Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿಯ ಆಶೀರ್ವಾದ ಪಡೆದ 2 ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ..ಯಾರಿಗೆ ಶುಭಕರ ಕಾಲ ಆರಂಭ?
ಸೌರಮಂಡಲದ ಪ್ರತಿಯೊಂದು ಗ್ರಹದ ಚಲನೆಯು ವ್ಯಕ್ತಿಯೋರ್ವರ ಜೀವನಕ್ಕೆ ನೇರ ಸಂಬಂಧ ಹೊಂದಿರಲಿವೆ. ಅದರಲ್ಲೂ ಪ್ರತಿಯೊಂದು ರಾಶಿಯಲ್ಲಿ ಹಲವು ಗ್ರಹಗಳ ಸಂಚಾರದಿಂದಾಗಿ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಗ್ರಹಗಳಲ್ಲಿ ಅತ್ಯಂತ ಪ್ರಮುಖ ಸ್ಥಾನ ನೀಡಲಾಗಿರುವ ಶನಿಯು ಈಗ ಸಂಚಾರ ಮಾಡಲಿದ್ದಾನೆ. ಶನಿ ಜುಲೈ 13ರಂದು ಶನಿ ಕ್ಷೀಣ ಸ್ಥಾನಕ್ಕೆ ಚಲಿಸಲಿದ್ದಾನೆ.
ಶನಿ ಪ್ರಸ್ತುತ ಮೀನ ರಾಶಿಯಲ್ಲಿದ್ದು, ಆತ ಕ್ಷೀಣ ಸ್ಥಾನಕ್ಕೆ ಚಲಿಸಲಿದ್ದಾನೆ. ಇದರಿಂದ ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಇದು ತ್ರಿಕೋನ ರಾಜಯೋಗಕ್ಕೆ ಕಾರಣವಾಗಲಿದೆ. ತ್ರಿಕೋನ ರಾಜಯೋಗದಲ್ಲಿ ಗ್ರಹಗಳಿಂದ ಉಂಟಾಗುವ ಹಲವು ನಕಾರಾತ್ಮಕ ವಿಚಾರಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

ಶನಿಯ ಕ್ಷೀಣ ಚಲನೆಯಿಂದ ಉಂಟಾಗುವ ಈ ತ್ರಿಕೋನ ರಾಜಯೋಗವು ಹಲವರಲ್ಲಿ ಪ್ರಯೋಜನಗಳ ಉಂಟು ಮಾಡಲಿದೆ. ಶನಿಯನ್ನು ನಾವು ಅದೃಷ್ಟದ ಸಂಕೇತವಾಗಿಯೂ ಪರಿಗಣಿಸುತ್ತೇವೆ. ಶನಿ ನಿಮ್ಮ ರಾಶಿಯ ಧನಾತ್ಮಕ ಮನೆಯಲ್ಲಿದ್ದರೆ ನಿಮ್ಮ ಅದೃಷ್ಟ ಬದಲಾಗುತ್ತದೆ. ಆದ್ರೆ ನಕಾರಾತ್ಮಕವಾರೆ ಅಡ್ಡಿ ಆತಂಕಗಳು ಹೆಚ್ಚಾಗುತ್ತವೆ.
ಆದ್ರೆ ಇಂದಿನಿಂದ ಶನಿಯು ತ್ರಿಕೋನ ರಾಜಯೋಗಕ್ಕೆ ಕಾರಣವಾಗುತ್ತಿರುವುದು ಯಾವೆಲ್ಲಾ ರಾಶಿಗಳಿಗೆ ಶುಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಮಂದಿ ಈ ಶನಿಯ ತ್ರಿಕೋನ ರಾಜಯೋಗದಲ್ಲಿ ಹಲವು ರೀತಿಯ ಪ್ರಯೋಜನ ಪಡೆಯಲಿದ್ದಾರೆ. ನಿಮ್ಮ ಆರ್ಥಿಕ ವಿಚಾರಗಳಲ್ಲಿ ಬಹಳ ಧನಾತ್ಮಕ ಬದಲಾವಣೆಗಳ ನೋಡುವಿರಿ. ಶನಿ ವೃಶ್ಚಿಕ ರಾಶಿಯ 5ನೇ ಮನೆಯಲ್ಲಿ ಚಲಿಸುವುದರಿಂದ ಮನೆ, ಪ್ರೀತಿ, ಕುಟುಂಬದ ವಿಚಾರದಲ್ಲಿ ಸಂತೋಷ ಇರಲಿದೆ. ಹಣಕಾಸಿನ ವಿಚಾರವಾಗಿ ಇದ್ದಂತಹ ಅಡೆತಡೆಗಳ ಪರಿಹಾರಕ್ಕಾಗಿ ಸೂಕ್ತ ಕೆಲಸ ಮಾಡುವಿರಿ, ಹಾಗೆ ಅದರ ಫಲಿತಾಂಶವು ನಿಮಗೆ ಸಂತಸ ತರಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುತ್ತಿದ್ದವರಿಗೆ ಉತ್ತಮ ಸಮಯ ಎನ್ನಬಹುದು. ವಿವಾಹಿತರ ಜೀವನದಲ್ಲಿ ಸಂತೋಷದ ಕ್ಷಣಗಳು ಇರುತ್ತವೆ. ಕುಟುಂಬದಲ್ಲಿ ಕೆಲವು ಶುಭ ಸಂಗತಿಗಳು ಸಂಭವಿಸುವ ಸಾಧ್ಯತೆಯಿದೆ. ಜೀವನದಲ್ಲಿ ಎಲ್ಲಾ ರೀತಿಯ ಪ್ರಯೋಜನಗಳನ್ನು ಸಾಧಿಸುವ ಸಮಯ ಇದು. ಆಸ್ತಿ ಖರೀದಿಯಂತಹ ವಿಚಾರದಲ್ಲಿ ಲಾಭದಾಯಕ
ಧನು ರಾಶಿ
ಧನು ರಾಶಿಯ ಜನರಲ್ಲಿ ಈ ತ್ರಿಕೋನ ರಾಜಯೋಗವು ಹಲವು ರೀತಿಯಾಗಿ ಅದೃಷ್ಟಕ್ಕೆ ಕಾರಣವಾಗುತ್ತಿದೆ. ಶನಿ ವಕ್ರ ಚಲನೆಯಲ್ಲಿ ನಿಮಗೆ ಧನಾತ್ಮಕ ಲಾಭಗಳ ನೋಡಬಹುದು. ವಿಹಾವ ಸಂಬಂಧಿ ಸಮಸ್ಯೆ, ಆಸ್ತಿ, ಮನೆ, ಕುಟುಂಬ, ಕಾನೂನು ವಿಚಾರಗಳಲ್ಲಿ ನಿಮಗೆ ಯಶಸ್ಸು ಇರಲಿದೆ. ವಾಹನ ಲಾಭದ ಬಲವಾದ ನಿರೀಕ್ಷೆ ಇಟ್ಟುಕೊಳ್ಳಬಹುದು, ನಿಮ್ಮ ಹೂಡಿಕೆಗಳು ಲಾಭದಾಯಕವಾಗಿ ಕೈ ಸೇರಲಿದೆ. ಹೊಸ ಅದಾಯ ಮೂಲಗಳು ನಿಮ್ಮನ್ನು ಹುಡುಕಿ ಬರಲಿವೆ. ವ್ಯಾಪಾರದಲ್ಲಿ ಪ್ರಗತಿ ನೋಡುವಿರಿ. ಬಹಳ ಸಮಯದಿಂದ ದೈನಂದಿನ ಕೆಲಸಗಳಲ್ಲಿ ಅಡ್ಡಿಯಾಗಿದ್ದ ಯಾವುದೇ ವಿಚಾರದಿಂದ ನೀವು ಮುಕ್ತರಾಗುತ್ತೀರಿ. ಆಪ್ತರು ಅಥವಾ ಸ್ನೇಹಿತರಿಗೆ ನೀಡಿದ್ದ ಹಣಕಾಸು ವಿಚಾರದಲ್ಲಿ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮಗಿದ್ದ ಮನಸ್ತಾಪವೂ ಸಹ ಪರಿಹಾರವಾಗಲಿದೆ. ವಿವಾಹಿತರಲ್ಲಿ ಮಕ್ಕಳ ಕುರಿತಾದ ದೊಡ್ಡ ಚಿಂತೆ ದೂರಾಗಲಿದೆ, ಅವರೊಂದಿಗೆ ಸುಂದರ ಕ್ಷಣಗಳ ನೀವು ಕಳೆಯಬಹುದು. ಔದ್ಯೋಗಿಕವಾಗಿ ಕೆಲಸದ ಸ್ಥಳದಲ್ಲಿ ಇದ್ದ ದೊಡ್ಡ ಸಮಸ್ಯೆ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications