Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವಂಬರ್‌ನಲ್ಲಿ ಶನಿ ಸಂಚಾರ..! ಯಾವೆಲ್ಲಾ ರಾಶಿಯವರಿಗೆ ಶುಭ ಕಾಲ ನೋಡಿ..!!
ನವೆಂಬರ್‌ನಲ್ಲಿ ಸಾಲು ಸಾಲು ಹಿಂದೂ ಹಬ್ಬಗಳು ಬರುತ್ತವೆ, ಅದರಲ್ಲೂ ದೇವಿ ಆರಾಧನೆ ಈ ತಿಂಗಳಲ್ಲಿ ನೆರವೇರುತ್ತದೆ. ಹೀಗಾಗಿ ಹಬ್ಬಗಳ ಪಾಲಿಗೆ ಈ ತಿಂಗಳು ಬಹಳ ಮುಖ್ಯ, ಹಾಗೆ ಜ್ಯೋತಿಷ್ಯದ ದೃಷ್ಟಿಯಂದಲೂ ಬಹಳ ಮುಖ್ಯ ಎನಿಸಿರುವ ತಿಂಗಳಾಗಿದೆ. ಏಕೆಂದರೆ ಈ ತಿಂಗಳಲ್ಲಿ ಶನಿಯ ಸಂಚಾರದಲ್ಲಿ ಬದಲಾವಣೆಯಾಗಲಿದೆ. ಇದು ಕೆಲವೊಂದು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಾಗಾದ್ರೆ ನವೆಂಬರ್‌ನಲ್ಲಿ ಯಾವ ರಾಶಿಗಳಿಂದ ಶನಿ ಸಂಚಾರ ಮಾಡಲಿದೆ. ಯಾವ ರಾಶಿಗೆ ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ.
ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ರಾಶಿಯನ್ನು ಪ್ರವೇಶಿಸುವುದರಿಂದ ಉಳಿದಂತೆ ಕೆಲ ರಾಶಿಗಳಿಗೆ ಅಷ್ಟಮ ಶನಿ, ಅರ್ಥಾಷ್ಟಮ ಶನಿಯ ಪ್ರಭಾವ ಬೀರಲಿದೆ. ನವೆಂಬರ್‌ನಲ್ಲಿ ಶನಿಯು ವಕ್ರ ಚಲನೆಯಲ್ಲಿರುತ್ತಾನೆ. ಹೀಗಾಗಿ ಶನಿಯಿಂದ ಉಂಟಾಗುವ ಹಲವು ಕಷ್ಟಗಳು ದೂರಾಗಲಿದೆ. ಪ್ರಗತಿ, ಆರ್ಥಿಕ ಸ್ಥತಿ ಸುಧಾರಿಸಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಸಾಗುವುದರಿಂದ ಅಷ್ಟಮ ಶನಿಯು ಕರ್ಕಾಟಕ ರಾಶಿಯ 8ನೇ ಮನೆಯಲ್ಲಿ ಶನಿಯು ಚಲಿಸುವುದರೊಂದಿಗೆ ಮತ್ತು ಅರ್ಥಾಷ್ಟಮ ಶನಿಯು ಶನಿಯು ವೃಶ್ಚಿಕ ರಾಶಿಯ 4ನೇ ಮನೆಯಲ್ಲಿ ಚಲಿಸುವ ಮೂಲಕ ಪ್ರಾರಂಭವಾಗುತ್ತದೆ. ಅಂದರೆ ನವೆಂಬರ್ ಅಂತ್ಯದಲ್ಲಿ ಶನಿ ಸಂಚಾರ ಅಂತ್ಯವಾಗಲಿದೆ. ಹೀಗಾಗಿ ಈ ರಾಶಿಯ ಜನರಿಗೆ ಅದೃಷ್ಟ ಬದಲಾಗಲಿದೆ. ಉದ್ಯಮಿಗಳಿಗೆ ಉತ್ತಮ ಆರ್ಥಿಕ ಲಾಭ ದೊರೆಯಲಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿದೆ. ಹಣಕಾಸು ಸಮಸ್ಯೆಗಳಿಂದ ನೀವು ದೂರಾಗುವ ಸಂಭವವಿದೆ.
15 ನವೆಂಬರ್ 2024 ರಂದು, ಶನಿಯು ಕುಂಭ ರಾಶಿಯಲ್ಲಿ ಸಂಜೆ 05:09ಕ್ಕೆ ಸಂಚರಿಸುತ್ತಾನೆ. ಹೀಗಾಗಿ ಯಾವ ರಾಶಿಯವರು ಲಾಭ ಪಡೆಯುತ್ತಾರೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಶನಿಯು ಕುಂಭರಾಶಿಯ ಚಲನೆಯು ಮಿಥುನ ರಾಶಿಯವರಿಗೆ ಅನುಕೂಲಕರವಾಗಲಿದೆ. ಮಿಥುನ ರಾಶಿ ಜನರು ಅದೃಷ್ಟ ಬೆಂಬಲ ಪಡೆಯಲಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಅವರು ಯಶಸ್ಸು ಸಾಧಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಅವರಿಗೆ ತಾವು ಪಟ್ಟಿರುವ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯವಿದು. ಹಠಾತ್ ಆಗಿ ಆರ್ಥಿಕ ಲಾಭ ಹೆಚ್ಚಾಗಿವ ಸಂಭವವಿದೆ. ಜೊತೆಗೆ ಈಗಿರುವ ಜವಾಬ್ದಾರಿಯೊಂದಿಗೆ ಮತ್ತಷ್ಟು ಜವಾಬ್ದಾರಿಗಳು ನಿಮ್ಮನ್ನು ಸೇರಿಕೊಳ್ಳಲಿದೆ. ಇದರಿಂದ ಮತ್ತಷ್ಟು ಕೆಲಸಗಳು ನಿಮ್ಮ ಕಡೆಯಿಂದ ನಡೆಯಲಿದೆ.
ವೃಶ್ಚಿಕ ರಾಶಿ
ಮಂಗಳ ಗ್ರಹವು ವೃಶ್ಚಿಕ ರಾಶಿಯ ಆಡಳಿತ ಗ್ರಹ. ಹೀಗಾಗಿ ಶನಿಗೆ ಇದು ನೇರವಾಗಿ ಸಂಬಂಧಿಸಿದೆ. ಈ ರಾಶಿಯವರಿಗೆ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಈ ಅವಧಿಯಲ್ಲಿ ಅವರ ಆರ್ಥಿಕ ಸುಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ವಾಹನ ಲಾಭ, ಆಸ್ತಿ ಖರೀದಿ, ಶುಭ ಕಾರ್ಯಗಳು, ಮನೆ ಈ ಎಲ್ಲಾ ಅಂಶಗಳಲ್ಲಿ ಅವರಿಗೆ ಯಶಸ್ಸು ಸಿಗಬಹುದು.
ಮಕರ ಸಂಕ್ರಾಂತಿ
ಶನಿಯು ಮಕರ ರಾಶಿಯ ಆಡಳಿತ ಗ್ರಹ, ಹೀಗಾಗಿ ಮಕರ ರಾಶಿ ಜನರಿಗೆ ಇದು ತುಂಬಾನೆ ಫಲಪ್ರದ. ತಾವು ಅಂದುಕೊಂಡಿರುವ ಮಹತ್ವದ ಕಾರ್ಯಗಳು ಪೂರ್ಣಗೊಳ್ಳುವ ಸಕಾಲವಿದು. ಹಣಕ್ಕೆ ಸಂಬಂಧಿಸಿದ ಎಲ್ಲಾ ತೊಂದರೆಗಳು ಈಗ ದೂರವಾಗುತ್ತವೆ ಎಂದು ನಿರೀಕ್ಷಿಸಬಹುದು. ನೀವು ವ್ಯಾಪಾರಸ್ಥರಾಗಿದ್ದರೆ ಒಂದಿಷ್ಟು ಕಾಲದಿಂದ ಸಂಕಷ್ಟದಲ್ಲಿದ್ದರೆ ನಿವಾರಣೆ ಸಂಭವವಿದೆ. ಶತ್ರುಗಳ ಮೇಲೆ ನೀವು ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕವಾಗಿದೆ.
ಸಿಂಹ
ಮಿಥುನ ರಾಶಿಯಲ್ಲಿ ಶನಿಯು ನೇರವಾಗಿ ತಿರುಗುವುದರಿಂದ ಸಿಂಹ ರಾಶಿಯವರ ಸಂಪತ್ತು ಹೆಚ್ಚಾಗುತ್ತದೆ ಮತ್ತು ಇದು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನಿಮ್ಮ ಆದಾಯದ ಮಟ್ಟದಲ್ಲಿ ಭಾರೀ ಏರಿಕೆಯಾಗುವುದನ್ನು ಗಮನಿಸಬಹುದು. ನೀವು ಒಳ್ಳೆಯ ಸುದ್ದಿಗಳ ಹೆಚ್ಚು ಹೆಚ್ಚು ಪಡೆಯುತ್ತೀರಿ. ವಾಹನ ಖರೀದಿಯ ಭಾಗ್ಯವಿದೆ. ಬಡ್ತಿ, ವೇತನ ಹೆಚ್ಚಳ, ಸೌಲಭ್ಯಗಳ ವೃದ್ಧಿ, ಸಂಪತ್ತು ಏರಿಕೆಯ ಅದೃಷ್ಟ ನಿಮಗಿದೆ.
ಕನ್ಯಾರಾಶಿ
ಕುಟುಂಬದಲ್ಲಿ ಕೆಲವು ಧಾರ್ಮಿಕ ಅಥವಾ ಮಂಗಳಕರ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಗಳಿವೆ. ಕನ್ಯಾ ರಾಶಿ ಜನರಿಗೆ ಶನಿಯು ಒಳಿತು ಮಾಡುವ ಸಮಯ ಸನ್ನಿಹಿತ. ಈ ಕಾಲದಲ್ಲಿ ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಗಳಿಸಬಹುದು. ಪ್ರವಾಸ, ಶಿಕ್ಷಣ, ವೃತ್ತಿ, ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications