Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ನವೆಂಬರ್ 28ಕ್ಕೆ ಶನಿ ವಕ್ರ ಚಲನೆ ಅಂತ್ಯ: ಬಹುದಿನದ ಸಮಸ್ಯೆಗಳು ದೂರ; ಆರ್ಥಿಕ ಸ್ಥಿತಿ ಸುಧಾರಣೆ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಸಂಚಾರ ಹಾಗೂ ಅವುಗಳ ಸ್ಥಾನಪಲ್ಲಟವನ್ನು ಬಹಳ ಪ್ರಮುಖ ವಿದ್ಯಮಾನಗಾಗಿ ಪರಿಗಣಿಸಲಾಗುತ್ತದೆ. ಹಾಗೆ ನಿತ್ಯವೂ ಗ್ರಹಗಳ ಚಲನೆಯಲ್ಲಿನ ಬದಲಾವಣೆಯಿಂದಾಗಿ ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಬೀರುವುದು ನೋಡುತ್ತಿರುತ್ತೇವೆ. ಹಾಗೆ ಗ್ರಹಗಳು ಆಗಾಗ ರಾಶಿ ಬದಲಾಯಿಸುವುದು ನಕ್ಷತ್ರ ಬದಲಾಯಿಸುವುದು ಸಹ ಸಾಮಾನ್ಯ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದೂ ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಮಾನವ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆ ರೀತಿಯಲ್ಲಿ ಜ್ಯೋತಿಷ್ಯದಲ್ಲಿ ನೀತಿವಂತ ಎಂದು ಕರೆಯಲ್ಪಡುವ ಶನಿಯು ಒಂದು ರಾಶಿಯಲ್ಲಿ ದೀರ್ಘಕಾಲ ಪ್ರಯಾಣಿಸುವ ಗ್ರಹವಾಗಿದೆ.

ಶನಿಯು ಪ್ರಸ್ತುತ ಗುರು ಅಧಿಪತ್ಯ ಇರುವ ಮೀನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ವಕ್ರ ಚಲನೆಯಲ್ಲಿದ್ದ ಶನಿಯು ಈಗ ನೇರ ಚಲನೆಗೆ ಮುಂದಾಗುತ್ತಾನೆ. ಇದೆ ನವೆಂಬರ್ 28ಕ್ಕೆ ಶನಿಯ ಚಲನೆಯಲ್ಲಿ ಬದಲಾವಣೆ ಉಂಟಾಗುತ್ತಿದೆ. ಈ ದಿನದಿಂದ ಶನಿಯು ನೇರ ಚಲನೆಗೆ ಮುಂದಾಗುತ್ತಾನೆ. ಹಾಗಾದ್ರೆ ಶನಿಯಿಂದ ಸಮಸ್ಯೆಗಳ ಎದುರಿಸಿದ್ದ ಯಾರಿಗೆಲ್ಲಾ ಈ ಸಮಯದಿಂದ ವಿರಾಮ ಸಿಗಲಿದೆ. ಯಾರಿಗೆ ಶುಭವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಕರ ರಾಶಿ
ಮಕರ ರಾಶಿಯ 3 ನೇ ಮನೆಯಲ್ಲಿ ಶನಿಯು ವಕ್ರ ಚಲನೆಯಿಂದ ನಿರ್ಗಮಿಸಲಿದ್ದಾನೆ. ಇದರಿಂದಾಗಿ ಈ ರಾಶಿ ಜನರಲ್ಲಿ ವಿಪರೀತವಾಗಿದ್ದ ಖರ್ಚುಗಳು ದಿಢೀರ್ ಕಡಿಮೆಯಾಗಲಿದೆ. ಬಹುಸಮಯದಿಂದ ನಿಮ್ಮ ಕೆಲಸಗಳಲ್ಲಿ ಎದುರಿಸಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಲಿದೆ. ಖರ್ಚುಗಳು ಕಡಿಮೆಯಾಗುವ ಕಾರಣ ನಿಮ್ಮಲ್ಲಿ ಹಣದ ಹರಿವು ಹೆಚ್ಚಾಗಲಿದೆ. ಕೌಟುಂಬಿಕ ಜೀವನದ ಕಂಟಕ ನಿವಾರಣೆ ಸಂಭವವಿದೆ. ಗೃಹಿಣಿಯರಲ್ಲಿನ ಅನಾರೋಗ್ಯ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ. ಮಕ್ಕಳ ಉದ್ಯೋಗ ಸಂಬಂಧಿತ ಕಂಟಕ ಕೂಡ ದೂರಾಗುವ ಸಮಯ. ಈ ಸಮಯದಿಂದ ನಿಮ್ಮ ವ್ಯಾಪಾರದಲ್ಲಿನ ಸಮಸ್ಯೆಗಳು ದೂರಾಗಲಿದೆ.
