Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
12 ತಿಂಗಳ ನಂತರ ವೃಶ್ಚಿಕ ರಾಶಿಗೆ ಬುಧ ಪ್ರವೇಶ: ಈ ರಾಶಿಯವರ ಅದೃಷ್ಟ ಜನರಿಗೆ ಒಲಿಯಲಿದೆ ಅದೃಷ್ಟ
ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ರಾಶಿಗಳ ಚಲನೆಯನ್ನು ಅತ್ಯಂತ ಪ್ರಮುಖ ವಿದ್ಯಮಾನ ಎಂಬುದಾಗಿ ಪರಿಗಣಿಸಲಾಗಿದೆ. ಅದ್ರಲ್ಲೂ ಕೆಲವು ಗ್ರಹಗಳು ದಶಕದ ಬಳಿಕ ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಚಲಿಸುವಾಗ ವಿಶೇಷ ಯೋಗಗಳ ರೂಪಿಸುತ್ತವೆ. ಅಂತಹ ಗ್ರಹಗಳಲ್ಲಿ ಬುಧನು ಕೂಡ ಒಬ್ಬ. ಬುಧ ಗ್ರಹದ ಸಂಚಾರವನ್ನು ದೊಡ್ಡ ಫಲ ತರುವ ವಿದ್ಯಮಾನ ಎಂದು ಹೇಳಲಾಗಿದೆ.
ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಬುಧವನ್ನು ಬುದ್ಧಿವಂತಿಕೆ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗೆ ಒಂದೇ ಗ್ರಹದಲ್ಲಿ ಬಹಳ ಕಡಿಮೆ ಸಮಯ ಚಲಿಸುಂತಹ ಗ್ರಹ ಕೂಡ ಬುಧನಾಗಿದ್ದಾನೆ. ಬುಧನು ಅಕ್ಟೋಬರ್ ತಿಂಗಳಲ್ಲಿ 2 ಬಾರಿ ತನ್ನ ರಾಶಿ ಬದಲಿಸುತ್ತಾನೆ.

ಬುಧ ಈ ರೀತಿ 2 ಬಾರಿ ತನ್ನ ರಾಶಿ ಬದಲಾಯಿಸುವುದು ದೊಡ್ಡ ಮಟ್ಟದಲ್ಲಿ ಶುಭ ತರಲಿದೆ. ಬುಧನು ಅಕ್ಟೋಬರ್ 24 ರಂದು ವೃಶ್ಚಿಕ ರಾಶಿ ಪ್ರವೇಶಿಸಲಿದ್ದಾರೆ. ಈ ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಆಗಿದ್ದಾನೆ. ಬುಧನು ವೃಶ್ಚಿಕ ರಾಶಿಗೆ ಪ್ರವೇಶಿಸಿದ ನಂತರ, ಅದರ ಪ್ರಭಾವವು ಎಲ್ಲಾ ರಾಶಿ ಜನೆ ಮೇಲೆಯೂ ಉಂಟಾಗುವುದು ನೋಡಬಹುದು.
ಹಾಗಾದ್ರೆ ಬುಧನ ಈ ರಾಶಿ ಬದಲಾವಣೆಯಿಂದಾಗಿ ಯಾರಿಗೆಲ್ಲಾ ಶುಭದಾಯಕ ಯಾರಿಗೆಲ್ಲಾ ಇದರಿಂದ ಅನುಕೂಲ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಕರ ರಾಶಿ
ಬುಧನು ಮಕರ ರಾಶಿಯ 11 ನೇ ಮನೆಗೆ ಚಲಿಸಲಿದ್ದಾನೆ. ಇದರಿಂದಾಗಿ ಈ ರಾಶಿ ಜನರ ಆದಾಯದಲ್ಲಿ ಉತ್ತಮ ಹೆಚ್ಚಳ ನೋಡಬಹುದು, ಹಾಗೆ ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವ ನಿಮ್ಮೆಲ್ಲಾ ಪ್ರಯತ್ನಗಳು ಫಲ ನೀಡಲಿವೆ. ಈಗಾಗಲೇ ನೀವು ಎಲ್ಲಾದರು ಹಣ ಹೂಡಿಕೆ ಮಾಡಿದ್ದರೆ ಈ ಸಮಯದಲ್ಲಿ ನೀವು ಅದರಿಂದ ಲಾಭ ನೋಡಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲಿದೆ. ಈ ಸಮಯದಲ್ಲಿ ಸಾಕಷ್ಟು ಹಣ ಗಳಿಸುವ ಕಡೆಗೆ ನಿಮ್ಮ ಪ್ರಯತ್ನ ಮುಮದುವರೆಯಲಿದೆ. ಆಸ್ತಿ ಸಂಬಂಧಿತ ವಿಚಾರವಾಗಿ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ಆಪ್ತ ವಲಯದಿಂದ ಬರಬೇಕಿದ್ದ ಹಣ ನಿಮ್ಮ ಕೈಸೇರಲಿದೆ. ಮಕ್ಕಳ ಭವಿಷ್ಯದ ಕುರಿತಾದ ಯಾವುದಾದರು ಚಿಂತೆ ನಿಮಗಿದ್ದರೆ ದೂರಾಗುವ ಸಮಯ ಇದಾಗಲಿದೆ.
ಕುಂಭ ರಾಶಿ
ಬುಧ ಗ್ರಹವು ಕುಂಭ ರಾಶಿಯ 10 ನೇ ಮನೆಗೆ ಸ್ಥಳಾಂತರಗೊಳ್ಳುತ್ತದೆ. ಇದರಿಂದಾಗಿ ಕುಂಭ ರಾಶಿ ಜನರು ತಮ್ಮ ಕೆಲಸದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತವೆ. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗುತ್ತದೆ. ಅಲ್ಲದೆ ಕೆಲಸ ಮಾಡುತ್ತಿರುವವರಿಗೆ ಹೊಸ ಜವಾಬ್ದಾರಿಗಳು ಬರಲಿವೆ. ಅವಿವಾಹಿತರಿಗೆ ಶುಭಯೋಗಗಳು ಕೂಡಿಬರುವ ಸಮಯ. ನಿಮ್ಮ ವ್ಯವಹಾರ, ವ್ಯಾಪಾರ ವಿಸ್ತರಣೆಗೆ ಇದು ಸೂಕ್ತ ಸಮಯ ಆಗಿರಲಿದೆ. ನಿಮ್ಮ ಸಂತೋಷಗಳು ದುಪ್ಪಟ್ಟಾಗಲಿವೆ.
ವೃಶ್ಚಿಕ ರಾಶಿ
ಬುಧ ಗ್ರಹವು ವೃಶ್ಚಿಕ ರಾಶಿಯ ಮೊದಲ ಮನೆಗೆ ಸ್ಥಳಾಂತರಗೊಳ್ಳುತ್ತದೆ. ಇದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲು ಕಾರಣವಾಗುತ್ತದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತದೆ. ವಾಹನ ಖರೀದಿಯ ಸಾಧ್ಯತೆ ದಟ್ಟವಾಗಬಹುದು, ಬಹುದಿನದ ಬಯಕೆಗಳ ಈಡೇರಿಸಿಕೊಳ್ಳಲು ಇದು ಸೂಕ್ತ ಕಾಲವಾಗಲಿದೆ. ನಿಮ್ಮ ದೊಡ್ಡ ಹಣಕಾಸು ಬಿಕ್ಕಟ್ಟು ದೂರಾಗಲಿದೆ. ಸಾಲ ಮುಕ್ತಾಯದ ಹಂತ ತಲುಪಬಹುದು. ಉದ್ಯಮಿಗಳು ಉತ್ತಮ ಲಾಭದ ನಿರೀಕ್ಷೆಯಲ್ಲಿರಬಹುದು. ಆರೋಗ್ಯ ಸುಧಾರಣೆಯ ಸಮಯ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications
