

September-02-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಇಂದು ಮಿಶ್ರಫಲವಿದೆ. ನಿಮ್ಮ ಬಹಳ ಹಿಂದಿನ ಆರ್ಥಿಕ ಸಮಸ್ಯೆಯೊಂದು ಮತ್ತೆ ಕಾಡಬಹುದು. ಅಪರಿಚಿತರ ಬಳಿ ಹಣಕಾಸಿನ ವ್ಯವಹಾರ ಮಾಡದೆ ಇರುವುದು ಉತ್ತಮ.

ಕರ್ಕ ರಾಶಿ

ಕರ್ಕ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳಿಂದ ತುಂಬಿದ ದಿನವಾಗಬಹುದು, ನಿಮ್ಮ ಹಣಕಾಸು ವಿಚಾರದಲ್ಲಿ ಒತ್ತಡ ಇರಲಿದೆ. ಸಾಲ ಮರುಪಾವತಿಯಾದರು ಒತ್ತಡ ಇರಲಿದೆ. ಆಪ್ತರೊಬ್ಬರ ಬಳಿ ನಿಮ್ಮ ವಸ್ತು ನೀಡಬೇಕಾಗಿ ಬರಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಹಲವು ಕೆಲಗಳಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಪ್ರಶಂಸೆಯ ಮಾತುಗಳ ಕೇಳಬಹುದು. ಸ್ನೇಹಿತರಿಂದ ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿ ಜನರಲ್ಲಿ ಇಂದು ಸಮಸ್ಯೆಗಳು ಬರಬಹುದು. ನೀವು ಓಡಾಟದಲ್ಲಿ ಹೆಚ್ಚು ಸಮಯ ಕಳೆಯಬಹುದು. ಬಹುದಿನದಿಂದ ಬಯಸಿದಂತಹ ವಸ್ತುಗಳನ್ನು ಪಡೆಯಬಹುದು. ಮನೆಯ ಸದಸ್ಯರೊಬ್ಬರ ಆರೋಗ್ಯದಲ್ಲಿ ಏರುಪೇರು ಸಂಭವವಿದೆ. ವ್ಯಾಪಾರಿ ವರ್ಗಕ್ಕೆ ಈ ದಿನ ಮಿಶ್ರ ಫಲ ತರಲಿದೆ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಇಂದು ಹಲವು ರೀತಿ ಶುಭವಿದೆ. ನಿಮ್ಮ ಬಹಳ ದಿನದ ಪ್ರಯಾಣವು ಫಲ ನೀಡಲಿದೆ. ದಾಂಪತ್ಯ ವಿಚಾರದಲ್ಲಿ ಫಲ ನೀಡಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಕಚೇರಿ ವಿಚಾರದಲ್ಲಿ ಶುಭವಿದೆ. ಮನೆಗೆ ನೀವು ಯಾವುದಾದರು ವಸ್ತು ಖರೀದಿಸಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯ ಅವಕಾಶವನ್ನು ಕಳೆದುಕೊಳ್ಳಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಪ್ರಯಾಣ ಮಾಡಬೇಕಾಗಿ ಬರಬಹುದು. ಮಕ್ಕಳ ಕುರಿತ ಚಿಂತೆಯೊಂದು ಕಾಡಬಹುದು. ಆಪ್ತರೊಬ್ಬರಿಂದ ನೋವು ಉಂಟಾಗುವ ಸಾಧ್ಯತೆ ಇದೆ.

ಧನು ರಾಶಿ

ಧನು ರಾಶಿಯ ಜನರಲ್ಲಿ ಸಮಸ್ಯೆಗಳ ದಿನ. ನಿಮ್ಮ ಕೆಲಸದ ಸ್ಥಳದಲ್ಲಿ ಶ್ರಮ ಹಾಕಬೇಕಾಗುತ್ತದೆ. ವಾಹನ ಸಂಬಂಧವಾಗಿ ಖರ್ಚುಗಳು ಬರಬಹುದು. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಾಗಿರಲಿದೆ.

ಮಕರ ರಾಶಿ

ಮಕರ ರಾಶಿಯವರು ಉತ್ತಮ ಲಾಭ ಪಡೆಯಬಹುದು. ಮನದಲ್ಲಿದ್ದ ನೋವು, ಸಂಕಟವೊಂದು ದೂರಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಬರಬಹುದು. ಅಪಾಯಕಾರಿ ಕೆಲಸಗಳ ಮಾಡುವವರು ಎಚ್ಚರಿಕೆಯಿಂದ ಇರಬೇಕಿದೆ. ಪ್ರಯಾಣಗಳು ಸುಖಕರವಾಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಈ ದಿನ ಮಿಶ್ರ ಫಲ. ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಇರಬಹುದು. ಪ್ರವಾಸ ಸಂಬಂಧ ತಯಾರಿ ನಡೆಸಬಹುದು. ಸಮಸ್ಯೆಗಳಿಂದ ದೂರ ಓಡದೆ ಪರಿಹರಿಸುವುದು ಉತ್ತಮ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮಗೆ ಬರಬೇಕಿದ್ದ ಹಣಕಾಸು ಈ ದಿನ ಕೈ ಸೇರಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ನೋಡಬಹುದು, ಉಳಿತಾಯದ ಕಡೆ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ದಾಂಪತ್ಯದಲ್ಲಿ ಸುಖಕರ ದಿನ.

English summary

September-02-2025-daily-horoscope-prediction-for-12-zodiac-signs-in-kannada

Here is September 02 daily horoscope prediction for 12 zodiac signs read on...
Story first published: Tuesday, September 2, 2025, 5:01 [IST]
X
Desktop Bottom Promotion