Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
76 ದಿನಗಳ ಕಾಲ ಶನಿ ಪ್ರಭಾವ ದುರ್ಬಲ: ಈ ರಾಶಿಯವರಲ್ಲಿ ಅಡ್ಡಿಗಳು ನಿವಾರಣೆ, ಪ್ರಗತಿಯ ಹೆಜ್ಜೆ!
ಜ್ಯೋತಿಷ್ಯದಲ್ಲಿ ಶನಿಯನ್ನು ಅತ್ಯಂತ ಶಕ್ತಿಶಾಲಿ ಮತ್ತು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು ಕರ್ಮ ಯೋಗವನ್ನು ಹಾಗೆ ನ್ಯಾಯ ಸಮ್ಮತವಾಗಿ ಶುಭ ಹಾಗೂ ಅಶುಭ ಯೋಗ ತರುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಅದ್ರಲ್ಲೂ ಶನಿಯ ಕೋಪಕ್ಕೆ ಒಳಗಾದರೆ ಅಥವಾ ಜಾತಕದಲ್ಲಿ ಶನಿದೋಷವಿದ್ದರೆ ಹಲವು ರೀತಿಯ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಸತತ 7 ವರ್ಷದ ನಿರಂತರ ದೋಷ ನಿಮಗೆ ಹೆಗಲೇರಬಹುದು.
ಆದ್ರೆ ಜ್ಯೋತಿಷ್ಯದಲ್ಲಿ ಶನಿ ದೋಷ ನಿವಾರಣೆಗೂ ಸಹ ಹಲವು ಮಾರ್ಗಗಳ ಸೂಚಿಸಲಾಗಿದೆ. ಇಂತಹ ಹಲವು ಪರಿಹಾರ ಮಾರ್ಗಗಳಿಂದ ಶನಿ ದೋಷವನ್ನು ನಿಯಂತ್ರಣದಲ್ಲಿಡಬಹುದು. ಇನ್ನು ಶನಿ ಡಿಸೆಂಬರ್‌ನಲ್ಲಿ ದುರ್ಬಲ ಸ್ಥಾನಕ್ಕೆ ಸಾಗಿದ್ದಾನೆ. ಶನಿ ಡಿಸೆಂಬರ್ 5ರಿಂದ ಸುಮಾರು 76 ದಿನಗಳ ಕಾಲ ದುರ್ಬಲ ಚಲನೆ ನೋಡಬಹುದು.

ಶನಿಯ ಈ ಪ್ರಯಾಣವು ಶನಿಯಿಂದ ಪ್ರಭಾವಕ್ಕೆ ಒಳಗಾದವರಿಗೆ 76 ದಿನಗಳ ಕಾಲ ಮುಕ್ತಿ ಸಿಗಲಿದೆ. ಆತನ ಪ್ರಭಾವವು ಈ 76 ದಿನಗಳ ಕಾಲ ನಿಮ್ಮ ಮೇಲೆ ಬೀಳದೆ ಇರಬಹುದು. ಹಾಗೆ ಶನಿಯಿಂದ ಉಂಟಾದ ಹಲವು ದೋಷಗಳು ನಿವಾರಣೆಯಾಗುವ ಸಮಯವೂ ಇದಾಗಿರಲಿದೆ. ಹಾಗಾದ್ರೆ ಈ ಹೊಸ ವರ್ಷದ ಸಮಯದಲ್ಲಿ ಶನಿಯಿಂದ ಧನಾತ್ಮಕ ಫಲ ಅನುಭವಿಸುವವರು ಯಾರು ಅನ್ನೋದನ್ನು ತಿಳಿದುಕೊಳ್ಳೋಣ.
ತುಲಾ ರಾಶಿ
ತುಲಾ ರಾಶಿಯವರಿಗೆ ಶನಿ 4 ನೇ ಮತ್ತು 5 ನೇ ಮನೆಗಳ ಅಧಿಪತಿಯಾಗಿದ್ದು ಪ್ರಸ್ತುತ 6 ನೇ ಮನೆಯಲ್ಲಿ ಸಾಗುತ್ತಿದ್ದಾನೆ, ಇದು ತುಲಾ ರಾಶಿಯವರಿಗೆ ಅನುಕೂಲಕರ ಸ್ಥಾನವಾಗಿದೆ. ನಿಮ್ಮಲ್ಲಿ ಬಹು ಸಮಯದಿಂದ ಯಾವುದಾದರು ವಿಚಾರವಾಗಿ ಅಡೆತಡೆಗಳಿದ್ದರೆ ಈ ಸಮಯದಲ್ಲಿ ಅದರಿಂದ ಹೊರಬರುತ್ತೀರಿ. ಅದ್ರಲ್ಲೂ ಹಣಕಾಸಿನ ಅಡ್ಡಿ ಆತಂಕಗಳು ತಾತ್ಕಾಲಿಕವಾಗಿ ದೂರಾಗಲಿದೆ. ನಿಮ್ಮ ಆರೋಗ್ಯ ಸಂಬಂಧಿತ ವಿಚಾರದಲ್ಲಿ ಇದ್ದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ನಿರುದ್ಯೋಗಿಗಳು ಉದ್ಯೋಗ ಪಡೆಯುವ ಸಮಯ ಇದಾಗಲಿದೆ. ಈ ಸಮಯದಲ್ಲಿ ನಿಮ್ಮ ಕುಟುಂಬ ವಿಚಾರದಲ್ಲಿನ ಅನ್ಯೋನ್ಯತೆ ಹೆಚ್ಚಾಗಲಿದೆ.
ಕುಂಭ ರಾಶಿ
ಶನಿಯು ಕುಂಭ ರಾಶಿಯ ಎರಡನೇ ಮನೆಯಲ್ಲಿದ್ದು, ಇದು ಸಂಪತ್ತು ಮಾತು ಕುಟುಂಬ ಮತ್ತು ಆನುವಂಶಿಕತೆಯನ್ನು ಪ್ರತಿನಿಧಿಸುತ್ತದೆ. ಶನಿಯ ಬಲ ಕಡಿಮೆಯಾದಂತೆ, ನಿಮ್ಮ ಹಲವು ಸಮಸ್ಯೆಗಳಲ್ಲಿ ಇಳಿಮುಖ ನೋಡಬಹುದು. ಅದ್ರಲ್ಲೂ ಹಣಕಾಸು ವಿಚಾರದಲ್ಲಿ ಇದ್ದಂತಹ ಹಲವು ರೀತಿಯ ಅಡ್ಡಿಗಳು ನಿವಾರಣೆಯಾಗಲಿದೆ. ನಿಮ್ಮಿಂದ ಯಾರಿಂದಾದರು ವ್ಯವಹಾರ ಸಂಬಂಧ ಮುನಿಸಿಕೊಂಡಿದ್ದರೆ ಈ ಸಮಯದಲ್ಲಿ ಮಾತುಕತೆಗಳ ಮೂಲಕ ನಿವಾರಣೆ ಮಾಡಿಕೊಳ್ಳುವಿರಿ. ವ್ಯಾಪಾರ ಪ್ರಗತಿ ಇದೆ.
ಮೀನ ರಾಶಿ
ಮೀನ ರಾಶಿಯವರಿಗೆ ಶನಿಯು ಏಳನೇ ಮನೆಯ ಎರಡನೇ ಹಂತದಲ್ಲಿ ಮೊದಲ ಮನೆಯಲ್ಲಿ ಸಾಗುತ್ತಿದ್ದಾನೆ. ಶನಿಯ ದುರ್ಬಲ ಸ್ಥಾನವು ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ನಿಮ್ಮ ಕಚೇರಿ ಪರಿಸರವು ಅನುಕೂಲಕರವಾಗುತ್ತದೆ, ಅನಗತ್ಯ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳು ಅವರ ಪರವಾಗಿ ತಿರುಗಬಹುದು. ವಿವಾಹ ಸಂಬಂಧಿ ಅಡ್ಡಿಗಳು ನಿವಾರಣೆಯಾಗಲಿದೆ. ಆಪ್ತರೊಬ್ಬರಿಗೆ ನೀಡಿದ್ದ ಹಣವನ್ನು ಮರಳಿ ಪಡೆಯಬಹುದು. ವಾಹನ, ಆಸ್ತಿ ಖರೀದಿಯ ವಿಚಾರದಲ್ಲಿ ನಿಮಗೆ ಲಾಭವಿದೆ. ನಿಮ್ಮಿಂದ ಕುಟುಂಬ ಸದಸ್ಯರೊಬ್ಬರಿಗೆ ಸಹಕಾರ ಸಿಗಲಿದೆ. ಪ್ರಯಾಣಗಳಲ್ಲಿ ಇದ್ದಂತಹ ಅಡ್ಡಿಗಳು ಸಹ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications