Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಕ್ರಾಂತಿಯಲ್ಲಿ ಶನಿ-ಶುಕ್ರ ಸಂಯೋಗ; 30 ವರ್ಷದ ಬಳಿಕ ಬಯಸಿದ ಅದೃಷ್ಟ!
ವೈದಿಕ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳ ಚಲನೆಯು ಬಹಳ ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಹಾಗೆ ಅನೇಕ ಗ್ರಹಗಳ ಚಲನೆಯು ವರ್ಷದ ಆರಂಭದಲ್ಲಿ ಸಂಭವಿಸುತ್ತಿದೆ. ಈ ರೀತಿ ಗ್ರಹಗಳ ಚಲನೆಯು ಹಲವು ರೀತಿಯಲ್ಲಿ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡಲಿವೆ. ಎಲ್ಲಾ ಗ್ರಹಗಳು ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಅನೇಕ ರಾಶಿಗಳಿಗೆ ಅನುಕೂಲಕರ ಹಾಗೆ ಅನಾನುಕೂಲವನ್ನು ತರಲಿದೆ.
2026ರಲ್ಲಿ ಪ್ರಬಲ ರಾಶಿಗಳ ಸ್ಥಾನ ಬದಲಾವಣೆ ಮಾಡುವುದು ಸಹ ನೋಡಬಹುದು. ಈಗ ಶನಿ ಹಾಗೂ ಶುಕ್ರನು ತನ್ಮ ಸ್ಥಾನ ಬದಲಾಯಿಸುತ್ತಿವೆ. ಜನವರಿ 15ರಂದು 30 ವರ್ಷಗಳ ಬಳಿಕ ಶನಿ ಹಾಗೂ ಶುಕ್ರನಿಂದ ತ್ರಿ ಏಕಾದಶ ಯೋಗ ರೂಪುಗೊಳ್ಳಲಿದೆ. ಸಂಕ್ರಾಂತಿಯ ದಿನ ಶನಿ ಹಾಗೂ ಶುಕ್ರನ ಸಂಯೋಗವಾಗುತ್ತಿದೆ. ಈ ಸಂಯೋಗವು 30 ವರ್ಷಗಳ ಬಳಿಕ ನಡೆಯುತ್ತಿದೆ.

ಹೀಗಾಗಿ ಶನಿ ಹಾಗೂ ಶುಕ್ರನ ಸಂಯೋಗದಿಂದ ಯಾರಿಗೆಲ್ಲಾ ಲಾಭದಾಯಕ? ಯಾವ ರಾಶಿಯವರಿಗೆ ಶುಭದಾಯಕ? ಯಾರಿಗೆಲ್ಲಾ ಶನಿ ಹಾಗೂ ಶುಕ್ರನು ಅದೃಷ್ಟ ತರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಅಪರೂಪದ ಗ್ರಹ ಸಂಯೋಗವು ಬಹಳ ಅದ್ಭುತವಾದ ಬದಲಾವಣೆಗಳ ತರಲಿದೆ. ಈ ಯೋಗದಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅವರಿಗೆ ವಿದೇಶ ಪ್ರಯಾಣದ ಅವಕಾಶಗಳು ಸಿಗುತ್ತವೆ. ಕೆಲಸದಲ್ಲಿರುವವರಿಗೆ ಬಡ್ತಿಗೆ ಅವಕಾಶಗಳು ಸಿಗುತ್ತವೆ. ನಿಮ್ಮ ಅನೇಕ ಆರ್ಥಿಕ ವಿಚಾರಗಳಲ್ಲಿ ಲಾಭವಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವೊಂದು ನಿಮ್ಮ ಕೈ ಸೇರಲಿದೆ. ಮನೆಯ ವಾತಾವರಣದಲ್ಲಿ ಶಾಂತಿ ಇರಲಿದೆ. ನಿಮ್ಮ ಮಾನಸಿಕ ನೆಮ್ಮದಿಕೆ ಕಾರಣವಾಗುವ ಹಲವು ವಿಚಾರಗಳು ನಡೆಯಲಿದೆ. ವ್ಯವಹಾರದಲ್ಲಿ ಲಾಭ ನೋಡುವ ಸಮಯ ಇದಾಗಿರಲಿದೆ. ಕುಟುಂಬ ವಿಚಾರದಲ್ಲಿ ನಿಮಗೆ ಶುಭವಾಗುವುದು ನೋಡಬಹುದು.
ಮೇಷ ರಾಶಿ
30 ವರ್ಷಗಳ ನಂತರ ರೂಪುಗೊಳ್ಳುವ ಈ ರಾಜಯೋಗವು ಮೇಷ ರಾಶಿಯವರಿಗೆ ಅನಿರೀಕ್ಷಿತ ಪ್ರಯೋಜನಗಳ ತರುತ್ತದೆ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಸುಖವಿದೆ. ವ್ಯವಹಾರವನ್ನು ಬದಲಾಯಿಸುವ ನಿಮ್ಮ ಬಯಕೆಯನ್ನು ಈ ಸಮಯದಲ್ಲಿ ಈಡೇರಿಸಿಕೊಳ್ಳಬಹುದು. ವಿವಿಧ ರೀತಿಯ ಹೊಸ ಬಯಕೆಗಳನ್ನು ಈಡೇರಿಸಿಕೊಳ್ಳುವಿರಿ. ವ್ಯಾಪಾರದಲ್ಲಿ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ನಿಮ್ಮ ಅನೇಕ ಪ್ರಯತ್ನಗಳಲ್ಲಿ ಶುಭ ಫಲಿತಾಂಶ ನೋಡಬಹುದು. ಸ್ವಂತ ಉದ್ಯೋಗದಲ್ಲಿ ಇದ್ದಂತಹ ಅಡ್ಡಿ ಆತಂಕಗಳು ದೂರಾಗಲಿದೆ. ಹೊಸ ಹೂಡಿಕೆಗಳನ್ನು ಮಾಡಲು ಇದು ಉತ್ತಮ ಸಮಯವಾಗಿರುತ್ತದೆ. ಮಕ್ಕಳ ಮೂಲಕ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಆರೋಗ್ಯವು ಉತ್ತಮವಾಗಿದೆ.
ಮಕರ ರಾಶಿ
ಈ ಯೋಗವು ಮಕರ ಸಂಕ್ರಾಂತಿ ಜನರಿಗೆ ಉತ್ತಮ ಪ್ರಯೋಜನಗಳನ್ನು ನೀಡಲಿದೆ. ಈ ಅವಧಿಯಲ್ಲಿ, ಅವರು ತಮ್ಮ ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ಈ ರಾಜ ಯೋಗವು ಅವರಿಗೆ ಗಮನಾರ್ಹ ಆರ್ಥಿಕ ಲಾಭಗಳನ್ನು ನೀಡುತ್ತದೆ. ಅಲ್ಲದೆ, ಈ ಅವಧಿಯಲ್ಲಿ ಹೂಡಿಕೆಗಳಿಂದ ಅವರು ಅನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಈ ಅವಧಿಯಲ್ಲಿ ಉತ್ತಮ ಯಶಸ್ಸನ್ನು ನಿರೀಕ್ಷಿಸಬಹುದು. ಕುಟುಂಬ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಶುಭವಿದೆ. ವಾಹನ ಖರೀದಿಯ ಲಾಭವೂ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications