Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೇವತಿ ನಕ್ಷತ್ರಕ್ಕೆ ಶನಿ ಸಂಚಾರ: ಹಲವು ರಾಶಿಗಳಿಗೆ ಶನಿಯ ಆಶೀರ್ವಾದ, ಅಂದುಕೊಂಡ ಕೆಲಸ ಪ್ರಾಪ್ತಿ!
ಜ್ಯೋತಿಷ್ಯದ ಪ್ರಕಾರ ಶನಿ ದೇವನನ್ನು ಒಂಬತ್ತು ಗ್ರಹಗಳಲ್ಲಿ ಬಹಳ ಮುಖ್ಯವಾದ ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅದ್ರಲ್ಲೂ ಶನಿ ನಿಧಾನಗತಿಯ ಚಲನೆಯಿಂದ ಹಲವು ಗ್ರಹಗಳೊಂದಿಗೆ ಸೇರುವುದು ಯೋಗಗಳ ಸೃಷ್ಟಿಸುವುದು ಸಹ ನೋಡಬಹುದು. ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿಯಾಗಿದ್ದು ಶನಿ 2 1/2 ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಚಲಿಸಲಿದ್ದಾನೆ.
ಕಾಲಕಾಲಕ್ಕೆ ನಕ್ಷತ್ರವನ್ನು ಸಹ ಬದಲಾಯಿಸುತ್ತಾನೆ. ಶನಿಯ ಸ್ಥಾನದಲ್ಲಿ ಬದಲಾವಣೆಯಾದಾಗಲೆಲ್ಲಾ, ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಉಂಟಾಗಿರುವುದು ನೋಡಬಹುದು. ಶನಿ ಪ್ರಸ್ತುತ ಮೀನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಆದ್ರೆ ಈ ಸಮಯದಲ್ಲಿ ಶನಿ ತನ್ನ ನಕ್ಷತ್ರ ಬದಲಾಯಿಸುವುದು ಹಲವು ರಾಶಿಗಳ ಮೇಲೆ ಪರಿಣಾಮಕ್ಕೆ ಕಾರಣವಾಗಲಿದೆ.

ಸದ್ಯ ಶನಿ ಈಗ ತನ್ನ ನಕ್ಷತ್ರ ಬದಲಾಯಿಸುವುದು ನೋಡಬಹುದು. ಶನಿ ಮೇ 17 ರಂದು ರೇವತಿ ನಕ್ಷತ್ರವನ್ನು ಪ್ರವೇಶಿಸಲಿದೆ, ಮತ್ತು ಅಕ್ಟೋಬರ್ 09 ರ ವರೆಗೆ ಅದೇ ನಕ್ಷತ್ರದಲ್ಲಿ ಚಲಿಸಲಿದ್ದಾನೆ. ಇದು ಹಲವರಲ್ಲಿ ಬದಲಾವಣೆಗೆ ಕಾರಣವಾಗಲಿದೆ. ಅದರಲ್ಲೂ ರೇವತಿ ನಕ್ಷತ್ರವು ಬುಧನಿಂದ ಆಳಲ್ಪಡುತ್ತದೆ. ಹೀಗಾಗಿ ಶನಿಯ ಪ್ರಭಾವ ಈ ಸಮಯದಲ್ಲಿ ದುಪ್ಪಟ್ಟಾಗಬಹುದು.
ಶನಿಯು ಬುಧ ನಕ್ಷತ್ರದಲ್ಲಿ ಸುಮಾರು 146 ದಿನಗಳ ಕಾಲ ಇರಲಿದ್ದಾನೆ. ಇದರ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಬೀರುವುದು ನೋಡಬಹುದು. ಈಗ ಶನಿಯ ನಕ್ಷತ್ರ ಸಂಚಾರದಿಂದ ಯಾವ ರಾಶಿಯವರಗೆ ಅದೃಷ್ಟ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶನಿಯ ನಕ್ಷತ್ರ ಬದಲಾವಣೆಯಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ, ಅದರಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ. ನಿಮ್ಮ ಸಂಗಾತಿಯ ವಿಚಾರದಲ್ಲಿನ ಅಡ್ಡಿಗಳನ್ನು ನಿವಾರಿಸಿಕೊಳ್ಳಲು ಇದು ಸೂಕ್ತ ಸಮಯ ಆಗಿರಲಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಉದ್ಯಮಿಗಳು ಭವಿಷ್ಯದಲ್ಲಿ ಉತ್ತಮ ಲಾಭವನ್ನು ತರುವ ಹೊಸ ಒಪ್ಪಂದಗಳನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ನೀವು ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಕೆಲಸದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಧನಲಾಭವ ನಿರೀಕ್ಷೆ ಇಟ್ಟುಕೊಳ್ಳಬಹುದು.
ಧನು ರಾಶಿ
ಧನು ರಾಶಿ ಜನರು ಶನಿಯ ಸಂಚಾರದಿಂದಾಗಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಇರಲಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣವಾಗಲಿದೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಅವಕಾಶಗಳು ಲಭ್ಯವಾಗಲಿದೆ. ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಸಂತೋಷ ಹೆಚ್ಚಾಗುವ ಸಮಯ ಇದಾಗಿರಲಿದೆ. ಆದಾಯ ಹೆಚ್ಚಳದ ಕನಸು ಕಂಡಿದ್ದರೆ ಈ ಸಮಯದಲ್ಲಿ ಅದ್ಭುತ ಲಾಭಗಳ ನೋಡಬಹುದು. ಆಪ್ತರಿಂದ ನಿಮಗೆ ಶುಭ ಸುದ್ದಿಗಳು ಬರಲಿದೆ.
ಮಕರ ರಾಶಿ
ಶನಿಯ ಸಂಚಾರವು ಮಕರ ರಾಶಿಯವರ ಜೀವನದಲ್ಲಿನ ಬದಲಾವಣೆಳಿಗೆ ಕಾರಣವಾಗಲಿದೆ, ಹಾಗೆ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ವೃತ್ತಿ ಜೀವನದಲ್ಲಿನ ಬದಲಾವಣೆಗಳನ್ನು ನಿರೀಕ್ಷಿಸಬಹುದು. ವಿದೇಶಿ ಪ್ರವಾಸ ಸೇರಿದಂತೆ ಹಲವು ರೀತಿಯ ಕೌಟುಂಬಿಕ ವಿಚಾರದಲ್ಲಿ ಸಂತಸ ನೋಡಬಹುದು. ಹಣದ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೂಡಿಕೆ ಹಾಗೂ ಉಳಿತಾಯದಲ್ಲಿ ಹೆಚ್ಚಳವಾಗುವುದು ನೋಡಬಹುದು. ನಿರುದ್ಯೋಗಿಗಳ ಪಾಲಿಗೆ ಈ ಸಮಯವು ಅದೃಷ್ಟಕರ, ನಿಮ್ಮ ಬಹು ಸಮಯದಿಂದ ಉದ್ಯೋಗ ಹುಡುಕುವ ಪ್ರಯತ್ನಕ್ಕೆ ಫಲ ಸಿಗಲಿದೆ. ಯಾರಿಗಾದರು ಹಣ ನೀಡುವ ಮುನ್ನ ಎಚ್ಚರವಹಿಸಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications