Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ವಂತ ನಕ್ಷತ್ರಕ್ಕೆ ಶನಿ ಸಂಚಾರ: ಯಾವ ರಾಶಿಯವರಲ್ಲಿ ಆರ್ಥಿಕ ಸ್ಥಿತಿ ಸುಧಾರಣೆ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳನ್ನು ಪ್ರಮುಖ ಎಂದು ಹೇಳಲಾಗುತ್ತದೆ. ಅದರಂತೆ ಶನಿ ಕೂಡ ಅತ್ಯಂತ ಶುಭ ಹಾಗೂ ಅಶುಭ ಕಾರಕಗಳಿಗೆ ಕಾರಣವಾಗುವ ಗ್ರಹವೆಂದು ಪರಿಗಣಿಸಲಾಗಿದೆ. ಹಾಗೆ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಅದರಂತೆ ಶನಿಯ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಹುದು. ಈಗ ಜನವರಿ 20ರಂದು ಕೂಡ ಶನಿಯ ಚಲನೆಯು ಹಲವು ರೀತಿಯ ಯೋಗಗಳ ತರಲಿದೆ.
ಜನವರಿ 20 ರಂದು ಶನಿಯು ಈ ವರ್ಷದಲ್ಲಿ ಮೊದಲ ಬಾರಿಗೆ ತನ್ನ ನಕ್ಷತ್ರ ಬದಲಾಯಿಸುತ್ತಿದ್ದಾನೆ. ಹೀಗಾಗಿ ಈ ದಿನ ಜ್ಯೋತಿಷ್ಯ ಕಾರಣಕ್ಕೆ ಬಹಳ ಪ್ರಮುಖ ದಿನವಾಗುತ್ತಿದೆ. ಶನಿಯನ್ನು ಕರ್ಮ ಫಲದ ಗ್ರಹವೆಂದು ಹೇಳಲಾಗಿದ್ದು, ಶನಿಯ ನಕ್ಷತ್ರ ಬದಲಾವಣೆಯಿಂದಾಗಿ ಹಲವು ರಾಶಿಗಳಲ್ಲಿ ಹೆಚ್ಚಿನ ಬದಲಾವಣೆಗಳಾಗುವುದು ನೋಡಬಹುದು.

ಪ್ರಸ್ತುತ ಶನಿಯು ಇದು ಮೀನ ರಾಶಿಯಲ್ಲಿದೆ ಮತ್ತು ವರ್ಷದ ಉಳಿದ ತಿಂಗಳು ಇದೇ ರಾಶಿಯಲ್ಲಿರಲಿದ್ದಾನೆ. ಇದೇ ಸಮಯದಲ್ಲಿ ಜನವರಿ 20ರಂದು 12:13ಕ್ಕೆ ಶನಿಯು ಉತ್ತರ ಭಾದ್ರಪದ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಶನಿ ಇದೇ ನಕ್ಷತ್ರದ ಅಧಿಪತಿ. ಸ್ವಂತ ನಕ್ಷತ್ರಕ್ಕೆ ಚಲಿಸುವುದರಿಂದ ಎಲ್ಲಾ ರಾಶಿಗಳ ಮೇಲೆಯೂ ಇದು ಪರಿಣಾಮ ಉಂಟು ಮಾಡಲಿದೆ.
