Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ಶನಿ ಚಲನೆ; ಈ ರಾಶಿಯವರಿಗೆ ಶನಿದೋಷದಲ್ಲಿ ಲೋಪ, ಯಾರಿಗೆ ಅದೃಷ್ಟ!
2025ರಲ್ಲಿ ಶನಿಯು ಹಲವು ಗ್ರಹಗಳೊಂದಿಗೆ ಸಂಯೋಗವಾಗಿ ಹಲವು ರೀತಿಯ ಯೋಗಗಳು ರೂಪಿಸಲು ಕಾರಣವಾಗಿದ್ದ. ಹಾಗೆ 2026ರಲ್ಲೂ ಕೂಡ ಶನಿಯಿಂದಾಗಿ ಹಲವು ಯೋಗಗಳು ರೂಪುಗೊಳ್ಳುವುದು ನೋಡಬಹುದು. ಜ್ಯೋತಿಷ್ಯದಲ್ಲಿ ಶನಿಯನ್ನು ಶನಿಯ ಸ್ಥಾನವನ್ನು ಬಹಳ ಪ್ರಮುಖ ಎಂದು ಪರಿಗಣಿಸಲಾಗಿದೆ. ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿಯಾಗಿದ್ದಾನೆ. ಶನಿಯು ಪಾಪ ಕರ್ಮಗಳ ದಯಪಾಲಿಸುವ ಗ್ರಹವೆಂದು ಹೇಳಲಾಗಿದೆ.
ಶನಿಯು ವ್ಯಕ್ತಿಗಳ ಕ್ರಿಯೆಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಆದಾಗ್ಯೂ ಶನಿಯು ತನ್ನ ಪಥವನ್ನು ಬದಲಾಯಿಸಿದಾಗಲೂ, ವ್ಯಕ್ತಿಗಳು ತಮ್ಮ ಕ್ರಿಯೆಗಳ ಫಲವನ್ನು ಪಡೆಯುತ್ತಾರೆ. 2026ರಲ್ಲಿ ಶನಿಯು ತನ್ನ ಪಥವನ್ನು ಬದಲಾಯಿಸುತ್ತಾನೆ ಮತ್ತು ಕೆಲವು ರಾಶಿ ಜನರ ಮೇಲೆ ವಿಶೇಷ ಆಶೀರ್ವಾದಗಳನ್ನು ನೀಡುತ್ತಾನೆ.

2026 ರ ಆರಂಭದಲ್ಲಿ ಶನಿಯು ಮೀನ ರಾಶಿಯಲ್ಲಿ ನೇರವಾಗಿ ಚಲಿಸಲಿದ್ದಾನೆ. ಹಾಗೆ ಜನವರಿ 20ರಂದು ಉತ್ತರ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದಾದ ಬಳಿಕ ಮೇ 17ರಂದು ಶನಿ ರೇವತಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಹಾಗೆ ಜುಲೈ 27ರಂದು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಗೆ ಮುಂದಾಗುತ್ತಾನೆ. ಇದಾದ ಬಳಿಕ 2026ರ ವರ್ಷದ ಕೊನೆಯ ಡಿಸೆಂಬರ್ ತಿಂಗಳಲ್ಲಿ ಮೀನ ರಾಶಿಯಲ್ಲಿ ನೇರ ಚಲನೆಗೆ ಒಳಗಾಗುತ್ತಾನೆ. ಅಂದರೆ 2026ರಲ್ಲಿ ಶನಿಯು ಮೀನ ರಾಶಿಯಲ್ಲೇ ಚಲಿಸಲಿದ್ದಾನೆ. ಆದರೆ ಹಲವು ಗ್ರಹಗಳೊಂದಿಗೆ ಸಂಯೋಗವಾಗುವುದು ನೋಡಬಹುದು. ಹಾಗಾದ್ರೆ ಶನಿಯಿಂದಾಗಿ 2026ರಲ್ಲಿ ಯಾರಿಗೆಲ್ಲಾ ಅದೃಷ್ಟಕರ ಯಾರಿಗೆ ಲಾಭ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಹೊಸ ವರ್ಷದಲ್ಲಿ ಮೇಷ ರಾಶಿಯವರಿಗೆ ಶನಿಯು ಆಶೀರ್ವಾದ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸಗಳು ಧನಾತ್ಮಕವಾಗಿರಲಿದೆ. ಹಾಗೆ ದೈನಂದಿನ ಕೆಲಸಗಳು ಸಕಾರಾತ್ಮಕ ಫಲಿತಾಂಶಗಳಿಂದ ತುಂಬಿರುತ್ತದೆ. ಶನಿಯ ಆಶೀರ್ವಾದದಿಂದ ನಡೆಯುತ್ತಿರುವ ವೃತ್ತಿ ಮತ್ತು ವ್ಯವಹಾರ ಸವಾಲುಗಳು ಪರಿಹರಿಸಲ್ಪಡುತ್ತವೆ. ನಿಮ್ಮ ಪ್ರತಿಯೊಂದು ಪ್ರಯತ್ನದಲ್ಲೂ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದಲ್ಲದೆ, ಸಂಬಳ ಹೆಚ್ಚಳ ಮತ್ತು ಕೆಲಸದ ಸ್ಥಳದಲ್ಲಿ ಯಶಸ್ಸು ಖಚಿತವಾಗುತ್ತದೆ. ನಿಮ್ಮ ಬಡ್ಡಿ ವ್ಯವಹಾರಗಳಲ್ಲಿ ಲಾಭಾಂಶ ನೋಡಬಹುದು. ವ್ಯಾಪಾರಿಗಳು ಈ ಸಮಯದಲ್ಲಿ ಎದುರಿಸಿದ್ದ ಹಲವು ಅಡ್ಡಿಗಳಿಂದ ಮುಕ್ತರಾಗುತ್ತಾರೆ. ಅವಿವಾಹಿತರ ಹಣಕಾಸು ಸಮಸ್ಯೆಗಳಯ ಬಗೆಹರಿಯಲಿದೆ. ನಿಮ್ಮ ವಾಹನ ಸಂಬಂಧಿ ಬಿಕ್ಕಟ್ಟು ಪರಿಹಾರವಾಗಲಿದೆ.
ಧನು ರಾಶಿ
ಧನು ರಾಶಿಯವರಿಗೆ ಶನಿಯ ಚಲನೆಯು ಅನೇಕ ರೀತಿಯ ಲಾಭಕರ. ನಿಮ್ಮ ಸಂಪತ್ತು ವೃದ್ಧಿ ಸಂಬಂಧಿತ ವಿಚಾರಗಳಲ್ಲಿ ಶುಭವಿದೆ. ಅದ್ರಲ್ಲೂ ಹೊಸ ವ್ಯವಹಾರ, ವ್ಯಾಪಾರ, ಆದಾಯ ಗಳಿಕೆಯ ಅವಕಾಶಗಳು ನಿಮಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಲಿವೆ. ಹಣದ ಹರಿವು ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿ, ನ್ಯಾಯಾಲಯ ಸಂಬಂಧಿತ ವಿಚಾರದಲ್ಲಿದ್ದ ಅಡ್ಡಿಗಳು ನಿವಾರಣೆಯಾಗಲಿದೆ. ನೀವು ಹೊಸ ಜನರನ್ನು ಭೇಟಿಯಾಗುತ್ತೀರಿ. ಮಾರುಕಟ್ಟೆಯಲ್ಲಿ ನಿಮ್ಮ ಖ್ಯಾತಿಯೂ ಹೆಚ್ಚಾಗುತ್ತದೆ.
ಮೀನ ರಾಶಿ
ಮೀನ ರಾಶಿಯವರು 2026 ವಿಶೇಷ ವರ್ಷವಾಗಿರುತ್ತಾರೆ. ನಿಮ್ಮ ಭೌತಿಕ ಸುಖ ದುಪ್ಪಟ್ಟಾಗಲಿದೆ. ವಿದ್ಯಾರ್ಥಿಗಳು, ಕೃಷಿಕರು, ಸ್ವಂತ ವ್ಯವಹಾರ ಮಾಡುವ ಮಂದಿಗೆ ಈ ಸಮಯವು ಬಹಳ ಅನುಕೂಲಗಳ ತರಲಿದೆ, ನಿಮ್ಮ ಆಪ್ತರ ವಿಚಾರವಾಗಿ ನಿಮ್ಮಲ್ಲಿ ದೊಡ್ಡ ಲಾಭದಿಂದ ವ್ಯವಹಾರ ನಡೆಯಲಿದೆ. ಪಾಲುದಾರಿಕೆಯಲ್ಲಿನ ವ್ಯವಹಾರ ಶುಭವಾಗುತ್ತದೆ. ಅವಿವಾಹಿತರು ಶುಭ ಸುದ್ದಿ ಕೇಳಬಹುದು. ಮಕ್ಕಳಿಂದ ಬರಬಹುದಾದ ದೊಡ್ಡ ಆಪತ್ತು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



