Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಒಂದೇ ರಾಶಿಯಲ್ಲಿ ಶನಿ-ಶುಕ್ರ ಸಂಯೋಗ: ಆಗಸ್ಟ್ 1ರಿಂದ ಒಲಿಯಲಿದೆ ಅದೃಷ್ಟ!
ಜ್ಯೋತಿಷ್ಯದಲ್ಲಿ ಶನಿ ಗ್ರಹವನ್ನು ಬಹಳ ಪ್ರಮುಖ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶನಿಯು ಕರ್ಮಗಳ ಗ್ರಹಗಳ ಎಂದು ಕರೆಯಲಾಗಿದೆ. ಶನಿ ಒಂದೇ ರಾಶಿಯಲ್ಲಿ ಬರೋಬ್ಬರಿ ಎರಡೂವರೆ ವರ್ಷ ಚಲಿಸಲಿದ್ದಾನೆ. ಹೀಗೆ ನಿಧಾನವಾಗಿ ಚಲಿಸುವ ಗ್ರಹ ಆಗಿರುವುದರಿಂದ ಮತ್ತು ಒಂದೇ ಗ್ರಹದಲ್ಲಿ ಹಲವು ಕಾಲ ಇರುವುದರಿಂದ ಹಲವು ಗ್ರಹಗಳೊಂದಿಗೆ ಸಂಯೋಗವಾಗುತ್ತದೆ.
ಶನಿ ಮಕರ ಹಾಗೂ ಕುಂಭ ರಾಶಿಯ ಅಧಿಪತಿಯಾಗಿದ್ದಾನೆ. ಆದ್ರೆ ಪ್ರಸ್ತುತ ಮೀನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಅದೇ ರಾಶಿಯಲ್ಲಿ ಮುಂದಿನ ಎರಡೂವರೆ ವರ್ಷ ಇರಲಿದ್ದಾನೆ. ಈ ಅವಧಿಯಲ್ಲಿ ಶನಿ ಇತರ ಗ್ರಹದೊಂದಿಗೆ ಸಂಯೋಗವಾಗುತ್ತಾನೆ. ಇದರಿಂದ ಹಲವು ರೀತಿಯಲ್ಲಿ ಶುಭ ಹಾಗೂ ಅಶುಭ ಯೋಗಗಳು ರೂಪುಗೊಳ್ಳುತ್ತವೆ.

ಸದ್ಯ ಈಗ ಶನಿ ಹಾಗೂ ಶುಕ್ರ ಒಂದೇ ರಾಶಿಯಲ್ಲಿ ಚಲಿಸಲಿದ್ದಾರೆ. ಆಗಸ್ಟ್ 1ರಂದು ಮಿನ ರಾಶಿಯಲ್ಲಿ ಶನಿ ಹಾಗೂ ಶುಕ್ರರು ಸಂಯೋಗವಾಗುವುದರಿಂಧ ಅಲ್ಲಿ ಕೇಂದ್ರ ಯೋಗ ರೂಪುಗೊಳ್ಳುತ್ತದೆ. ಈ ಕೇಂದ್ರ ಯೋಗದ ಸಮಯದಲ್ಲಿ ಶನಿ ಮತ್ತು ಶುಕ್ರ ಪರಸ್ಪರ 90 ಡಿಗ್ರಿಗಳಲ್ಲಿ ಚಲಿಸುತ್ತಾರೆ. ಈ ಯೋಗದ ಪ್ರಭಾವವು ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿ ಮೇಲೆಯೂ ಪರಿಣಾಮ ಬೀರಲಿದೆ. ಹಾಗೆ ಹಲವು ರೀತಿಯ ಬದಲಾವಣೆಗಳಿಗೆ ಇದು ಕಾರಣವಾಗುತ್ತಿದೆ. ಅದ್ರಲ್ಲೂ ನಾವಿಂದು ಶನಿ-ಶುಕ್ರರ ಸಂಯೋಗದಿಂದ ಯಾರಿಗೆಲ್ಲಾ ಲಾಭದಾಯಕ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಕೇಂದ್ರ ಯೋಗದಿಂದ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಸಂಬಂಧಗಳಲ್ಲಿ ಲಾಭದಾಯಕ ಅಥವಾ ಉತ್ತಮ ರೀತಿಯ ಧನಾತ್ಮಕ ಬದಲಾವಣೆಗೆ ಕಾರಣವಾಗಲಿದೆ. ಆದಾಯದಲ್ಲಿ ಏರಿಕೆ ನೋಡಬಹುದು. ನೀವು ಬಹಳ ಸಮಯದಿಂದ ಕೆಲಸದಲ್ಲಿ ಎದುರಿಸಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ದಾಂಪತ್ಯದಲ್ಲಿ ಸಂತಸದ ವಾತಾವರಣ ಇರಲಿದೆ. ದೊಡ್ಡ ಕನಸೊಂದನ್ನು ಈಡೇರಿಸಿಕೊಳ್ಳಬಹುದು. ಪ್ರೀತಿಯ ವಿಚಾರದಲ್ಲಿ ನಿಮಗೆ ಬಹಳ ಉತ್ತಮ ದಿನವಾಗಿರಲಿದೆ. ದೂರ ಪ್ರಯಾಣಗಳಲ್ಲಿ ನಿಮಗೆ ಲಾಭದಾಯಕ ದಿನಗಳಿವೆ.
ಮಿಥುನ ರಾಶಿ
ಕೇಂದ್ರ ಯೋಗದಿಂದಾಗಿ ಮಿಥುನ ರಾಶಿಯವರು ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶಗಳನ್ನು ಪಡೆಯುತ್ತಾರೆ. ಪಿತ್ರಾರ್ಜಿತ ಆಸ್ತಿ ಸಂಬಂಧವಾಗಿ ನಿಮಗೆ ಲಾಭದಾಯಕ ದಿನ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಿಂದ ನಿಮಗೆ ಉತ್ತಮ ಪರಿಹಾರ ಸಿಗುತ್ತದೆ. ಆರೋಗ್ಯ ಸಮಸ್ಯೆಗಳಿದ್ದರೆ, ಅದು ಕೊನೆಗೊಳ್ಳುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಸುಲಭವಾಗಿ ಹಣ ಗಳಿಸುವ ಅವಕಾಶ ಸಿಗಬಹುದು. ಉತ್ತಮ ಕೆಲಸಗಳಲ್ಲಿ ನೀವು ಭಾಗಿಗಳಾಗುತ್ತೀರಿ. ವಿದೇಶ ಪ್ರಯಾಣ, ಶುಭ ಕಾರ್ಯಗಳು, ಪ್ರವಾಸದಂತಹ ವಿಚಾರಗಳಲ್ಲಿ ನೀವು ಸಕ್ರೀಯರಾಗಿರುತ್ತೀರಿ.
ಕುಂಭ
ಕುಂಭ ರಾಶಿಯವರಿಗೆ ಕೇಂದ್ರ ಯೋಗವು ಪ್ರೇಮ ಜೀವನದಲ್ಲಿ ಉತ್ತಮ ಬದಲಾವಣೆಗಳ ತರುತ್ತದೆ. ಸಂಬಂಧಗಳಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕೆಲಸ ಮಾಡುವವರಿಗೆ ಈ ಅವಧಿ ಅನುಕೂಲಕರವಾಗಿರುತ್ತದೆ. ವೇತನ ಹೆಚ್ಚಳ, ಬಡ್ತಿ ವಿಚಾರವಾಗಿ ನೀವು ಅಂದುಕೊಂಡ ದಿನಗಳು ಬರಲಿವೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿವೆ. ಅವಿವಾಹಿತರಿಗೆ ಶುಭ ಸುದ್ದಿ ಬರುವ ಕಾಲ ಇದಾಗಿರಲಿದೆ. ವಾಹನ ಸಂಬಂಧಿ ಶುಭ ಯೋಗ ಇರಲಿದೆ. ಆಸ್ತಿ ವಿಚಾರದಲ್ಲಿ ಕುಟುಂಬಸ್ಥರ ನಡುವೆ ಇದ್ದ ಮನಸ್ತಾಪಗಳು ಶಮನ ಆಗಬಹುದು. ಮನೆ ಕಟ್ಟಿಸುತ್ತಿದ್ದವರಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