ಶನಿ ಸ್ವಂತ ನಕ್ಷತ್ರ ಚಲನೆಯು ಹಲವು ರಾಶಿಗಳಿಗೆ ಇದು ಉತ್ತಮ ಪ್ರಭಾವ ನೀಡಲಿದೆ. ಕೆಲವು ರಾಶಿ ಜನರಿಗೆ ಅಪೇಕ್ಷಿತ ಲಾಭ, ಯಶಸ್ಸು ಮತ್ತು ಅವರ ಪ್ರಯತ್ನಗಳ ಪೂರ್ಣ ಫಲವನ್ನು ಸಾಧಿಸುವ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಹಾಗಾದ್ರೆ ಶನಿಯ ಈ ನಕ್ಷತ್ರ ಬದಲಾವಣೆಯು ಯಾವೆಲ್ಲಾ ರಾಶಿಯವರಿಗೆ ಲಾಭದಾಯಕ? ಯಾರಿಗೆ ಶುಭಕರ ಅನ್ನೋದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇದು ವಿಶೇಷ ಸಮಯವಾಗಿರುತ್ತದೆ. ಶನಿಯ ಪ್ರಭಾವದಡಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಲವು ಸಮಯದಿಂದ ನಿಮ್ಮ ಪ್ರಮುಖ ಕೆಲಸವೊಂದರಲ್ಲಿ ಅಡ್ಡಿ ಅನುಭವಿಸುತ್ತಿದ್ದರೆ ಈ ಸಮಯದಲ್ಲಿ ನಿವಾರಣೆಯಾಗುವುದು ನೋಡಬಹುದು. ಯಾರ ಬಳಿಯಾದರು ನಿಮ್ಮ ಹಣ ಸಿಲುಕಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ. ಹೊಸ ಮನೆ, ವಾಹನ ಖರೀದಿಯಂತಹ ವಿಚಾರದಲ್ಲಿಯೂ ನಿಮಗೆ ಶುಭವಾಗುತ್ತಿದೆ. ಅಪೇಕ್ಷಿತ ಉದ್ಯೋಗದಲ್ಲಿ ನಿಮಗೆ ಲಾಭವಿದೆ. ಆರೋಗ್ಯ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ. ಮಾನಸಿಕವಾಗಿ ನೀವು ಸಮಸ್ಯೆಗಳ ಎದುರಿಸಿದ್ದರೆ ಈ ಸಮಯದಲ್ಲಿ ಒತ್ತಡ, ಗೊಂದಲ ನಿವಾರಣೆಯಾಗಲಿದೆ.
ಕರ್ಕಾಟಕ ರಾಶಿ
ಈ ಅವಧಿಯು ಕರ್ಕಾಟಕ ರಾಶಿಯವರಿಗೆ ಸೃಜನಶೀಲತೆಯಿಂದ ತುಂಬಿರುತ್ತದೆ. ನೀವು ಖಾಸಗಿ ಸಂಸ್ಥೆ ಉದ್ಯೋಗಿಯಾಗಿ ವರ್ಗಾವಣೆ ಅಥವಾ ವೇತನ ಹೆಚ್ಚಳದಂತಹ ವಿಚಾರದಲ್ಲಿ ಅಡ್ಡಿಗಳ ಅನುಭವಿಸಿದ್ದರೆ ಈ ಸಮಯದಲ್ಲಿ ಅಂತಹ ಹಲವು ಅಡ್ಡಿಗಳು ನಿವಾರಣೆಯಾಗಲಿದೆ. ಇದು ನಿಮ್ಮ ಪ್ರಭಾವವನ್ನು ಹೆಚ್ಚಿಸುವುದಲ್ಲದೆ ನಿಮ್ಮ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಸಮತೋಲನವನ್ನು ಬಲಪಡಿಸುತ್ತದೆ. ಬರವಣಿಗೆಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೊಸ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ಜನರೊಂದಿಗೆ ನಿಮ್ಮ ಪ್ರಭಾವವು ಹಲವು ಪಟ್ಟು ಹೆಚ್ಚಾಗುತ್ತದೆ. ಅನೇಕರಲ್ಲಿ ಹಣಕಾಸಿನ ಸಮಸ್ಯೆಗಳು ದೂರಾಗಲಿದೆ.
ಮಕರ ರಾಶಿ
ಈ ಅವಧಿಯು ಮಕರ ರಾಶಿಯವರಿಗೆ ಸಕಾರಾತ್ಮಕತೆಯಿಂದ ತುಂಬಿರಲಿದೆ. ಶನಿಯ ಪ್ರಭಾವದಡಿಯಲ್ಲಿ ನೀವು ನಿಮ್ಮ ಪ್ರಯತ್ನಗಳ ಪ್ರತಿಫಲವನ್ನು ಪಡೆಯುತ್ತೀರಿ. ಮಕರ ರಾಶಿಯವರು ಭೌತಿಕ ಸೌಕರ್ಯಗಳು ಮತ್ತು ಐಷಾರಾಮಿ ಜೀವನ ನೋಡಬಹುದು. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ವ್ಯವಹಾರಗಳು, ನಿಮ್ಮ ಹೊಸ ವ್ಯಾಪಾರಗಳು ಶುಭ ತರಲಿದೆ. ಯಾರಿಂದಾದರು ನೀವು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡುವಿರಿ, ಇದು ನಿಮ್ಮಲ್ಲಿ ನೆಮ್ಮದಿಗೆ ಕಾರಣವಾಗಲಿದೆ. ಅನೇಕರಲ್ಲಿ ಈ ಸಮಯವು ಬಹಳ ಅನುಕೂಲಕರ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications










