Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಶನಿ ಚಲನೆಯಿಂದ ತ್ರಿಕೇದಶ ಯೋಗ: ಹಣ, ಮನೆ, ಕೌಟುಂಬಿಕ ಸಮಸ್ಯೆ ದೂರ! ಯಾರಿಗೆಲ್ಲಾ ನೋಡಿ!
ಗ್ರಹಗಳ ಚಲನೆಯು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಮುಖ ವಿದ್ಯಮಾನಗಳಾಗಿ ಪರಿಗಣಿಸಲಾಗಿದೆ. ಹಾಗೆ ಎಲ್ಲಾ ಗ್ರಹಗಳು ಕೂಡ ಒಂದಲ್ಲಾ ಒಂದು ರೀತಿಯಲ್ಲಿ 12 ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತವೆ. ಅದ್ರಲ್ಲೂ ನಾವಿಂದು ಈ ಗ್ರಹಗಳ ಚಲನೆಯಿಂದ ಉಂಟಾಗುವ ಸಂಯೋಗ ಹಾಗೂ ರೂಪುಗೊಳ್ಳುವ ಯೋಗಗಳ ಕುರಿತಾಗಿ ತಿಳಿದುಕೊಳ್ಳೋಣ.
ಪ್ರಸ್ತುತ ಶನಿ ಮೀನ ರಾಶಿಯಲ್ಲಿದ್ದು, ಈ ಸಮಯದಲ್ಲಿ 7ನೇ ಗ್ರಹ ಯುರೇನೆಸ್ ವೃಷಭ ರಾಶಿಯಲ್ಲಿ ಚಲಿಸಲಿದ್ದಾನೆ. ಈ ಎರಡೂ ಗ್ರಹಗಳ ನಡುವೆ 60 ಡಿಗ್ರಿ ಕೋನದಲ್ಲಿ ಸಂಚಾರ ಇರಲಿದೆ. ಇದು ಖಗೋಳದಲ್ಲಿ ವಿಸ್ಮಯಕಾರಿ ಯೋಗಕ್ಕೆ ಕಾರಣವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಶನಿಯ ಜೊತೆಗೆ 60 ಡಿಗ್ರಿ ಕೋನದಲ್ಲಿ ಯಾವುದಾದರು ಗ್ರಹವು ನೇರವಾಗಿ ಚಲಿಸುವುದು ಹಲವು ರೀತಿಯ ಯೋಗಗಳ ರಚನೆಗೆ ಕಾರಣವಾಗುತ್ತದೆ.

ಈಗ ಇದೇ ಆಗಸ್ಟ್ 12ರಂದು ಶನಿ ಹಾಗೂ ಯುರೇನೆಸ್ 60 ಡಿಗ್ರಿ ಕೋನದಲ್ಲಿ ಚಲಿಸಲಿದ್ದಾರೆ. ಇದರಿಂದ ಅಪರೂಪದ ಯೋಗವಾಗಿರುವ ತ್ರಿಕೇದಶ ಯೋಗ ರೂಪುಗೊಳ್ಳುತ್ತವೆ. ಈ ಯೋಗವು 30 ವರ್ಷಗಳ ಬಳಿಕ ರೂಪುಗೊಳ್ಳುತ್ತಿದೆ ಎಂದು ಹೇಳಲಾಗಿದೆ. ಇದು ಯಾವೆಲ್ಲಾ ರಾಶಿಗಳಿಗೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ತ್ರಿಕೇದಶ ಯೋಗವು ಕರ್ಕ ರಾಶಿಯವರಿಗೆ ಬಹಳಷ್ಟು ಲಾಭಕ್ಕೆ ಕಾರಣವಾಗುತ್ತಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸವೊಂದನ್ನು ಪೂರ್ಣ ಮಾಡಲಿದ್ದೀರಿ. ವೃತ್ತಿ ಜೀವನದಲ್ಲಿ ನಿಮ್ಮ ಬಯಕೆಯಂತೆ ಧನಾತ್ಮಕ ಬದಲಾವಣೆಗಳ ನೋಡಬಹುದು. ಉದ್ಯೋಗದಲ್ಲಿರುವವರು ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆ, ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರ ವೃದ್ದಿಗೆ ಬಯಸಿ ಹೊಸ ಕೆಲಸಕ್ಕೆ ಕೈ ಹಾಕಿದ್ದರೆ ಈ ಸಮಯದಲ್ಲಿ ಫಲ ನೀಡಲಿದೆ. ಹಣಕಾಸಿನ ವಿಚಾರದಲ್ಲಿ ಲಾಭದಾಯಕ ದಿನಗಳಿವೆ. ಹಣ ಸ್ಥಿರವಾಗಲಿದೆ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರಲಿದೆ. ಪ್ರೇಮ ಸಂಬಂಧಗಳು ಮತ್ತಷ್ಟು ಹತ್ತಿರವಾಗಲಿದೆ.
ವೃಶ್ಚಿಕ ರಾಶಿ
ತ್ರಿಕೇದಶ ಯೋಗದಿಂದ ವೃಶ್ಚಿಕ ರಾಶಿಯವರಲ್ಲಿ ಹೊಸ ರೀತಿಯ ಬೆಳವಣಿಗೆಗಳ ನೀಡಬಹುದು. ನಿಮ್ಮ ಹಣಕಾಸಿನ ಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಲಿದೆ. ಹಾಗೆ ನಿಮ್ಮ ಹಲವು ದಿನಗಳ ಬಯಕೆಗಳು ಈಡೇರಲಿವೆ. ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆ ನೋಡಬಹುದು. ನಿರುದ್ಯೋಗಿಗಳು ಈ ಸಮಯದಲ್ಲಿ ಲಾಭದಾಯಕ ಅವಕಾಶ ಪಡೆಯಲಿದ್ದಾರೆ. ಸ್ವಂತ ಉದ್ಯೋಗ ಮಾಡುತ್ತಿದ್ದವರು ಮತ್ತಷ್ಟು ಪ್ರಗತಿಗೆ ಮುಂದಾಗುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಂಡವರಿಗೆ ಈ ಸಮಯ ಬಹಳ ಉತ್ತಮವಾಗಿರಲಿದೆ. ದಾಂಪತ್ಯದಲ್ಲಿ ವಿಶೇಷ ರೀತಿಯ ಒಲವು ಇರಲಿದೆ, ಹಳೆಯ ಮನಸ್ತಾಪ, ಮುನಿಸುಗಳ ಶಮನವಾಗಲಿದೆ.
ಕುಂಭ ರಾಶಿ
ಈ ಅಪರೂಪದ ಯೋಗದಿಂದಾಗಿ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ನೋಡುವಿರಿ. ಹಾಗೆ ಇದು ನಿಮ್ಮ ಕೆಲಸ ಕಾರ್ಯಗಳಲ್ಲಿ ಅದೃಷ್ಟ ತರಲಿದೆ. ಆರೋಗ್ಯ ಸುಧಾರಣೆಯಿಂದ ಹಿಡಿದು, ಬಹಳ ವರ್ಷದಿಂದ ಕಾಡಿದ್ದ ಅನಾರೋಗ್ಯವೊಂದು ನಿವಾರಣೆಯಾಗಲಿದೆ. ನಿಮ್ಮ ಕೆಲಸದಲ್ಲಿ ಅಡ್ಡಿಯಾಗಿದ್ದ ವಿಚಾರವೊಂದು ಬಗೆಹರಿಯಲಿದೆ. ವಿವಾಹ ಸಂಬಂಧಿ ಕಂಟಕ ದೂರಾಗಲಿದೆ. ಪೂರ್ವಜರ ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಯಶಸ್ಸು ಇರಲಿದೆ. ಸಾಮಾಜಿಕ ಗೌರವ ಹೆಚ್ಚಾಗುವಂತಹ ಕೆಲಸ ಮಾಡಲಿದ್ದೀರಿ. ಮನೆ ಕಟ್ಟಿಸುವ ವಿಚಾರದಲ್ಲಿ ಇದ್ದಂತಹ ಗೊಂದಲ ಹಾಗೂ ಸಮಸ್ಯೆ ದೂರಾಗಲಿದೆ. ನಿಮಗೆ ಆಪ್ತರಿಂದ ಬರಬೇಕಿದ್ದ ಹಣ ಕೈ ಸೇರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications











