Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
Dina Bhavishya: ಸೆಪ್ಟೆಂಬರ್ 01ರ ಸೋಮವಾರ ಯಾರಿಗೆ ಶುಭಕರ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 01ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಅನುಕೂಲಕರ ದಿನ. ನಿಮ್ಮ ಹಲವು ಕಲಸಗಳಲ್ಲಿ ಅಡೆತಡೆ ನೋಡಬಹುದು. ಅನೇಕರಲ್ಲಿ ಇಂದು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರಲಿದೆ. ಆಪ್ತರೊಬ್ಬರಿಂದ ಹಣಕಾಸಿಗೆ ಬೇಡಿಕೆ ಬರಬಹುದು.
ವೃಷಭ ರಾಶಿ
ನಿಮಗಿಂದು ಹಲವು ರೀತಿಯಲ್ಲಿ ಸಮಸ್ಯೆಗಳು ಬರಬಹುದು. ನಿಮ್ಮ ಹಲವು ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಮನಸ್ತಾಪ ಮೂಡಬಹುದು. ನಿಮ್ಮ ಕೆಲಸಗಳ ಸಂಬಂಧವಾಗಿ ಬೇರೆಯವರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ. ಅಗತ್ಯ ಕೆಲಸಗಳಿಗೆ ಹಣದ ಕೊರತೆ ನೋಡಬಹುದು. ಕೆಲಸದಲ್ಲಿನ ಒತ್ತಡದಿಂದ ನಿಮ್ಮಲ್ಲಿ ಅಶಾಂತಿ ಇರಬಹುದು. ಯಾರೊಂದಿಗೂ ದೊಡ್ಡ ವ್ಯವಹಾರ ಸಂಬಂಧವಾಗಿ ಮಾತುಕತೆ, ಒಪ್ಪಂದಕ್ಕೆ ಮುಂದಾಗಬೇಡಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಸಾಮಾನ್ಯ ದಿನವಾಗಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನ. ನಿಮ್ಮ ಬಹಳ ದಿನಗಳ ಶ್ರಮವು ಪ್ರತಿಫಲಕ್ಕೆ ಕಾರಣವಾಗಲಿದೆ. ಬೇರೆಯವರಿಗೆ ಹಣಕಾಸಿನ ನೆರವು ನೀಡುವ ಮುನ್ನ ಎಚ್ಚರಿಕೆಯಿಂದ ಇರುವುದು ಒಳಿತು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನ. ದಾಂಪತ್ಯ ಕಲಹವು ಮುಕ್ತಿಯಾಗಲಿದೆ. ವ್ಯಾಪಾರಿಗಳಿಗೆ ಇಂದು ಶ್ರಮದಾಯಕ ದಿನವಾಗುತ್ತದೆ. ಹೊಸ ಆದಾಯ ಮೂಲದಿಂದ ಹಣ ಬರಬಹುದು. ಆರ್ಥಿಕ ವಿಚಾರಗಳಲ್ಲಿ ನಿಮಗೆ ಸಂತೋಷದ ದಿನವಾಗುತ್ತದೆ. ಮನೆಯಲ್ಲಿ ಶಾಂತಿ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಅನೇಕ ಕೆಲಸಗಳನ್ನು ಉತ್ಸಾಹದಿಂದ ಪೂರೈಸುವಿರಿ. ಬಹುದೊಡ್ಡ ಜವಾಬ್ದಾರಿಯೊಂದನ್ನು ನಿಭಾಸುತ್ತೀರಿ. ಪ್ರಯಾಣ ಮಾಡುವಿರಿ. ನಿಮ್ಮ ಕೆಲಸಗಳಲ್ಲಿ ಲಾಭದಾಯಕ ಸಮಯ
ತುಲಾ ರಾಶಿ
ತುಲಾ ರಾಸಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ವ್ಯಾಪಾರದಲ್ಲಿ ಅತ್ಯುತ್ತಮ ಲಾಭ ನೋಡುವಿರಿ. ಅಪರಿಚಿತರ ಬಳಿ ಹಣಕಾಸು ವ್ಯವಹಾರ ಮಾಡದೆ ಇರುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಷಿಕ ರಾಶಿಯವರಿಗೆ ಅನುಕೂಲಕರ ದಿನ. ಉದ್ಯೋಗ ಬದಲಿಸುವ ಆಲೋಚನೆಯಲ್ಲಿದ್ದವರಿಗೆ ಅನುಕೂಲವಿದೆ. ಹೂಡಿಕೆಗಳಿಗಂದ ಲಾಭ ಪಡೆಯುವುದು ತಡವಾಗಬಹುದು ಆದ್ರೆ ಪ್ರಯತ್ನ ಮರೆಯಬೇಡಿ. ನಿಮ್ಮ ಸವಾಲಿನ ದಿನಗಳು ದೂರಾಗಬಹುದು. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಧನು ರಾಶಿ
ಧನು ರಾಶಿಯ ಮಂದಿಗೆ ಇಂದು ಸಮಸ್ಯೆಗಳ ದಿನ. ಪ್ರಯಾಣಗಳಲ್ಲಿ ಶುಭಕರ ದಿನ. ನೀವು ಹಣಕಾಸಿನ ಕುರಿಯಾಗಿ ಚಿಂತೆಯಲ್ಲಿದ್ದರೆ ಇಂದು ಸುಧಾರಣೆ ನೋಡಬಹುದು. ಆಪ್ತರೊಬ್ಬರಿಂದ ನಿಮಗೆ ಧನ ಸಹಾಯವಿದೆ.
ಮಕರ ರಾಶಿ
ಮಕರ ರಾಶಿಯವರಲ್ಲಿ ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇಂದು ನಿಮ್ಮ ವ್ಯವಹಾರಗಳು ಧನಾತ್ಮಕವಾಗಿ ಬದಲಾಗುತ್ತದೆ. ಸಂಬಂಧಿಕರ ಭೇಟಿಯಾಗುತ್ತೀರಿ. ಮಕ್ಕಳ ಕುರಿತಾದ ಚಿಂತೆಯು ಇಡೀ ದಿನ ನಿಮ್ಮನ್ನು ಕಾಡಬಹುದು.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಈ ಸವಾಲುಗಳಿವೆ. ಅಗತ್ಯ ಕೆಲಸಕ್ಕೆಂದು ಇಟ್ಟ ಹಣಕಾಸು ನಿಮ್ಮಿಂದ ದುಂದು ವೆಚ್ಚವಾಗಬಹುದು. ಅನೇಕರಲ್ಲಿ ಸವಾಲುಗಳು ಎದುರಾಗಬಹುದು, ಕೆಲಸ, ವೃತ್ತಿ, ಹಣಕಾಸು, ವೈವಾಹಿಕ ವಿಚಾರವಾಗಿ ಸವಾಲುಗಳಿವೆ. ಭವಿಷ್ಯದ ದಿನಗಳಿಗೆ ಸಂಬಂಧಿಸಿದಂತೆ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ನೆಮ್ಮದಿಯ ದಿನ ಎನ್ನಬಹುದು. ಕಷ್ಟಗಳನ್ನು ನಿವಾರಿಸಿಕೊಳ್ಳಲು ಇಂದು ಉತ್ತಮ ದಿನವಾಗಲಿದೆ. ನಿರುದ್ಯೋಗಿಗಳು ಇಂದು ಉದ್ಯೋಗ ಸಂಬಂಧವಾಗಿ ಅವಕಾಶಗಳ ಪಡೆಯಬಹುದು. ಪ್ರೀತಿ ವಿಚಾರದಲ್ಲಿ ಕಹಿ ದಿನವಾಗಿರಬಹುದು. ವೇತನ ಸಂಬಂಧಿ ಸಮಸ್ಯೆ ದೂರಾಗುವ ನಿರೀಕ್ಷೆ ಇದೆ.



Click it and Unblock the Notifications