Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಶನಿ ಸಂಕ್ರಮಣ: ಈ ಮೂರು ರಾಶಿಯವರಿಗೆ ಸಂಕಷ್ಟ..ನಿಮ್ಮ ರಾಶಿ ಇದೆಯೇ ನೋಡಿ?
2025ರಲ್ಲಿ ಹಲವು ಗ್ರಹಗತಿಗಳ ಬದಲಾವಣೆಯೊಂದಿಗೆ ನಿಮ್ಮ ರಾಶಿಯಲ್ಲಿ ಅನೇಕ ಲಾಭಗಳು, ನಷ್ಟಗಳ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹಲವು ಗ್ರಹಗಳ ಸಂಚಾರ ಹಾಗೂ ಸಂಯೋಗವು ಹಲವು ರೀತಿಯ ಯೋಗಗಳು ಉಂಟಾಗುವುದನ್ನು ನೋಡಬಹುದು. ಇನ್ನು 2025ರಲ್ಲಿ ಉಂಟಾಗುತ್ತಿರುವ ಶನಿ ಸಂಕ್ರಮಣವು ಹಲವು ರೀತಿಯ ದೋಷಗಳಿಗೂ ಕಾರಣವಾಗುತ್ತಿದೆ.
ಶನಿ ದೋಷವು ಜ್ಯೋತಿಷ್ಯದಲ್ಲಿ ಅತ್ಯಂತ ಕೆಟ್ಟ ಹಾಗೂ ಒಬ್ಬ ವ್ಯಕ್ತಿಯ ಜೀವನದಲ್ಲಿ ಸಂಕಷ್ಟಗಳ ತರುವಂತಹ ದೋಷಗಳಲ್ಲಿ ಒಂದು ವಿಶ್ಲೇಷಿಸಲಾಗುತ್ತದೆ. ಶನಿ ದೋಷದಿಂದ ಬಳಲುತ್ತಿರುವ ಜನರು ತಮ್ಮ ಜೀವನದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಾರೆ. 2025 ಶನಿ ಸಂಕ್ರಮಣ ಉಂಟಾಗುತ್ತಿರುವುದು ಕೂಡ ಹಲವರಿಗೆ ದೋಷಗಳ ತರುತ್ತಿದೆ.

2025ರ ಮಾರ್ಚ್ 29 ರಂದು ಬೆಳಗ್ಗೆ 11 ಗಂಟೆಗೆ ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಅದು ಮೇಷ ರಾಶಿಗೆ ಜೂನ್ 3, 2027 ರಂದು ಚಲಿಸುತ್ತದೆ. ಶನಿಯ ಈ ಸಂಕ್ರಮಣವು ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಲಾಭಕ್ಕೆ ಕಾರಣವಾದರೆ ಮತ್ತೆ ಕೆಲವರು ರಾಶಿಯವರಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಶನಿಯ ಏಳೂವರೆ ವರ್ಷಗಳು ಕುಂಭ, ಮೀನ ಮತ್ತು ಮೇಷ ರಾಶಿಯ ಮೂರು ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ
ಮೇಷ ರಾಶಿ
ಮುಂದಿನ ವರ್ಷ ಶನಿ ಸಂಚಾರವು ಮೇಷ ರಾಶಿಯವರಲ್ಲಿ ಹಲವು ರೀತಿಯ ಸಮಸ್ಯೆಗೆ ಕಾರಣವಾಗುತ್ತಿದೆ. ನೀವು ಮಾರ್ಚ್‌ನಿಂದ ಋಣಾತ್ಮಕ ಅಂಶಗಳಿಂದ ಹಲವು ರೀತಿಯ ಅಡೆತಡೆಗಳ ಎದುರಿಸಬೇಕಾಗುತ್ತದೆ. ಅನಿರೀಕ್ಷಿತ ಬಿಕ್ಕಟ್ಟುಗಳು, ವ್ಯವಹಾರದಲ್ಲಿ ಕೊಂಚ ಹಿನ್ನಡೆ, ಆರೋಗ್ಯದಲ್ಲಿ ಆಗಾಗ ಏರು ಪೇರು. ಹೀಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇದು ಕಾರಣವಾಗಲಿದೆ. ಈ ವರ್ಷ ಮಾರ್ಚ್‌ನಿಂದ ನಿಮ್ಮಲ್ಲಿ ಹಣಕಾಸು ಸಮಸ್ಯೆಗಳು, ಮನೆಯ ಹಿರಿಯರಲ್ಲಿ ಒಂದಿಷ್ಟು ಸಮಸ್ಯೆಗಳನ್ನು ನೀವು ನೋಡಬಹುದು. ಹಾಗೆ ಅವಿವಾಹಿತರಲ್ಲಿ ಅಶುಭ ಸಂಕೇತಗಳು, ಮದುವೆ, ಶುಭ ಕಾರ್ಯ ಮುಂದೂಡಬೇಕಾದ ಅನಿವಾರ್ಯತೆ ಕೂಡ ಕಾಡಬಹುದು.
ಕುಂಭ ರಾಶಿ
ಮುಂಬರುವ ವರ್ಷದಲ್ಲಿ ಶನಿಗ್ರಹವು ಕುಂಭ ರಾಶಿಯವರಿಗೆ ಹಲವು ಸವಾಲುಗಳನ್ನು ಒಡ್ಡಲಿದೆ. ಈ ಸಮಯದಲ್ಲಿ ಅನೇಕ ಅಡೆತಡೆಗಳು ನಿಮ್ಮ ಮುಂದೆ ಬರುತ್ತವೆ. ನೀವು ಅಂದುಕೊಂಡಿದ್ದ ಕೆಲಸಗಳು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಒಂದಿಷ್ಟು ಪ್ರಯಾಣಗಳ ಕೈಗೊಳ್ಳಬೇಕಾದ ಅನಿವಾರ್ಯತೆ ಬರಬಹುದು. ನೀವು ಈ ಸಮಯದಲ್ಲಿ ಸಾಲ ನೀಡುವ ಕೆಲಸದಿಂದ ದೂರ ಇರುವುದು ಒಳ್ಳೆಯದು. ಶನಿ ಸಂಕ್ರಮಣವು ನಿಮ್ಮ ಉದ್ಯೋಗ ಹಾಗೂ ವ್ಯವಹಾರಕ್ಕೆ ಅಡ್ಡಿಯಾಗಲಿದೆ. ಹಾಗೆ ಕೌಟುಂಬಿಕ ಕಲಹಗಳು, ಮನಸ್ಥಾಪಗಳು ಹೆಚ್ಚಾಗುವ ಸಂಭವವಿದೆ. ನಿಮ್ಮ ಶತ್ರುಗಳಿಂದ ಸಮಸ್ಯೆಗಳು ಎದುರಾಗಬಹುದು. ಆಸ್ತಿ ವಿವಾದಗಳು, ಜಾಗ ಕುರಿತ ಗಲಾಟೆಗಳು ನಿಮಗೆ ಕಾಡಬಹುದು.
ಮೀನ ರಾಶಿ
ಶನಿಯು ಮೀನರಾಶಿಯಲ್ಲಿ ಬಹಳ ಕಾಲ ಇರುವ ಕಾರಣದೊಂದಿಗೆ ನಿಮಗೆ ಒಂದಿಷ್ಟು ಸವಾಲುಗಳ ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಲಿದೆ. ಒಂದಿಷ್ಟು ದಿನಗಳ ಕಾಲ ನೀವು ಹಣದ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ದಿನವಾಗಿರುವುದಿಲ್ಲ. ಹಾಗೆ ವ್ಯಾಪಾರಿಗಳು, ವಾಹನ ಮಾಲಿಕರಲ್ಲೂ ಈ ಸಮಯದಲ್ಲಿ ಒಂದಿಷ್ಟು ಅಡೆತಡೆಗಳು, ನಷ್ಟಗಳ ನೋಡಬಹುದು. ಈ ರಾಶಿಯ ಜನರು ಗಂಭೀರ ಸ್ಬರೂಪದ ಆರೋಗ್ಯ ಸಮಸ್ಯೆಗಳ ಎದುರಿಸಬೇಕಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
