ಶನಿ ಸಂಕ್ರಮಣ 2025: ಈ ಮೂರು ರಾಶಿಯವರಲ್ಲಿ ಆರ್ಥಿಕ ಸಂಕಷ್ಟ..ಕೆಲಸ ಕಾರ್ಯಕ್ಕೆ ಅಡೆತಡೆ!!

ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ಗ್ರಹಕ್ಕೆ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಇದೆ. ಪ್ರಮುಖ ಗ್ರಹವೆಂದು ಶನಿಯನ್ನು ಪರಿಗಣಿಸಲಾಗಿದೆ. ಶನಿಯು ನಿಧಾನವಾಗಿ ಚಲಿಸುವ ಕಾರಣ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಉಳಿಯಲಿದೆ. ಪ್ರಸ್ತುತ ಶನಿಯು ಈಗ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಹಾಗೆ ಶನಿಯನ್ನು ಮಕರ ಹಾಗೂ ಕುಂಭ ರಾಶಿಯ ಅಧಿಪತಿ ಎಂದು ನಂಬಲಾಗಿದೆ.

ಶನಿ ಸಂಚಾರವು ಹಲವು ರಾಶಿಗಳ ಮೇಲೆ ಪ್ರಭಾವ ಬೀರುವುದನ್ನು ನೋಡಬಹುದು. ನಿಮ್ಮ ಕಾರ್ಯಗಳಿಗೆ ಅನುಗುಣವಾಗಿ ಶನಿಯ ಫಲಿತಾಂಶ ನಾವು ಎದುರಿಸಬೇಕಾಗುತ್ತದೆ. ಆದ್ರೆ 2025ರಲ್ಲಿ ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಚಲಿಸಲಿದ್ದಾನೆ.

Saturn Transit 2025 These Zodiac Sign Will Be Face Financial Difficulties

ಶನಿಯು ಮೀನರಾಶಿಗೆ ಚಲಿಸುವುದರಿಂದ ಅದರ ಪ್ರಭಾವವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಇದು ಕೆಲವು ರಾಶಿಯವರಿಗೆ ಲಾಭದಾಯಕವಾದರೆ ಮತ್ತೆ ಕೆಲವು ರಾಶಿಯವರಲ್ಲಿ ಇನ್ನಿಲ್ಲದ ನಷ್ಟ ಹಾಗೂ ಸಂಕಷ್ಟಗಳ ತರಬಹುದು ಎಂದು ವಿವರಿಸಲಾಗುತ್ತದೆ. ಈ ಶನಿ ಸಂಕ್ರಮಣದಿಂದಾಗಿ, ಕೆಲವು ರಾಶಿ ಜನರಿಗೆ ಅರ್ಧಾಷ್ಟಮ ಶನಿ ಪ್ರಭಾವ ಆರಂಭವಾಗುತ್ತಿದೆ.

ಹಾಗಾದ್ರೆ ಜ್ಯೋತಿಷ್ಯದಲ್ಲಿ ಶನಿ ಸಂಚಾರದ ಈ ಪ್ರಕ್ರಿಯೆಯನ್ನು ಯಾವ ರೀತಿ ವಿವರಿಸಲಾಗಿದೆ? ಯಾವ ರಾಶಿಯವರು ಮುಂದಿನ ದಿನಗಳಲ್ಲಿ ಜಾಗೃತೆಯಾಗಿರಬೇಕು? ಯಾವ ರಾಶಿಯವರಿಗೆ ಈ ಶನಿ ಸಂಚಾರವು ಸಂಕಷ್ಟಗಳಿಗೆ ಕಾರಣವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಶನಿಯು 2025ರಲ್ಲಿ ಮೀನ ರಾಶಿಗೆ ಸಂಚರಿಸುತ್ತಿರುವುದು ಮೇಷ ರಾಶಿಯವರಲ್ಲಿ ಕಷ್ಟದ ದಿನಗಳ ನೋಡುವಂತೆ ಮಾಡಲಿದೆ. ಮೇಷ ರಾಶಿಯ 12ನೇ ಮನೆಯಲ್ಲಿ ಶನಿ ಇರುವುದರಿಂದ ಮುಂದಿನ ಎರಡೂವರೆ ವರ್ಷ ನಿಮ್ಮ ಪಾಲಿಗೆ ದೋಷ ನಿವಾರಣೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದು ನಿಮ್ಮಲ್ಲಿ ಪ್ರಗತಿಯ ಕುಂಠಿತ ಮಾಡಲಿದೆ. ನಿಮ್ಮ ಏಳಿಗೆಯಲ್ಲಿ ಏರಿಳಿತಗಳು ನೋಡಲಿದ್ದೀರಿ. ಹಾಗೆ ಆರೋಗ್ಯದಲ್ಲೂ ಹಲವು ರೀತಿಯ ಪರಿಣಾಮ ಎದುರಿಸಬೇಕಾಗಬಹುದು. ಸಣ್ಣಪುಟ್ಟ ಕೆಲಸಗಳನ್ನೂ ಪೂರ್ಣಗೊಳಿಸಲು ಕಷ್ಟಪಡಬೇಕಾಗುತ್ತದೆ. ಮುಖ್ಯವಾಗಿ ವಿತ್ತೀಯ ನಷ್ಟವನ್ನು ಎದುರಿಸುವ ಸಾಧ್ಯತೆ ಇರುವುದರಿಂದ ಹಣದ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಸಿಂಹ ರಾಶಿ

ಶನಿ ಸಂಕ್ರಮಣದಿಂದಾಗಿ ಸಿಂಬ ರಾಶಿಯವರಲ್ಲಿ ಅನೇಕ ಬದಲಾವಣೆಗಳಿಗೆ ಇದು ಕಾರಣವಾಗುತ್ತಿದೆ. ಸಿಂಹ ರಾಶಿಯ 8ನೇ ಮನೆಯಲ್ಲಿ ಶನಿ ಚಲನೆ ಇರಲಿದೆ. ಹೀಗಾಗಿ ನೀವು ಮಾರ್ಚ್‌ ತಿಂಗಳ ಬಳಿಕ ಎಚ್ಚರಿಕೆಯಿಂದಿರಬೇಕಾಗುತ್ತದೆ. ಒಂದಿಷ್ಟು ಸಮಸ್ಯೆಗಳು ನಿಮ್ಮನ್ನು ಹುಡುಕಿ ಬರಲಿವೆ. ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ನೀವು ಒತ್ತಡ ಹಾಗೂ ಹಣಕಾಸು ಖರ್ಚು ಮಾಡಬೇಕಾಗಿ ಬರಬಹುದು. ವೈದ್ಯಕೀಯ ವೆಚ್ಚ ಭರಿಸಲು ಸಾಲ ಮಾಡಬೇಕಾಗಿ ಬರಬಹುದು. ಕೆಲಸದಲ್ಲಿ ಏರಿಳಿತಗಳನ್ನು ಎದುರಿಸುವಿರಿ. ಹಾಗಾಗಿ ಉದ್ಯೋಗಿಗಳು ಕಚೇರಿಯಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಇದರ ಪರಿಹಾರಕ್ಕಾಗಿ ನೀವು ಶನಿ ದೇವರಿಗೆ ಸಾಸಿವೆ ಎಣ್ಣೆಯ ಅರ್ಪಿಸುವುದು ಉತ್ತಮ.

ಧನು ರಾಶಿ

2025 ರಲ್ಲಿ ಶನಿಯ ಸಂಕ್ರಮಣದಿಂದಾಗಿ ಶನಿಯು ಧನು ರಾಶಿಯ 4 ನೇ ಮನೆಯಲ್ಲಿ ಚಲಸುತ್ತಾನೆ. ಈ ಕಾರಣದಿಂದಾಗಿ ಧನು ರಾಶಿಯ ಜನರಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಕುಟುಂಬದಲ್ಲಿ ಹೆಚ್ಚಿನ ಅಡತಡೆಗಳು ಎದುರಾಗುತ್ತವೆ. ನೀವು ಅಂದುಕೊಂಡಿರುವ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸಹಕಾರ ಸಿಗದೆ ಇರಬಹುದು, ಹಾಗೆ ಹಣಕಾಸಿನ ನೆರವು ಮತ್ತು ಒಟ್ಟುಗೂಡುವಿಕೆ ಕಷ್ಟವಾಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಹೊಸ ಜವಾಬ್ದಾರಿ ಹಾಗೂ ನಾಯಕತ್ವದಿಂದ ಒತ್ತಡ ಹೆಚ್ಚಲಿದೆ. ದಾಂಪತ್ಯ ಜೀವನದಲ್ಲೂ ಸಂತಸ ಇರುವುದಿಲ್ಲ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Saturn Transit 2025: These Zodiac Sign Will Be Face Financial Difficulties

How is this process of Saturn's transit explained in astrology? Which zodiac signs should be vigilant in the coming days?
Story first published: Tuesday, December 24, 2024, 14:30 [IST]
X
Desktop Bottom Promotion