Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
138 ದಿನ ಶನಿ ಹಿಮ್ಮುಖ ಚಲನೆ: ಯಾರಿಗಿದು ಶುಭ ಮತ್ಯಾರಿಗೆ ಅಶುಭಕಾರಕ ನೋಡಿ!
ಕಾಲ ಕಾಲಕ್ಕೆ ತಕ್ಕಂತೆ ಗ್ರಹಗಳ ಬದಲಾವಣೆಯು ಅನೇಕ ರೀತಿಯಲ್ಲಿ ಶುಭ ಹಾಗೂ ಅಶುಭ ಯೋಗಗಳ ರೂಪುಗೊಳ್ಳುವಿಕೆಗೆ ಕಾರಣವಾಗುತ್ತದೆ. ಅದ್ರಲ್ಲೂ ಒಂದು ನಿರ್ಧಿಷ್ಟ ಗ್ರಹ ತನ್ನ ರಾಶಿ ಬದಲಾಯಿಸಿದಾಗ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗೆ ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ನಿರ್ಧಿಷ್ಟ ರಾಶಿಯಲ್ಲಿ ಸಂಯೋಗ ಹೊಂದಿದಾಗ ಅಲ್ಲಿ ಯೋಗಗಳು ರೂಪುಗೊಳ್ಳುತ್ತದೆ.
ಈ ಯೋಗಗಳು ಆಯಾ ಗ್ರಹಗಳ ಚಲನೆಯ ಆಧಾರದ ಮೇಲೆ ಶುಭ ಹಾಗೂ ಅಶುಭ ಯೋಗಗಳನ್ನು ತರಲಿವೆ. ಈ ಗ್ರಹಗಳ ಚಲನೆ ಹಾಗೆ ಯೋಗಗಳು ಶುಭ ಯೋಗಗಳು ರೂಪುಗೊಂಡಾಗ ಒಬ್ಬ ವ್ಯಕ್ತಿಯ ಜೀವನದಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು, ಹೀಗೆ ಹಲವು ರೀತಿಯಲ್ಲಿ ಬದಲಾವಣೆಗಳ ನೋಡಬಹುದು.

ಇನ್ನು ಅಶುಭ ಯೋಗಗಳು ರೂಪುಗೊಂಡರೆ ಜೀವನದಲ್ಲಿ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಈಗ ಶನಿ ಗ್ರಹದ ಚಲನೆಯಿಂದಾಗಿ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟಾಗಿರುವುದು ನೋಡಬಹುದು. ಜುಲೈ 13ರಿಂದ ಶನಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಶನಿ ಬರೋಬ್ಬರಿ 138 ದಿನಗಳ ಕಾಲ ಹಿಮ್ಮುಖವಾಗಿ ಚಲಿಸಲಿದ್ದು, ನಂತರ ಮೀನ ರಾಶಿಗೆ ಚಲಿಸಲಿದ್ದಾನೆ. ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಎರಡೂವರೆ ವರ್ಷ ಒಂದೇ ರಾಶಿಯಲ್ಲಿರಲಿದ್ದಾನೆ.
ಶನಿ ಶಿಕ್ಷೆ, ಅಶುಭ ದೃಷ್ಟಿ, ಸಾಡೇಸಾತಿ ಮತ್ತು ಧೈರ್ಯ ಸಂಬಂಧಿ ವಿಚಾರಕ್ಕೆ ಕಾರಣ. ಹಾಗೆ ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆಯುವ ಹಲವು ವಿದ್ಯಮಾನಗಳಿಗೆ ಶನಿಯ ಪ್ರಭಾವ ಇದ್ದೇ ಇರಲಿದೆ. ಹಾಗಾದ್ರೆ ಶನಿಯ ಈ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರಿಗೆ ಶನಿ ಧನಾತ್ಮಕ ಪ್ರಭಾವ ಉಂಟಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಶನಿಯು ತಮ್ಮ 10ನೇ ಹಾಗೂ 11ನೇ ಮನೆಯ ಅಧಿಪತಿ. ಹೀಗಾಗಿ ನಿಮ್ಮ 12ನೇ ಮನೆಯಲ್ಲಿ ಶನಿ ಹಿಮ್ಮುಖನಾಗುತ್ತಾನೆ. ಇದು ನಿಮ್ಮಲ್ಲಿ ಹಲವು ಅನುಕೂಲಗಳಿಗೆ ಕಾರಣವಾಗಲಿದೆ. ನಿಮಗೆ ಶನಿಯ ನಕಾರಾತ್ಮಕ ಪ್ರಭಾವ ಕಡಿಮೆಯಾಗಲಿದೆ, ಇದರಿಂದ ನಿಮ್ಮ ಹಣಕಾಸು ವಿಚಾರದಲ್ಲಿದ್ದ ಅಡ್ಡಿಗಳು ದೂರಾಗಲಿದೆ. ದೀರ್ಘಕಾಲದಿಂದ ಯಾವುದಾದರು ಸಣ್ಣ ಪುಟ್ಟ ಅನಾರೋಗ್ಯದಿಂದ ಬಳಲಿದ್ದರೆ ಈ ಸಮಯದಲ್ಲಿ ಮುಕ್ತ ಪರಿಹಾರ ಪಡೆಯಲಿದ್ದಾರೆ. ನಿಮ್ಮ ಖರ್ಚುಗಳು ಕಡಿಮೆಯಾಗಲಿದೆ. ಸಂಬಂಧಿಕರೊಂದಿಗಿದ್ದ ಸಮಸ್ಯೆಗಳು ಬಗೆಹರಿಯಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಶನಿಯು ಒಂಬತ್ತನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದು, ಶನಿಯ ಹಿಮ್ಮುಖ ಚಲನೆಯಲ್ಲಿ ನಿಮಗೆ ಲಾಭದಾಯಕ. ವ್ಯಾಪಾರಿಗಳು ಬಹಳ ಸಮಯದ ಅಡ್ಡಿ ಆತಂಕ ನಿವಾರಣೆಯಾಗಲಿದೆ. ಕೌಟುಂಬಿಕ ವಿಚಾರವಾಗಿ ಕಾಡಿದ್ದ ಸಮಸ್ಯೆಗಳು ದೂರಾಗಬಹುದು. ಕೆಲಸದ ವಿಚಾರವಾಗಿ ಬಹಳ ದಿನಗಳ ವೈಫಲ್ಯದಿಂದ ನೀವು ಯಶಸ್ಸಿನತ್ತ ಬರಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಶನಿಯು ಎಂಟನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದು, ಈಗ 10ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿರಲಿದ್ದಾನೆ. ಇದರಿಂದಾಗಿ ನಿಮ್ಮ ಅನೇಕ ವಿಚಾರದಲ್ಲಿ ಹಿನ್ನಡೆ ಎದುರಾಗಬಹುದು. ನಿಮ್ಮ ವ್ಯವಹಾರಗಳಲ್ಲಿ ನಿಧಾನಗತಿ ನೋಡಬಹುದು. ನೀವು ಬಯಸದಂತಹ ಖರ್ಚುಗಳು ಕೂಡ ಎದುರಿಸಬೇಕಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರ 7ನೇ ಹಾಗೂ 8ನೇ ಮನೆಯಲ್ಲಿ ಶನಿ ಇರಲಿದ್ದಾನೆ. ಹೀಗಾಗಿ ನೀವು ಮಿಶ್ರ ಫಲ ನೋಡುವಿರಿ. ಧಾರ್ಮಿಕ ವಿಚಾರವಾಗಿ ನಿಗೆ ಲಾಭದಾಯಕ ದಿನ, ನಿಮ್ಮ ಖರ್ಚುಗಳು ಕೂಡ ಕಡಿಮೆಯಾಗಬಹುದು. ಇನ್ನು ನಿಮ್ಮ ಔದ್ಯೋಗಿಕ ವಿಚಾರಗಳಲ್ಲಿ ಒತ್ತಡ ಅಥವಾ ಅಡ್ಡಿಗಳು ಇರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











