Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉತ್ತರಾಧಿ ನಕ್ಷತ್ರದ 2ನೇ ಪಾದಕ್ಕೆ ಶನಿ ಚಲನೆ: ಎದುರಾಗಲಿದೆ ಅದೃಷ್ಟದ ದಿನ, ಶನಿಯ ಆಶೀರ್ವಾದ ಪಡೆಯುವ ರಾಶಿಗಳಿವು!
ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ವ್ಯಕ್ತಿಯ ಪಾಪ ಕರ್ಮಗಳ ಅನುಸಾರವಾಗಿ ಮಾತ್ರವಲ್ಲದೆ ಆತನ ಜಾತಕದಲ್ಲಿ ಯಾವ ಮನೆಯಲ್ಲಿ ಚಲಿಸುತ್ತಾನೆ ಎನ್ನುವುದರ ಆಧಾರ ಮೇಲೆಯೂ ಆತನ ಪ್ರಭಾವ ಉಂಟಾಗುತ್ತದೆ. ಹೀಗಾಗಿ ಶನಿಯು ನೀತಿವಂತ, ಕರ್ಮಫಲದ ಗ್ರಹವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಶನಿ ಒಂದೇ ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಚಲಿಸುತ್ತಾನೆ.
ಶನಿ ನಿಧಾನವಾಗಿ ಚಲಿಸುವ ಕಾರಣ ಆತ ಎಲ್ಲಾ ಗ್ರಹಗಳೊಂದಿಗೆ ಹಾಗೆ ನಕ್ಷತ್ರದೊಂದಿಗೆ ಸಂಯೋಗವಾಗುತ್ತಾನೆ. ಅದ್ರಲ್ಲೂ ನಕ್ಷತ್ರ ಬದಲಾವಣೆಯ ಸಮಯದಲ್ಲಿ ಹಲವು ಗ್ರಹಳೊಂದಿಗೆ ಸಂಯೋಗವಾಗುವುದು ನೋಡಬಹುದು. ಶನಿಯ ಸ್ಥಾನದಲ್ಲಿ ಬದಲಾವಣೆಯಾದಾಗಲೆಲ್ಲಾ ಅದರ ಪ್ರಭಾವವು ಎಲ್ಲಾ ರಾಶಿ ಜನರ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕಂಡುಬರುವುದು.

ಶನಿಯು ಪ್ರಸ್ತುತ ಮೀನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಜೊತೆಗೆ ಶನಿಯು ಈಗ ಉತ್ತರಾಧಿ ನಕ್ಷತ್ರದ ಮೊದಲ ಪಾದದಲ್ಲಿದ್ದಾನೆ. ಆದ್ರೆ ಇದೇ ಫೆಬ್ರವರಿ 22 ರಂದು ಉತ್ತರಾಧಿ ನಕ್ಷತ್ರದ ಎರಡನೇ ಪಾದಕ್ಕೆ ಚಲಿಸಲಿದ್ದಾನೆ. ಇದು ಶನಿಯ ಹಲವು ಪ್ರಭಾವಗಳು ಬದಲಾವಣೆಯಾಗಲು ಕಾರಣವಾಗುತ್ತದೆ. ಅವುಗಳಲ್ಲಿ ಕೆಲವು ಕೆಟ್ಟದಾಗಿರುತ್ತವೆ, ಆದರೆ ಕೆಲವು ತುಂಬಾ ಅದೃಷ್ಟಶಾಲಿಯಾಗಿರುತ್ತವೆ.
ವಿಶೇಷವಾಗಿ ಪ್ರತಿಯೊಂದು ಕೆಲಸದಲ್ಲಿ ಉತ್ತಮ ಯಶಸ್ಸು ಮತ್ತು ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ನೋಡಬಹುದು. ಈಗ ಶನಿಯ ನಕ್ಷತ್ರದಲ್ಲಿನ ಸಣ್ಣ ಬದಲಾವಣೆ ಕೂಡ ಹಲವು ರಾಶಿಗಳ ಮೇಲೆ ಪ್ರಭಾವ ತರುತ್ತಿದೆ. ಹಾಗಾದ್ರೆ ಶನಿಯಿಂದ ಮುಂದಿನ ಹಲವು ಕಾಲ ಯಾರಿಗೆಲ್ಲಾ ಅನುಕೂಲಕರ ಯಾರಿಗೆ ಶುಭಕರ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಕರ ರಾಶಿ
ಶನಿಯ ಚಲನೆಯು ಮಕರ ರಾಶಿಯವರಲ್ಲಿ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ. ಅದರಲ್ಲೂ ಮಕರ ರಾಶಿಯವರ ಗೃಹ ನಿರ್ಮಾಣ ಕೆಲಸಗಳು, ಹಣಕಾಸು ಕೆಲಸಗಳು, ಆಸ್ತಿ ವಿಚಾರದಲ್ಲಿನ ಸಣ್ಣ ಪುಟ್ಟ ಅಡ್ಡಿಗಳು ನಿವಾರಣೆಯಾಗಲಿದೆ, ಇದರಿಂದ ನಿಮ್ಮ ಕೆಲಸಗಳಲ್ಲಿ ವೇಗ ಪಡೆದುಕೊಳ್ಳಬಹುದು. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಹಠಾತ್ ನಿಮ್ಮ ಕೈ ಸೇರಲಿದೆ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಸಹ ನೀವು ತಾತ್ಕಾಲಿಕವಾಗಿ ಪರಿಹರಿಸಿಕೊಳ್ಳಬಹುದು. ಸಹೋದರರೊಂದಿಗೆ ಯಾವುದಾದರು ಮುನಿಸುಗಳಿದ್ದರೆ ಅದನ್ನು ಕೂಡ ನಿವಾರಿಸಿಕೊಳ್ಳುವಿರಿ.
ಮಿಥುನ ರಾಶಿ
ಶನಿಯ ಸಂಚಾರವು ಮಿಥುನ ರಾಶಿಯವರಿಗೆ ಕಠಿಣ ಪರಿಶ್ರಮದ ಫಲವನ್ನು ತರುತ್ತದೆ. ಬಹು ಸಮಯದಿಂದ ನೀವು ಯಾವುದಾದರು ಕಾರ್ಯ ಸಾಧನೆಗೆ ಮುಂದಾಗಿದ್ದರೆ ಈ ಸಮಯದಲ್ಲಿ ದೊಡ್ಡ ಲಾಭ ಪಡೆಯಲಿದ್ದೀರಿ. ಆಪ್ತರೊಬ್ಬರ ಸಹಕಾರದಿಂದ ನಿರುದ್ಯೋಗಿಗಳು ಉತ್ತಮ ಲಾಭ ಪಡೆಯಬಹುದು. ವಾಹನ ಲಾಭದ ನಿರೀಕ್ಷೆ ಇಡಬಹುದು. ಉದ್ಯಮಿಗಳಿಗೆ ಉತ್ತಮ ಲಾಭವನ್ನು ತರುವ ಹೊಸ ಮೂಲಗಳ ಪಡೆಯಬಹುದು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆ ಇರುತ್ತದೆ. ಆದರೆ ನೀವು ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ದಾಂಪತ್ಯ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ.
ಮೀನ ರಾಶಿ
ಶನಿಯ ಸಂಚಾರವು ಮೀನ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳನ್ನು ತರುತ್ತದೆ. ಸಮಾಜದಲ್ಲಿ ಗೌರವ ಮತ್ತು ಘನೆತ ಹೆಚ್ಚಾಗುತ್ತದೆ. ಶನಿಯ ಆಶೀರ್ವಾದದಿಂದ ನಿಮ್ಮ ರಾಜಕೀಯ ನಡೆ ಅಥವಾ ನಾಯಕತ್ವ ಸುಧಾರಿಸುವುದು ನೋಡಬಹುದು. ಅವಿವಾಹಿತರಲ್ಲಿನ ಹಣಕಾಸು ಸಮಸ್ಯೆಗಳು ದೂರಾಗಲಿದೆ. ದಾಂಪತ್ಯ ಮತ್ತೆ ಮಧುರವಾಗಲಿದೆ. ಶುಭ ಕಾರ್ಯಗಳ ಸಂಬಂಧಿತ ವಿಚಾರಗಳು ಧನಾತ್ಮಕವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications