Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಗೆ ಶನಿ ಸಂಚಾರ: ಈ ರಾಶಿಯವರಲ್ಲಿ ಸಮಸ್ಯೆಗಳ ಸರಮಾಲೆ ಆರಂಭ..!!!
ವೈದಿಕ ಶಾಸ್ತ್ರದಲ್ಲಿ 9 ಗ್ರಹಗಳಲ್ಲಿ ಪ್ರತಿಯೊಂದೂ ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಮಾನವ ಜೀವನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಹಾಗೆ ಈ 9 ಗ್ರಹಗಳಲ್ಲಿ ಧರ್ಮ ನಿಷ್ಠೆ ಹಾಗೂ ಪ್ರಭಾವಿ ಕರ್ಮದ ಗ್ರಹವೆಂದು ಕರೆಯಲಾಗುವ ಶನಿಯು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಶನಿ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಒಂದೇ ರಾಶಿಯಲ್ಲಿ ಒಂದೂವರೆ ವರ್ಷ ತನ್ನ ಸಂಚಾರದಿಂದ ಪ್ರಭಾವ ಬೀರಲಿದೆ.
ಹಾಗೆ ಈಗ ಶನಿ ತನ್ನ ರಾಶಿ ಬದಲಾಯಸುತ್ತಿರುವುದು ಹಲವು ರಾಶಿಗಳ ಮೇಲೆ ಧನಾತ್ಮಕ ಲಾಭದ ಜೊತೆಗೆ ಋಣಾತ್ಮಕ ಪರಿಣಾಮಕ್ಕೂ ಕಾರಣವಾಗಲಿದೆ. ಈ ಮಾರ್ಚ್ 29ರ ದನದಂದು ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ತನ್ನ ಸ್ಥಾನ ಬದಲಾಯಿಸುತ್ತಿದ್ದಾನೆ. ಮೀನ ರಾಶಿಯು ಗುರುವಿನ ಮನೆಯಾಗಿದೆ, ಹೀಗಾಗಿ ಶನಿ ಈಗ ಗುರುವಿನ ಆಳ್ವಿಕೆ ಇರುವಂತಹ ಮೀನ ರಾಶಿಗೆ ಚಲಿಸುವುದು ಹಲವು ಲಾಭ ಹಾಗೂ ನಷ್ಟಕ್ಕೂ ಕಾರಣವಾಗುತ್ತಿದೆ.

ಹಾಗಾದ್ರೆ ನಾವಿಂದು ಶನಿ ಮೀನ ರಾಶಿಗೆ ಚಲಿಸುವುದು ಯಾವ ರಾಶಿಯವರಲ್ಲಿ ನಕಾರಾತ್ಮಕ ವಿಚಾರಗಳಿಗೆ ಕಾರಣವಾಗಲಿದೆ. ಇದರಿಂದ ಯಾರಿಗೆ ಅಶುಭ ಸುದ್ದಿಗಳ ಕೇಳಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಕುಂಭ ರಾಶಿ
ಶನಿ ಈ ಕುಂಭ ರಾಶಿಯಲ್ಲಿ ಅಸ್ತಮನಾಗಿ ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಕುಂಭ ರಾಶಿಯಲ್ಲಿ ಒಂದಿಷ್ಟು ಮಿಶ್ರ ಫಲ ನೋಡಬಹುದು. ನಿಮ್ಮ ಪ್ರಯಾಣ ಸಂಬಂಧಿತ ವಿಚಾರದಲ್ಲಿ ಹಿನ್ನಡೆಯಾಗುವುದು ಸಾಮಾನ್ಯ ಎನ್ನುವಂತಾಗಲಿದೆ. ನೀವು ಬೇರೊಂದು ಸ್ಥಳಕ್ಕೆ ಪ್ರಯಾಣಿಸುವಾಗ ಅಡೆತಡೆಗಳು, ಸಮಸ್ಯೆಗಳು ಎದುರಾಗುವುದನ್ನು ನೋಡಬಹುದು. ಹಲವು ಕೆಲಸದಲ್ಲಿ ತಡೆಯಾಗುವುದು, ಹೊಸ ಕಾರ್ಯಗಳು ಕಷ್ಟವಾಗುವುದು, ಹಣಕಾಸಿನ ವಿಚಾರವಾಗಿ ಕಠಿಣ ಸವಾಲುಗಳ ಎದುರಸಬೇಕಾಗಬಹುದು. ನಿಮ್ಮ ನಿರ್ಧಾರಗಳಿಂದ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಬಹುತೇಕ ವಿಚಾರಗಳಲ್ಲಿ ಮಿಶ್ರಫಲಕ್ಕೆ ಕಾರಣವಾಗಲಿದೆ, ನೀವು ಅಂದುಕೊಂಡಿರುವಂತೆ ಕೆಲವೊಂದು ಕೆಲಸಗಳು ಮುಕ್ತಾಯವಾಗದೆ ಇರಬಹುದು. ಈ ದೋಷಗಳ ಪರಿಹರಕ್ಕಾಗಿ ಶನೇಶ್ವರ ದೇವಾಲಯಕ್ಕೆ ತೆರಳಿ ಮಂಗಳಾರತಿ ಪಡೆಯುವುದು ಸೂಕ್ತ.
ಮೇಷ ರಾಶಿ
ಶನಿ ತನ್ನ ಸ್ಥಾನವನ್ನು ಬದಲಾಯಿಸುತ್ತಿರುವುದರಿಂದ ಮೇಷ ರಾಶಿಯವರ ಹಲವು ರೀತಿಯ ಋಣಾತ್ಮಕ ಪರಿಣಾಮ ನೋಡಬಹುದು. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ದೊಡ್ಡ ಸಮಸ್ಯೆಗಳಾಗಿ ಬದಲಾಗಬಹುದು. ನಿಮ್ಮ ಗುರಿಗೆ ಅಡ್ಡಿಯಾಗುವಂತಹ ಹಲವು ವಿಚಾರಗಳು ನಡೆಯಬಹುದು. ಅದರಲ್ಲೂ ಹಣಕಾಸಿನ ವಿಚಾರದಲ್ಲಿ ನಿಮಗೆ ದೊಡ್ಡ ಸವಾಲುಗಳು ಎದುರಾಗಬಹುದು. ಸೂಕ್ತ ಸಮಯಕ್ಕೆ ನೀವು ಅಂದುಕೊಂಡ ಮೂಲದಿಂದ ಹಣಕಾಸಿನ ನೆರವು ಸಿಗದೆ ಇರಬಹುದು. ಈ ಸಮಯದಲ್ಲಿ ನೀವು ಸಾಲ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕೆಲಸದ ಸ್ಥಳದಲ್ಲಿ ಅಥವಾ ನಿಮ್ಮ ಉದ್ಯೋಗ ವಲಯದಲ್ಲೂ ಹಲವು ಬದಲಾವಣೆಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ. ಉದ್ಯೋಗ ಬದಲಾಯಿಸುವ ಆಲೋಚನೆ ಇಲ್ಲದಿದ್ದರೂ ಕೆಲವು ಅವಕಾಶಗಳು ನಿಮ್ಮನ್ನು ಹುಡುಕಿ ಬರುವುದು ನೋಡಬಹುದು. ಆದ್ರೆ ಅದರಿಂದ ನಿಮಗೆ ತೃಪ್ತಿಯಾಗದೆ ಇರಬಹುದು.
ಧನು ರಾಶಿ
ಶನಿ ಸಂಚಾರದಿಂದಾಗಿ ಧನು ರಾಶಿಯವರಲ್ಲಿ ಕುಟುಂಬಕ್ಕೆ ಸಂಬಂಧಿಸಿದಂತಹ ವಿಚಾರಗಳಲ್ಲಿ ಮನಸ್ಥಾಪಗಳು, ಕಿರಿಕಿರಿಗಳು ಹೆಚ್ಚಾಗಬಹುದು. ನಿಮ್ಮ ಕುಟುಂಬ ಹಾಗೂ ಮನೆಗೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರಗಳ ಬದಲಾಯಿಸಬೇಕಾಗಬಹುದು. ಹಾಗೆ ಕೌಟುಯಂಬಿಕ ವಿಚಾರಗಳಲ್ಲಿಯೂ ನಿಮಗೆ ಒಂದು ಕಡೆಯಿಂದ ವಿಪರೀತ ಒತ್ತಡ ಬರಬಹುದು. ಹಾಗೆ ಕುಟುಂಬದ ವ್ಯವಹಾರ ನೀವು ನಿರ್ವಹಿಸಲು ಈಗ ತಾನೆ ಮುಂದಾಗುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳ ಇಡುವುದು ಒಳಿತು. ದೀರ್ಘ ಪ್ರಯಾಣಗಳು, ಆಯಾಸದಂತಹ ವಿಚಾರಗಳಿಗೆ ನೀವು ಆಗಾಗ ಒಳಗಾಗಬೇಕಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. Kannada.Boldsky.com ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications









