Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೃಶ್ಚಿಕ ರಾಶಿ ಭವಿಷ್ಯ 2026: ಈ ವರ್ಷ ವೃಶ್ಚಿಕ ರಾಶಿಗಿದೆ ಧನಲಾಭ! ಕೆಲಸಗಳು ಸಲೀಸು!
2025ರಲ್ಲಿ ವೃಶ್ಚಿಕ ರಾಶಿ ಜನರಿಗೆ ಹಲವು ರೀತಿಯ ಶುಭ ಯೋಗಗಳು ಒಲಿದಿರುವುದು ಹಾಗೆ ಒಂದಿಷ್ಟು ಸಮಸ್ಯೆಗಳು ಎದುರಾಗಿದ್ದು ಕೂಡ ನಾವು ನೋಡಿದ್ದೆವು. ಹಾಗೆ ಈಗ ವರ್ಷ ಅಂತ್ಯವಾಗುತ್ತಾ ಬಂದಿದೆ. ಹಾಗೆ 2026ರಲ್ಲಿ ವೃಶ್ಚಿಕ ರಾಶಿಯವರಿಗೆ ಹಲವು ರೀತಿಯಲ್ಲಿ ಶುಭ ಹಾಗೂ ಅಶುಭ ಯೋಗಗಳು ಇರುವುದು ಸಹ ನೋಡಬಹುದು. ನಿಮ್ಮ ಗ್ರಹಗತಿಗಳ ಆಧಾರದ ಮೇಲೆ ಈ ವರ್ಷ ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲಗಳಿವೆ ಎಂಬುದನ್ನು ಹೇಳಬಹುದು.
ಜ್ಯೋತಿಷ್ಯದ ಪ್ರಕಾರ, 2026ರಲ್ಲಿ ವೃಶ್ಚಿಕ ರಾಶಿಯವರಿಗೆ ಮಿಶ್ರಫಲವಿದೆ. ನಿಮ್ಮ ಹತ್ತು ಹಲವು ಕೆಲಸಗಳಲ್ಲಿ ಧನಾತ್ಮಕ ವಿವಾರಗಳಿದ್ದರೆ ಮತ್ತಷ್ಟು ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಇರುವುದು ಸಹ ನೋಡಬಹುದು. ನಾವಿಂದು ವೃಶ್ಚಿಕ ರಾಶಿಯವರಿಗೆ ಯಾವೆಲ್ಲಾ ಲಾಭವಿದೆ ಹಾಗೆ ಯಾವ ರೀತಿಯಲ್ಲಿ ಸಮಸ್ಯೆಗಳು ಈ ವರ್ಷ ಕಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

2026ರ ಆರಂಭದಲ್ಲಿಯೇ ನಿಮಗೆ ಶುಭ ಸಮಾಚಾರಗಳು ಇರಲಿದೆ. ಹಾಗೆ ವರ್ಷದ ತುಂ ನಿಮ್ಮ ಆರ್ಥಿಕ ವಿಚಾರದಲ್ಲಿ, ಆರೋಗ್ಯ, ವ್ಯಾಪಾರ, ವ್ಯವಹಾರ ಹೂಡಿಕೆ, ದಾಂಪತ್ಯ, ಉದ್ಯೋಗ ಹಾಗೂ ವೃತ್ತಿ ಸಂಬಂಧವಾಗಿ ಯಾವೆಲ್ಲಾ ರೀತಿ ಅನುಕೂಲಗಳಿವೆ ಅನ್ನೋದನ್ನು ತಿಳಿದುಕೊಳ್ಳಿ.
ಜ್ಯೋತಿಷಿಗಳ ಪ್ರಕಾರ 2026 ನೇ ವರ್ಷವು ವೃಶ್ಚಿಕ ರಾಶಿಯವರಿಗೆ ಸವಾಲುಗಳಿಂದ ತುಂಬಿರಬಹುದು. ಮಂಗಳ ಗ್ರಹದ ಸ್ಥಾನವು ನಿಮ್ಮನ್ನು ಶಕ್ತಿಯುತ ಮತ್ತು ಕ್ರಿಯಾಶೀಲವಾಗಿರಿಸುತ್ತದೆ. ನಿಮ್ಮ ಬಹು ವರ್ಷದಿಂದ ಇದ್ದಂತಹ ಸಮಸ್ಯೆಗಳಿಗೂ ಈ ವರ್ಷ ಮುಕ್ತಿ ಪಡೆಯುವಂತಹ ಸಾಧ್ಯತೆಗಳು ಹೆಚ್ಚಾಗಿರಲಿದೆ. ಅದ್ರಲ್ಲೂ ಅವಿವಾಹಿತರಲ್ಲಿನ ಸಾಲದ ಸಮಸ್ಯೆಗಳ ಕುರಿತಾದ ನಿರ್ಧಾರಗಳು ಸರಿಯಾಗಿರಲಿದೆ.
ಆರ್ಥಿಕ ಲಾಭ ಮತ್ತು ಸುಧಾರಿತ ಆದಾಯದ ಸಾಧ್ಯತೆಗಳು ಇರುತ್ತವೆ, ಆದರೆ ಅನಿರೀಕ್ಷಿತ ವೆಚ್ಚಗಳು ಸಹ ಉದ್ಭವಿಸಬಹುದು. ಹೆಚ್ಚುವರಿಯಾಗಿ, ನೀವು ನಿಮ್ಮ ಸ್ವಂತ ಮನೆಯನ್ನು ಖರೀದಿಸುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ನಿಮ್ಮ ವ್ಯವಹಾರವೂ ಬೆಳೆಯುತ್ತದೆ. ಯಶಸ್ಸು ನಿಮ್ಮ ಹೃದಯಕ್ಕೆ ಸಂತೋಷವನ್ನು ತರುತ್ತದೆ. 2026 ನಿಮಗೆ ಸ್ವಯಂ ಪರಿವರ್ತನೆ ಮತ್ತು ಹೊಸ ದಿಕ್ಕಿನ ವರ್ಷವಾಗಿರುತ್ತದೆ. ನೀವು ನಿಮ್ಮ ಮಿತಿಗಳನ್ನು ಭೇದಿಸಿ ಜೀವನದಲ್ಲಿ ದೊಡ್ಡದನ್ನು ಸಾಧಿಸುವ ಹಾದಿಯಲ್ಲಿ ಸಾಗುತ್ತೀರಿ.
ಮಂಗಳ ಗ್ರಹವು ನಿಮ್ಮ ಆಡಳಿತಗಾರ, ಮತ್ತು ಈ ವರ್ಷ, ಅದರ ಉನ್ನತ ಸ್ಥಾನದಲ್ಲಿ, ಅದು ನಿಮಗೆ ಶಕ್ತಿ, ಆತ್ಮವಿಶ್ವಾಸ ಮತ್ತು ನಿರ್ಣಾಯಕತೆಯನ್ನು ನೀಡುತ್ತದೆ. ಹಾಗೆ ನಿಮ್ಮ ಹಲವು ಕೆಲಸಳನ್ನು ಅತ್ಯಂತ ಧನಾತ್ಮಕ ಆತ್ಮವಿಶ್ವಾಸದಿಂದ ಈ ವರ್ಷ ಮಾಡಿ ಮುಗಿಸುವಿರಿ. ನಿಮಗೆ ಬರಬೇಕಿದ್ದ ಬಹುದೊಡ್ಡ ಮೊತ್ತವೊಂದನ್ನು ನೀವು ಪಡೆಯಬಹುದು.
ಆರೋಗ್ಯ ದೃಷ್ಟಿಕೋನದಿಂದ ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಮಂಗಳನ ಸ್ಥಾನವು ನಿಮ್ಮನ್ನು ಚೈತನ್ಯಶೀಲವಾಗಿರಿಸುತ್ತದೆ. ಹಾಗೆ ಸಣ್ಣ ಪುಟ್ಟ ಏರಿಳಿತಗಳಿದ್ದರೂ ಕೂಡ ವರ್ಷದ ಬಹುತೇಕ ದಿನಗಳು ನಿಮಗೆ ಶುಭಕರವಾಗಿರಲಿದೆ. ಅಲ್ಲದೆ ದೊಡ್ಡ ಖರ್ಚುಗಳಿಂದ, ಆಸ್ಪತ್ರೆ ಓಡಾಟಗಳಿಂದಲೂ ಸಹ ಈ ವರ್ಷ ಮುಕ್ತಿ ಪಡೆಯುವ ಸಾಧ್ಯತೆ ಅಧಿಕವಾಗಿರಲಿದೆ. ಅಲ್ಲದೆ ದೈನಂದಿನ ಕೆಲಸ ಕಾರ್ಯಗಳಲ್ಲಿ ಬಹು ಸಮಯದಿಂದ ನಿಮಗೆ ಅಡ್ಡಿಯಾಗುತ್ತಿದ್ದ ಅನಾರೋಗ್ಯ ಸಮಸ್ಯೆಗಳಿಂದ ಸುಧಾರಣೆ ಪಡೆಯಬಹುದು.
ವೃಶ್ಚಿಕ ರಾಶಿಯವರಿಗಿರುವ ಸಮಸ್ಯೆಗಳೇನು?
2026ರಲ್ಲಿ ನಿಮ್ಮ ಹಣಕಾಸಿನ ವಿಚಾರಗಳಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಹಾಗೆ ಅವಿವಾಹಿತರಲ್ಲಿ ವಿವಾಹ ಸಂಬಂಧಿ ಅಡ್ಡಿಗಳು ಮುಂದುವರೆಯಬಹುದು. ಕುಟುಂಬದಲ್ಲಿದ್ದ ಹಣಕಾಸಿನ ಒತ್ತಡಗಳು ಸಹ ಮುಂದುವರೆಯುವ ಸಾಧ್ಯತೆ ಇದೆ. ದೊಡ್ಡ ಕೆಲಸಗಳನ್ನು ಮಾಡುವಾಗ ಅಥವಾ ವ್ಯವಹಾರ ಒಪ್ಪಂದಗಳಲ್ಲಿ ಈ ವರ್ಷ ನೀವು ಬಯಸಿದಂತಹ ಲಾಭ ಪಡೆಯುವುದು ಕಷ್ಟವಾಗಬಹುದು.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯನಿರ್ವಹಿಸುವ ಮೊದಲು ದಯವಿಟ್ಟು ಅರ್ಹ ವೃತ್ತಿಪರರನ್ನು ಸಂಪರ್ಕಿಸಿ.)



Click it and Unblock the Notifications