ವೃಷಭ ರಾಶಿ
ಶನಿ ದೇವರು ವೃಷಭ ರಾಶಿಯ 11 ನೇ ಮನೆಯಲ್ಲಿ ವಕ್ರ ಚಲನೆ ಕೊನೆಯಾಗಲಿದೆ. ಇದರಿಂದಾಗಿ ಈ ರಾಶಿ ಜನರಿಗೆ ತಮ್ಮ ಕಾಲಿನ ಮೇಲೆ ನಿಲ್ಲುವ ಅವಕಾಶಗಳು ಬರಲಿವೆ. ಬಹುಸಮಯದಿಂದ ಕಗ್ಗಂಟಾಗಿದ್ದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿದೆ. ಅದ್ರಲ್ಲೂ ಸಾಲ ಪಡೆಯಲು ಬಹುಸಮಯದಿಂದ ಓಡಾಟಗಳ ಮಾಡುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಆಸೆಗಳು ಈಡೇರಲಿದೆ. ಹೂಡಿಕೆಗಳಲ್ಲಿ ಎರಡು ಪಟ್ಟು ಲಾಭ ನೋಡಬಹುದು. ನಿಮ್ಮ ಪಾಲುದಾರಿಕೆ ವ್ಯವಹಾರಗಳು ಶುಭ ತರಲಿವೆ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ಉತ್ತಮ ಫಲಿತಾಂಶ ನೋಡಲಿದ್ದೀರಿ.
ಮಿಥುನ ರಾಶಿ
ಶನಿಯು ಮಿಥುನ ರಾಶಿಯ 10ನೇ ಮನೆಯಲ್ಲಿ ವಕ್ರ ನಿವರ್ತಿಯನ್ನು ಪಡೆಯುತ್ತಾನೆ. ಇದರಿಂದಾಗಿ ನವೆಂಬರ್ 28 ರಿಂದ ಶನಿದೇವರು ನಿಮ್ ಜೀವನವನ್ನು ಹೊಸ ಯಶಸ್ಸಿನ ಎತ್ತರಕ್ಕೆ ಕೊಂಡೊಯ್ಯಲಿದ್ದಾನೆ. ನಿಮ್ಮ ಉನ್ನತ ಅಧಿಕಾರಿಗಳೊಂದಿಗೆ ಸಂಬಂಧ ಉತ್ತಮವಾಗಲಿದೆ. ಉದ್ಯೋಗ ಸ್ಥಳದಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ. ಕೆಲಸದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಾಯಕತ್ವದ ಕೌಶಲ್ಯಗಳು ಸುಧಾರಿಸುತ್ತವೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಿತ ಅಡ್ಡಿಗಳು ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ 9 ನೇ ಮನೆಯಲ್ಲಿ ಶನಿಯು ವಕ್ರ ಸಂಚಾರದಿಂದ ಮುಕ್ತವಾಗುತ್ತಾನೆ. ಇದರಿಂದಾಗಿ ಈ ರಾಶಿ ಜನರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳು ಯಶಸ್ಸನ್ನು ತರುತ್ತವೆ. ವಿದೇಶ ಪ್ರಯಾಣದ ಅವಕಾಶಗಳು ಲಭ್ಯವಾಗುತ್ತವೆ. ಆಧ್ಯಾತ್ಮಿಕ ವಿಚಾರವಾಗಿ ನಿಮ್ಮಲ್ಲಿ ಹೊಸ ಅನುಭಗಳಿಗೆ ಎದುರಾಗುತ್ತೀರಿ. ಆಸ್ತಿ ಸಂಬಂಧಿತ ವಿಚಾರದಲ್ಲಿದ್ದ ಅಡ್ಡಿಗಳು ನಿವಾರಣೆಯಾಗಲಿದೆ. ಕಳೆದ 4 ತಿಂಗಳುಗಳಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications