Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
2026ರಲ್ಲಿ 3 ಬಾರಿ ಶನಿ ನಕ್ಷತ್ರ ಬದಲಾವಣೆ: ಈ ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ; ಜೀವನದಲ್ಲಿದೆ ಉನ್ನತಿ!
ಜ್ಯೋತಿಷ್ಯದ ಪ್ರಕಾರ ಕಾಲಕಾಲಕ್ಕೆ ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ಸಾಮಾನ್ಯ. ಅದ್ರಲ್ಲೂ ರಾಶಿಗಳ ಜೊತೆಗೆ ಅವು ನಕ್ಷತ್ರಗಳ ಬದಲಾವಣೆ ಮಾಡುವುದು ಸಹ ನೋಡಬಹುದು. ಹೀಗೆ ರಾಶಿ ಮತ್ತು ನಕ್ಷತ್ರ ಬದಲಾವಣೆಯಿಂದಾಗಿ ಮಾನವ ಜೀವನದಲ್ಲಿನ ಹಲವು ರೀತಿ ಬದಲಾವಣೆಗಳು ಸಂಭವಿಸುವುದು ಕಂಡುಬರುತ್ತದೆ. ಇನ್ನು ಈ ಬದಲಾವಣೆಗಳಿಂದಾಗಿ ವ್ಯಕ್ತಿಯ ಜೀವನದಲ್ಲಿ ಬಹುಮುಖ್ಯ ತಿರುವುಗಳು ಸಂಭವಿಸುವುದು ಸಹ ನೋಡಬಹುದು.
ಈ 2026ರಲ್ಲಿ ಹಲವು ಗ್ರಹಗಳು ನಕ್ಷತ್ರ ಬದಲಾವಣೆ ಮಾಡುತ್ತಿವೆ. ಆದ್ರೆ ನಾವಿಂದು ಈ ಶನಿ ಗ್ರಹದ ಕುರಿತಾಗಿ ತಿಳಿದುಕೊಳ್ಳೋಣ. ಶನಿಯನ್ನು ಪಾಪ ಕರ್ಮಗಳ ದಯಪಾಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಹಾಗೆ ಶನಿಯ ಆಶೀರ್ವಾದವಿದ್ದರೆ ಜೀವನದಲ್ಲಿ ಎಂತಹ ಸಮಸ್ಯೆಯನ್ನಾದರು ಎದುರಿಸಬಹುದು. ಒಂದು ವೇಳೆ ಶನಿ ನಿಮ್ಮ ಜಾತಕದಲ್ಲಿ ದೋಷ ತರುವ ಮನೆಯಲಿದ್ದರೆ ನಿಮಗೆ ಶನಿಯಿಂದ ಹಲವು ಬಗೆಯ ಸಮಸ್ಯೆಗಳು ಎದುರಾಗುವುದು ಖಚಿತ.

2026ರಲ್ಲಿ ಶನಿ ಬರೋಬ್ಬರಿ ಮೂರು ಬಾರಿ ತನ್ನ ನಕ್ಷತ್ರ ಬದಲಾಯಿಸಲಿದ್ದಾನೆ. ಹಾಗೆ ಹಲವು ಗ್ರಹಗಳೊಂದಿಗೆ ಸಂಯೋಗವಾಗಲಿದ್ದಾನೆ. ಮೊದಲು ಜನವರಿ 20 ರಂದು ಶನಿಯು ಉತ್ತರ ನಕ್ಷತ್ರಕ್ಕೆ, ನಂತರ ಮೇ 17 ರಂದು ರೇವತಿ ನಕ್ಷತ್ರಕ್ಕೆ ಮತ್ತು ನಂತರ ಅಕ್ಟೋಬರ್ 09 ರಂದು ಶನಿ ಮತ್ತೆ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಈ ವರ್ಷ ಶನಿ ಇತರ ಗ್ರಹಗಳೊಂದಿಗೆ 3 ಬಾರಿ ನವಪಂಚಮ ರಾಜಯೋಗವನ್ನು ರೂಪಿಸುತ್ತಾನೆ. ಈ ರಾಜಯೋಗದ ಪ್ರಭಾವವು ಎಲ್ಲಾ ರಾಶಿ ಜನರ ಜೀವನದಲ್ಲಿ ಕಂಡುಬರುತ್ತದೆ. ಕೆಲವು ರಾಶಿ ಜನರ ಅದೃಷ್ಟವು ಉತ್ತುಂಗ ಸ್ಥಿತಿಗೆ ತಲುಪಿದ್ದಾರೆ. ಹಾಗೆ ವ್ಯವಹಾರ ಸೇರಿ ಹಲವು ವಿಚಾರದಲ್ಲಿ ಶುಭವಾಗಲಿದೆ. ಹಾಗಾದ್ರೆ ಶನಿಯ ಆಶೀರ್ವಾದ ಪಡೆಯುವ ರಾಶಿಗಳ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
2026 ರಲ್ಲಿ 3 ಬಾರಿ ಸಂಭವಿಸುವ ಶನಿ ಸಂಚಾರದಿಂದಾಗಿ ವೃಷಭ ರಾಶಿಯವರಿಗೆ ಅನುಕೂಲಕರ ವಾತಾವರಣ ಇರಲಿದೆ. ಶನಿಯಿಂದ ಆಶೀರ್ವಾದ ಪಡೆಯುವ ರಾಶಿಗಳಲ್ಲಿ ವೃಷಭ ರಾಶಿಯವರು ಉತ್ತಮ ದಿನಗಳ ನೋಡಲಿದ್ದಾರೆ. 2026ರಲ್ಲಿ ನಿಮ್ಮಲ್ಲಿ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಲಿವೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರವಾಗಿ ಬಡ್ತಿ, ವೇತನ ಹೆಚ್ಚಳದಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ. ಹೂಡಿಕೆಗಳಿಂದ ಉತ್ತಮ ಲಾಭವಾಗುತ್ತದೆ. ಉದ್ಯಮಿಗಳ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಅವರು ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಸಹ ನೀವು ಪಡೆಯುತ್ತೀರಿ. ಶನಿಯ ಅನುಗ್ರಹದ ಮೂಲಕ ನಿಮ್ಮ ಆಸ್ತಿ ಸಂಬಂಧಿತ ವಿಚಾರವಾಗಿ ಶುಭವಾಗಲಿದೆ.
ಕುಂಭ ರಾಶಿ
2026 ರಲ್ಲಿ 3 ಬಾರಿ ಸಂಭವಿಸುವ ಶನಿ ಸಂಚಾರದಿಂದಾಗಿ ಕುಂಭ ರಾಶಿಯವರಿಗೆ ಕಾಲಕಾಲಕ್ಕೆ ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗುತ್ತವೆ. ನೀವು ದೀರ್ಘಕಾಲದ ಸಾಲ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಬಹು ಸಮಯದಿಂದ ನಿಮಗೆ ಬರಬೇಕಿದ್ದ ಹಣವು ನಿಮ್ಮ ಕೈ ಸೇರಲಿದೆ. ಮುಂವರುವ ವರ್ಷದಲ್ಲಿ ಆಸ್ತಿ ಸಂಬಂಧಿ ವಿಚಾರದಲ್ಲಿದ್ದ ಅಡ್ಡಿ ಆತಂಕಗಳು ದೂರಾಗಲಿದೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ನಿಮ್ಮ ಆಪ್ತರೊಂದಿಗಿನ ಸಂಬಂಧಗಳು ಗಟ್ಟಿಯಾಗುತ್ತವೆ.
ತುಲಾ ರಾಶಿ
2026 ರಲ್ಲಿ ಶನಿಯ 3 ಸಂಚಾರವು ತುಲಾ ರಾಶಿಯವರ ಜೀವನದಲ್ಲಿ ಬದಲಾವಣೆಗಳು ಬರಲಿವೆ. ಅದ್ರಲ್ಲೂ ಅವಿವಾಹಿತರಲ್ಲಿ ದೊಡ್ಡ ಮಟ್ಟದ ಲಾಭಗಳಿವೆ. ನಿಮ್ಮ ವಿವಾಹ ಸಂಬಂಧಿತ ವಿಚಾರದಲ್ಲಿ ಶುಭವಿದೆ. ವ್ಯಾಪಾರದಲ್ಲಿ ಇದ್ದಂತಹ ಅಡ್ಡಿಗಳು ನಿವಾರಣೆಯಾಗಲಿದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ನಿಮ್ಮ ಮನೆ ನಿರ್ಮಾಣ, ಆಸ್ತಿ ಖರೀದಿ, ವಾಹನ ಖರೀದಿ ಸಂಬಂಧಿತ ಬಹುಸಮಯದ ಆಸೆಗಳು ಈಡೇರಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











