Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
27 ವರ್ಷದ ಬಳಿಕ ಉತ್ತರ ಭಾದ್ರಪದ ನಕ್ಷತ್ರಕ್ಕೆ ಶನಿ ಚಲನೆ: ಶನಿಯಿಂದ ಶುಭ ಯಾರಿಗೆ ಗೊತ್ತಾ?
ಜ್ಯೋತಿಷ್ಯದಲ್ಲಿ ಕರ್ಮ ನೀಡುವ ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ಬಹಳ ಪ್ರಭಾವಶಾಲಿಯಾದ ಹಾಗೆ ಹಲವು ರಾಶಿಗಳ ಮೇಲೆ ಪರಿಣಾಮ ಬೀರುವಂತಹ ಗ್ರಹ ಎನ್ನಬಹುದು. ಹಾಗೆ ಶನಿಯಿಂದ ಎಲ್ಲಾ ರಾಶಿಗಳ ಮೇಲೆ ಪ್ರಭಾವವಿದ್ದರೂ ಶನಿಯ ಚಲನೆಯಿಂದ ಶುಭ ಹಾಗೂ ಅಶುಭ ಎರಡೂ ಸಹ ನೋಡಬಹುದು. ಶನಿ ನಿಧಾನವಾಗಿ ಚಲಿಸುವ ಗ್ರಹ ಆಗಿರೋದ್ರಿಂದ ಹಲವು ಗ್ರಹಗಳೊಂದಿಗೆ ಸಂಯೋಗವಾಗುವುದು ನೋಡಬಹುದು.
ಗ್ರಹಗಳೊಂದಿಗೆ ಸಂಯೋಗವಾಗುವುದು ಸೇರಿದಂತೆ ನಕ್ಷತ್ರವನ್ನು ಸಹ ಆಗಾಗ ಬದಲಿಸುತ್ತಾನೆ. ಶನಿಯು ಸರಿಸುಮಾರು ಒಂದು ವರ್ಷ ಒಂದೇ ನಕ್ಷತ್ರಪುಂಜದಲ್ಲಿ ಇರುತ್ತಾನೆ ಹಾಗೆ ಮತ್ತೆ ಅದೇ ನಕ್ಷತ್ರಕ್ಕೆ ಚಲಿಸಲು ಬರೋಬ್ಬರಿ 27 ವರ್ಷ ತೆಗೆದುಕೊಳ್ಳುತ್ತಾನೆ. ಹೀಗಾಗಿ ಶನಿಯ ಚಲನೆಯು ಬಹಳ ವಿಶೇಷ ಎಂದು ಪರಿಗಣಿಸಲಾಗುತ್ತದೆ.

ಈ ನಡುವೆ ಈಗ ಒಂದು ವರ್ಷದ ಬಳಿಕ ಮತ್ತೆ ನಕ್ಷತ್ರ ಬದಲಾಯಿಸುತ್ತಿದ್ದು, ಶನಿ ಉತ್ತರ ಭಾದ್ರಪದ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಜನವರಿ 20ರಂದು ಶನಿ ತನ್ನ ನಕ್ಷತ್ರ ಬದಲಾಯಿಸುವುದು ನೋಡಬಹುದು. ನಂತರ ಮೇನಲ್ಲಿ ಮತ್ತೊಮ್ಮೆ ನಕ್ಷತ್ರ ಬದಲಾಯಿಸುತ್ತಾನೆ. ರೇವತಿ ನಕ್ಷತ್ರಕ್ಕೆ ಚಲಿಸುವ ಮೊದಲು ಆತನ ಚಲನೆಯು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ.
ವೃಷಭ ರಾಶಿ
ಶನಿಯ ಉತ್ತರಭಾದ್ರಪದ ನಕ್ಷತ್ರ ಪ್ರವೇಶವು ವೃಷಭ ರಾಶಿಯ ಜನರಿಗೆ ಹಲವು ವಿಧಗಳಲ್ಲಿ ಶುಭವೆಂದು ಸಾಬೀತುಪಡಿಸಬಹುದು. ಈ ಸಂಚಾರದ ಸಮಯದಲ್ಲಿ ಶನಿಯು ಈ ರಾಶಿಯ ಹನ್ನೊಂದನೇ ಮನೆಯಲ್ಲಿ ಚಲಿಸುತ್ತಾನೆ. ಇದು ನಿಮ್ಮ ದೀರ್ಘಕಾಲದ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಹಾಗೆ ಕುಟುಂಬದಲ್ಲಿನ ಹಲವು ಸಮಸ್ಯೆಗಳು, ಅಡ್ಡಿಗಳನ್ನು ಸಹ ನಿವಾರಿಸಿಕೊಳ್ಳುವಿರಿ. ಹಲವು ಸಮಯದಿಂದ ನೀವು ಖರೀದಿಸಬೇಕು ಎಂದುಕೊಂಡಿದ್ದ ವಸ್ತುವನ್ನು ಮನೆಗೆ ತರಬಹುದು. ವಾಹನ ಕುರಿತಾದ ವಿಚಾರದಲ್ಲಿ ಇದ್ದ ಎಲ್ಲಾ ಅಡ್ಡಿಗಳನ್ನು ಈ ಸಮಯದಲ್ಲಿ ನಿವಾರಿಸಿಕೊಳ್ಳುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಏಳನೇ ಮನೆಯಲ್ಲಿ ಶನಿ ಚಲಿಸುತ್ತಾನೆ. ಹೀಗಾಗಿ ನಿಮ್ಮಲ್ಲಿ ಸಕಾರಾತ್ಮಕ ವಿಚಾರಗಳು ನಡೆಯಲಿವೆ. ಹಣಕಾಸಿನ ವಿಚಾರದಲ್ಲಿ ಇದ್ದಂತಹ ಅಡ್ಡಿಗಳು ನಿವಾರಣೆಯಾಗಲಿದೆ. ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವೊಂದು ಕೈ ಸೇರುವ ಸಮಯ ಆಗಿರಲಿದೆ. ಒಂಬತ್ತನೇ, ಲಗ್ನ ಮತ್ತು ನಾಲ್ಕನೇ ಮನೆಗಳ ಮೇಲೆ ಶನಿಯ ದೃಷ್ಟಿ ಇರುವುದರಿಂದ ತಂದೆಯೊಂದಿಗಿನ ಸಂಬಂಧವು ಸುಧಾರಿಸಬಹುದು. ದೀರ್ಘಕಾಲದ ಮಾನಸಿಕ ಒತ್ತಡ ಕಡಿಮೆಯಾಗುವ ಲಕ್ಷಣಗಳಿವೆ. ಮನೆಗಾಗಿ ನೀವು ಮಾಡುವ ಪ್ರತಿಯೊಂದು ಕೆಲಸವು ನಿಮಗೆ ಶುಭ ತರಲಿದೆ. ಉನ್ನತ ಶಿಕ್ಷಣದ ಕನಸು ನನಸಾಗಬಹುದು. ಪ್ರೇಮ ಸಂಬಂಧಗಳು ದೃಢವಾಗಲಿವೆ. ಆರೋಗ್ಯ ವಿಚಾರದಲ್ಲಿನ ಸಮಸ್ಯೆಯೂ ದೂರಾಗಲಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಲಗ್ನ ಮನೆಯಲ್ಲಿ ಶನಿ ಚಲಿಸುತ್ತಾನೆ. ಈ ಸಮಯದಲ್ಲಿ ಶನಿ ಉತ್ತರ ಭಾದ್ರಪದ ನಕ್ಷತ್ರಕ್ಕೆ ಚಲಿಸುವುದು ಹಲವು ರೀತಿಯಲ್ಲಿ ಶುಭದಾಯಕವಾಗುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಸಂಪತ್ತು ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತವೆ. ಸ್ವಂತ ಉದ್ಯೋಗದಲ್ಲಿ ಎದುರಿಸಿದ್ದ ಹಲವು ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಹೊಸ ಉದ್ಯೋಗಗಳು ಕೈ ಹಿಡಿಯಲಿವೆ. ಉಳಿತಾಯ ಹೆಚ್ಚಾಗಲಿದೆ. ಆಸ್ತಿ ಖರೀದಿ, ವಾಹನ ಖರೀದಿ, ವಸ್ತು ಖರೀದಿಯ ಲಾಭಗಳಿವೆ. ದೈನಂದಿನ ಕೆಲಸದಲ್ಲಿ ಇದ್ದಂತಹ ಅಡ್ಡಿಗಳು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications