Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
2026ರ ಶನಿ ಸಂಚಾರ! ಈ ರಾಶಿಯವರಿಗೆ ಶುಕ್ರದೆಸೆ ಆರಂಭ.. ಮುಂದಿನ 5 ತಿಂಗಳು ಇವರು ಮುಟ್ಟಿದ್ದೆಲ್ಲಾ ಚಿನ್ನ
ಈ ರಾಶಿಯವರಿಗೆ ಶುಕ್ರದೆಸೆ ಆರಂಭ! ಶನಿ ದೇವನ ಕೃಪೆಯಿಂದ ಮುಂದಿನ 5 ತಿಂಗಳು ಇವರು ಮುಟ್ಟಿದ್ದೆಲ್ಲಾ ಚಿನ್ನ. ಹೌದು, ಶನಿದೇವನನ್ನು ಕರ್ಮಫಲ ದಾತ ಮತ್ತು ನ್ಯಾಯಾಧೀಶ ಎಂದೇ ಗುರುತಿಸಲಾಗುತ್ತದೆ. ಅತ್ಯಂತ ನಿಧಾನಗತಿಯ ಗ್ರಹವಾಗಿರುವ ಶನಿ, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಕಾಲಿಡಲು ಸುಮಾರು ಎರಡೂವರೆ ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. 2026ರಲ್ಲಿ ಶನಿಯು (Shani Gochar 2026) ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದು, ಈ ಮಹತ್ವದ ಘಟನೆ ಕೆಲವು ರಾಶಿಯವರ ಬದುಕಿನಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ.
ಪ್ರಸ್ತುತ ಶನಿಯು ಮೀನ ರಾಶಿಯಲ್ಲಿದ್ದಾನೆ ಮತ್ತು 2027 ರವರೆಗೆ ಇದೇ ಸ್ಥಾನದಲ್ಲಿ ನೆಲೆಸಲಿದ್ದಾನೆ. ಆದರೆ, ರಾಶಿ ಬದಲಾವಣೆಯಷ್ಟೇ ಮುಖ್ಯವಾಗಿ ನಕ್ಷತ್ರ ಬದಲಾವಣೆಯೂ (Shani Nakshatra Parivartan 2026) ದ್ವಾದಶ ರಾಶಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2026ರ ಮೇ 17ರಂದು ಶನಿಯು 'ಉತ್ತರಾಭಾದ್ರಪದ' ನಕ್ಷತ್ರದಿಂದ 'ರೇವತಿ' ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.

ರೇವತಿ ನಕ್ಷತ್ರದಲ್ಲಿ ಶನಿದೇವನು 2026ರ ಅಕ್ಟೋಬರ್ 17ರವರೆಗೆ ಇರುತ್ತಾನೆ. ಸುಮಾರು ಐದು ತಿಂಗಳ ಕಾಲ ನಡೆಯುವ ಶನಿಯ ಈ ಸಂಚಾರವು (Saturn Transit 2026) ಕೆಲವು ರಾಶಿಗಳ ಪಾಲಿಗೆ ನಿಜಕ್ಕೂ ವರದಾನವಾಗಲಿದೆ. ವೃತ್ತಿಜೀವನದಲ್ಲಿ ಯಶಸ್ಸು, ಆರ್ಥಿಕ ಲಾಭ ಮತ್ತು ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇದೊಂದು ಸುವರ್ಣಾವಕಾಶ. ಶನಿದೇವನ ವಿಶೇಷ ಕೃಪೆಗೆ ಪಾತ್ರರಾಗಲಿರುವ ಆ ಮೂರು ಅದೃಷ್ಟದ ರಾಶಿಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಸಿಂಹ
ಸಿಂಹ ರಾಶಿಯವರಿಗೆ ಶನಿಯ ಈ ನಕ್ಷತ್ರ ಬದಲಾವಣೆಯು ಅತ್ಯಂತ ಮಂಗಳಕರ ಫಲಿತಾಂಶಗಳನ್ನು ತರಲಿದೆ. ದೀರ್ಘಕಾಲದಿಂದ ಕಾಡುತ್ತಿದ್ದ ಒತ್ತಡ ಮತ್ತು ಆತಂಕಗಳಿಂದ ಮುಕ್ತಿ ದೊರೆತು, ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೆ ಉತ್ತಮ ಅವಕಾಶಗಳು ಒದಗಿಬರುವುದಲ್ಲದೆ, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆಯೂ ಇದೆ. ಹಣ ಉಳಿತಾಯದ ಸಮಸ್ಯೆಗಳು ದೂರವಾಗಿ, ಅನಿರೀಕ್ಷಿತ ಧನಲಾಭದ ಯೋಗವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಐದು ತಿಂಗಳಲ್ಲಿ ಅದ್ಭುತ ಯಶಸ್ಸನ್ನು ನಿರೀಕ್ಷಿಸಬಹುದು.
ಧನು
ಧನು ರಾಶಿಯವರ ಪಾಲಿಗೆ ಶನಿಯು ಹಳೆಯ ಕಷ್ಟಗಳನ್ನು ಮರೆಸಿ ಹೊಸ ಚೈತನ್ಯ ನೀಡಲಿದ್ದಾನೆ. ಜೀವನ ಸಂಗಾತಿಯೊಂದಿಗೆ ಮಧುರ ಬಾಂಧವ್ಯ ಬೆಳೆಯಲಿದೆ; ಪ್ರೇಮ ಜೀವನದಲ್ಲಿ ಹೆಚ್ಚು ಹತ್ತಿರವಾಗುವ ಸಂದರ್ಭಗಳು ಬರುತ್ತವೆ. ಉದ್ಯಮಿಗಳಿಗೆ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದ್ದು, ತಮ್ಮ ವಾಣಿ ಮತ್ತು ವಿವೇಕಯುತ ನಡವಳಿಕೆಯಿಂದ ವ್ಯವಹಾರದಲ್ಲಿ ದೊಡ್ಡ ಬದಲಾವಣೆ ತರಲಿದ್ದಾರೆ. ನಿಮ್ಮ ಹಳೆಯ ಕನಸುಗಳು ನನಸಾಗುವ ಸಮಯವಿದು. ಹೊಸ ಉದ್ಯಮ ಆರಂಭಿಸಲು ಅಥವಾ ಹೂಡಿಕೆ ಮಾಡಲು ಇದು ಅತ್ಯಂತ ಸೂಕ್ತ ಕಾಲ.
ಮಕರ
ಮಕರ ರಾಶಿಯ ಅಧಿಪತಿಯೇ ಶನಿದೇವನಾಗಿರುವುದರಿಂದ, ಈ ನಕ್ಷತ್ರ ಬದಲಾವಣೆಯು ಇವರಿಗೆ ವಿಶೇಷ ಶಕ್ತಿ ಮತ್ತು ಅನುಕೂಲಗಳನ್ನು ತರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವುದಲ್ಲದೆ, ಕುಟುಂಬ ಸದಸ್ಯರಿಂದ ಪೂರ್ಣ ಸಹಕಾರ ಸಿಗಲಿದೆ. ದೀರ್ಘಕಾಲದ ಕೋರ್ಟ್ ಕಚೇರಿ ಕೇಸುಗಳು ನಿಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆ ದಟ್ಟವಾಗಿದೆ. ಮಕ್ಕಳ ಕಡೆಯಿಂದ ಶುಭ ಸುದ್ದಿಯು ನಿಮ್ಮ ಕುಟುಂಬದಲ್ಲಿ ಸಂಭ್ರಮ ತರಲಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಅಥವಾ ವಿದೇಶಿ ಕಂಪನಿಗಳೊಂದಿಗೆ ವ್ಯವಹಾರ ನಡೆಸುವವರಿಗೆ ಹೊಸ ಒಪ್ಪಂದಗಳು ಅಂತಿಮವಾಗಲಿವೆ.
ಶನಿ ಕೃಪೆಗೆ ಏನು ಮಾಡಬೇಕು?
- ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದೀಪ ಹಚ್ಚಿ.
- ಬಡವರಿಗೆ ಅಥವಾ ಅಗತ್ಯವಿರುವವರಿಗೆ ಕೈಲಾದ ಸಹಾಯ ಮಾಡಿ (ಶನಿದೇವನು ದೀನದಲಿತರ ಸೇವೆಯಿಂದ ಬೇಗ ಪ್ರಸನ್ನನಾಗುತ್ತಾನೆ).
- 'ಓಂ ಶಂ ಶನೈಶ್ಚರಾಯ ನಮಃ' ಎಂಬ ಮಂತ್ರವನ್ನು ಪ್ರತಿದಿನ ಜಪಿಸಿ.
2026ರ ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗಿನ ಈ ಐದು ತಿಂಗಳುಗಳು ಸಿಂಹ, ಧನು ಮತ್ತು ಮಕರ ರಾಶಿಯವರಿಗೆ ಕೇವಲ ಪರೀಕ್ಷೆಯ ಕಾಲವಾಗಿರದೆ, ಅವರ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸುವರ್ಣಾವಕಾಶ. ಶನಿದೇವನ ಕೃಪೆಯಿಂದ ಸ್ಥಗಿತಗೊಂಡ ಕೆಲಸಗಳು ವೇಗ ಪಡೆದುಕೊಂಡು ಯಶಸ್ಸನ್ನು ತರಲಿವೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











