Lord Shiva: ಶಿವನ ನೆಚ್ಚಿನ 5 ರಾಶಿಗಳಿವು! ಪರಶಿವನೇ ಇವರ ಒಡನಾಡಿ.. ಕೇಳಿದ್ದೆಲ್ಲಾ ಸಿಗುತ್ತೆ

ಓಂ ನಮಃ ಶಿವಾಯ..! ನೀವು ಶಿವನ ಭಕ್ತರಾ? ಈ ರಾಶಿಗಳಿಗೆ ಶ್ರಾವಣದಲ್ಲಿ ಭಾರೀ ಲಾಭ ಮತ್ತು ಯಶಸ್ಸು ಕಾದಿದೆ. ಹೌದು, ಧಾರ್ಮಿಕ ನಂಬಿಕೆಗಳ ಪ್ರಕಾರ, ಪವಿತ್ರ ಶ್ರಾವಣ ಮಾಸವು (Sawan 2025) ಭಗವಾನ್ ಶಿವನಿಗೆ (Lord Shiva) ಸಮರ್ಪಿತವಾಗಿದೆ. ಈ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ವಿಶೇಷ ಫಲಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಮೇಲೆ ಶಿವನ ವಿಶೇಷ ಆಶೀರ್ವಾದ ಸದಾ ಇರುತ್ತದೆ. ಶಿವನ ಐದು ನೆಚ್ಚಿನ ರಾಶಿಗಳು ಇಲ್ಲಿವೆ.

ದೇವಾದಿದೇವ 'ಶಿವ' ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ! ಶಿವನು ಯಾವುದೇ ಸಾಮಾನ್ಯ ದೇವರಲ್ಲ. ತಮ್ಮದೇ ಆದ ರಹಸ್ಯಗಳು ಮತ್ತು ಪ್ರಾಮುಖ್ಯತೆಗಳ ಮೂಲಕ ಶಿವನು ಶ್ರೇಷ್ಠನಾಗಿದ್ದಾರೆ. ಈ 5 ರಾಶಿಗಳು ಶಿವನಿಗೆ ಅತ್ಯಂತ ಅಚ್ಚುಮೆಚ್ಚು (Lord Shiva's 5 Favorite Zodiac Signs). ಶ್ರಾವಣ ಮಾಸದಲ್ಲಿ ಈ ರಾಶಿಯವರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.

Lord Shiva s Favorite Zodiac Signs

1. ಮೇಷ ರಾಶಿ: ಅಡೆತಡೆಗಳ ನಿವಾರಕ

ಮೇಷ ರಾಶಿಯು ಶಿವನಿಗೆ ಪ್ರಿಯವಾದ ರಾಶಿಗಳಲ್ಲಿ ಒಂದಾಗಿದೆ. ಈ ರಾಶಿಯ ಜನರು ಧೈರ್ಯಶಾಲಿಗಳು ಮತ್ತು ಆತ್ಮವಿಶ್ವಾಸ ಉಳ್ಳವರಾಗಿರುತ್ತಾರೆ. ಶಿವನು ಇವರ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತಾನೆ. ಈ ರಾಶಿಯವರಿಗೆ ಶಿವನ ಕೃಪೆಯಿಂದ ಸದಾ ಯಶಸ್ಸು ಪ್ರಾಪ್ತವಾಗುತ್ತದೆ.

ಪರಿಹಾರ ಏನು: ಶ್ರಾವಣ ಮಾಸದಲ್ಲಿ ಪ್ರತಿದಿನ ತಾಮ್ರದ ಪಾತ್ರೆಯಲ್ಲಿ ಬೆಲ್ಲ ಮತ್ತು ಕೆಂಪು ಚಂದನವನ್ನು ಹಾಕಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಅತ್ಯಂತ ಶುಭಕರ. ಇದು ನಿಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ, ಇಷ್ಟಾರ್ಥಗಳನ್ನು ಪೂರೈಸುತ್ತದೆ.

2. ಕರ್ಕಾಟಕ ರಾಶಿ: ಭೋಲೇನಾಥನ ವಿಶೇಷ ರಕ್ಷಣೆ

ಕಟಕ ರಾಶಿಯವರು ಸಹನಶೀಲರು ಮತ್ತು ಗಂಭೀರ ಸ್ವಭಾವದವರು. ಇದರಿಂದ ಶಿವನಿಗೆ ಇವರನ್ನು ಕಂಡರೆ ತುಸು ಹೆಚ್ಚು ಪ್ರೀತಿ. ಕಟಕ ರಾಶಿಯ ಅಧಿಪತಿ ಚಂದ್ರನಾಗಿದ್ದು, ಚಂದ್ರನು ಶಿವನ ತಲೆಯಲ್ಲಿ ನೆಲೆಸಿದ್ದಾನೆ. ಹಾಗಾಗಿ, ಈ ರಾಶಿಯವರ ಮೇಲೆ ಭೋಲೇನಾಥನ ವಿಶೇಷ ಕೃಪೆ ಇರುತ್ತದೆ. ಶಿವನು ಇವರನ್ನು ಎಲ್ಲಾ ಸಂಕಷ್ಟಗಳಿಂದ ಪಾರು ಮಾಡುತ್ತಾನೆ ಮತ್ತು ರಕ್ಷಿಸುತ್ತಾನೆ.

ಪರಿಹಾರ ಏನು: ಶ್ರಾವಣ ಮಾಸದಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ಹಾಲನ್ನು ಶಿವಲಿಂಗಕ್ಕೆ ಅರ್ಪಿಸುವುದು ಅತ್ಯಂತ ಮಂಗಳಕರ. ಇದು ಮನಸ್ಸಿಗೆ ಶಾಂತಿ ನೀಡಿ, ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ.

3. ತುಲಾ ರಾಶಿ: ಆಧ್ಯಾತ್ಮಿಕ ಮತ್ತು ಆಶೀರ್ವಾದಿ

ತುಲಾ ರಾಶಿಯ ಜನರು ಆಧ್ಯಾತ್ಮಿಕ ಸ್ವಭಾವವನ್ನು ಹೊಂದಿರುತ್ತಾರೆ. ಮತ್ತು ಸದಾ ಸತ್ಯವನ್ನು ಮಾತನಾಡುವ ಗುಣ ಹೊಂದಿರುತ್ತಾರೆ. ಹೀಗಾಗಿ, ಶಿವನು ಸದಾ ಅವರಿಗೆ ಬೆಂಬಲವಾಗಿರುತ್ತಾನೆ ಮತ್ತು ಅವರ ಪ್ರತಿಯೊಂದು ಕಾರ್ಯದಲ್ಲೂ ಆಶೀರ್ವದಿಸುತ್ತಾನೆ. ಭಗವಾನ್ ಭೋಲೇನಾಥನ ವರಪ್ರಸಾದವು ಈ ರಾಶಿಯವರಿಗೆ ಸದಾ ಇರುತ್ತದೆ.

ಪರಿಹಾರ ಏನು: ನೀರಿನಲ್ಲಿ ಸಕ್ಕರೆ ಬೆರೆಸಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ. 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸುವುದು ಉತ್ತಮ. ಇದು ಶಿವನಿಗೆ ನಿಮ್ಮ ಭಕ್ತಿಯನ್ನು ತಲುಪಿಸಿ, ನಿಮ್ಮ ಆಸೆಗಳನ್ನು ಈಡೇರಿಸುತ್ತದೆ.

4. ಮಕರ ರಾಶಿ: ಶನಿಯ ಗುರು ಶಿವನ ಕೃಪೆ

ಮಕರ ರಾಶಿಯವರು ಅತ್ಯಂತ ಪರಿಶ್ರಮಿಗಳು ಮತ್ತು ತಮ್ಮ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವವರಾಗಿರುತ್ತಾರೆ. ಮಕರ ರಾಶಿಯ ಅಧಿಪತಿ ಶನಿಯಾಗಿದ್ದು, ಶನಿಯು ಶಿವನನ್ನು ತನ್ನ ಗುರು ಎಂದು ಪರಿಗಣಿಸುತ್ತಾನೆ. ಭಗವಾನ್ ಶಿವನು ಇವರ ಶ್ರಮಕ್ಕೆ ತಕ್ಕ ಫಲವನ್ನು ನೀಡುತ್ತಾನೆ ಮತ್ತು ಕಷ್ಟಕಾಲದಲ್ಲಿ ಆಸರೆಯಾಗುತ್ತಾನೆ.

ಪರಿಹಾರ ಏನು: ಶ್ರಾವಣ ಮಾಸದಲ್ಲಿ ಪ್ರತಿದಿನ ನೀರಿನಲ್ಲಿ ಕಪ್ಪು ಎಳ್ಳನ್ನು ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಇದರಿಂದ ಶಿವನ ಕೃಪೆಯನ್ನು ಪಡೆಯಲು ಸಹಾಯಕ. ಇದು ನಿಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ, ಯಶಸ್ಸನ್ನು ತರುತ್ತದೆ.

5. ಕುಂಭ ರಾಶಿ: ಸುಖ, ಸಮೃದ್ಧಿ ಮತ್ತು ಉನ್ನತ ಸ್ಥಾನ

ಕುಂಭ ರಾಶಿಯ ಜನರು ಭಗವಾನ್ ಶಿವನಿಗೆ ಅಚ್ಚುಮೆಚ್ಚಿನವರು. ಇವರು ಸತ್ಯಪ್ರಿಯ ಮತ್ತು ಪರೋಪಕಾರಿ ಸ್ವಭಾವವನ್ನು ಹೊಂದಿರುತ್ತಾರೆ. ಶಿವನು ಇವರ ಸದ್ಗುಣಗಳನ್ನು ಮೆಚ್ಚಿ ಅಕಾಲಿಕ ಮೃತ್ಯುವಿನಿಂದ ರಕ್ಷಿಸುತ್ತಾನೆ. ಈ ರಾಶಿಯವರಿಗೆ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಉನ್ನತ ಸ್ಥಾನ ಪ್ರಾಪ್ತವಾಗುತ್ತದೆ.

ಪರಿಹಾರ ಏನು: ಶ್ರಾವಣ ಮಾಸದಲ್ಲಿ ಪ್ರತಿದಿನ ಕಬ್ಬಿನ ಹಾಲನ್ನು ಶಿವಲಿಂಗಕ್ಕೆ ಅರ್ಪಿಸುವುದು ಅತ್ಯಂತ ಶುಭಕರ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದು, ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ.

ಒಟ್ಟಾರೆಯಾಗಿ, ಶ್ರಾವಣ ಮಾಸದಲ್ಲಿ ಈ ರಾಶಿಯ ಜನರು ಶಿವನನ್ನು ಭಕ್ತಿಯಿಂದ ಆರಾಧಿಸಬೇಕು. ಈ ಮೇಲೆ ತಿಳಿಸಿದ ಪರಿಹಾರಗಳನ್ನು ಅನುಸರಿಸಬೇಕು. ಇದರಿಂದ ನಿಮ್ಮೆಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಜೀವನದಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Sawan Special: Lord Shiva's 5 Favorite Zodiac Signs! Shiva Granted all the Your wishes This Shravan

Sawan Special 2025: Lord Shiva's 5 Favorite Zodiac Signs! Shiva Granted all the Your wishes This Shravan
Story first published: Wednesday, July 30, 2025, 15:30 [IST]
X
Desktop Bottom Promotion