Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಭ ರಾಶಿಯಲ್ಲಿ ಶನಿ-ಸೂರ್ಯ ಸಂಯೋಗ: 3 ರಾಶಿಯವರಲ್ಲಿ ಕಲಹ ಸೃಷ್ಟಿ..!
ಗ್ರಹಗತಿಗಳ ಚಲನೆಯಲ್ಲಿ ಉಂಟಾಗುವ ಬದಲಾವಣೆಗಳು ಹಲವು ಬಗೆಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಪ್ರಮುಖ ಗ್ರಹಗಳ ಚಲನೆಯಿಂದ ಹಲವು ರಾಶಿಗಳಲ್ಲಿ ಶುಭಕರ ಹಾಗೂ ಅಶುಭಕರ ಲಾಭಕ್ಕೆ ಕಾರಣವಾಗುವುದು ನೋಡಬಹುದು. ಹಾಗೆ ಗ್ರಹಗಳಲ್ಲಿ ಪ್ರಮುಖ ಕೇಂದ್ರ ಬಿಂದು ಎಂದು ಕರೆಯಲಾಗುವ ಸೂರ್ಯನು ತನ್ನ ರಾಶಿ ಬದಲಿಸುತ್ತಿರುವುದು ಕೂಡ ಹಲವು ಶುಭ ಹಾಗೂ ಅಶುಭಕ್ಕೆ ಕಾರಣವಾಗುತ್ತಿದೆ.
ಸೂರ್ಯನು ಪ್ರತಿ ತಿಂಗಳು ಒಂದೊಂದು ರಾಶಿಯಲ್ಲಿ ಸಂಚರಿಸುತ್ತಾನೆ. ಇದರಿಂದ ವರ್ಷದಲ್ಲಿ ಎಲ್ಲಾ 12 ರಾಶಿಗಳಿಗೂ ಅದರಿಂದ ಲಾಭ ನಷ್ಟದ ಲೆಕ್ಕಾಚಾರ ಇದ್ದೇ ಇರುತ್ತೆ. ಹಾಗೆ ಈ ಫೆಬ್ರವರಿ 12ರಂದು ಸೂರ್ಯನು ಕುಂಭ ರಾಶಿ ಪ್ರವೇಶಿಸಲಿದೆ. ಕುಂಭ ರಾಶಿ ಶನಿಯ ಆಳ್ವಿಕೆ ಇರುವಂತಹ ಗ್ರಹವಾಗಿದೆ. ಈ ರಾಶಿಗೆ ಸೂರ್ಯನ ಸಂಚಾರವು ಹಲವು ರೀತಿ ಲಾಭ ನಷ್ಟಕ್ಕೆ ಕಾರಣವಾಗುತ್ತಿದೆ.

ಕುಂಭ ರಾಶಿಯಲ್ಲಿ ಶನಿ ನೆಲೆಸಿದ್ದು, ಈ ರಾಶಿಗೆ ಸೂರ್ಯನ ಸಂಚಾರವು ಪ್ರತಿಕೂಲಕ್ಕೆ ಕಾರಣವಾಗುತ್ತಿದೆ. ಹಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಬಹುದು. ಹಾಗಾದ್ರೆ ನಾವಿಂದು ಸೂರ್ಯನ ಕುಂಭ ರಾಶಿಗೆ ಸಂಚರಿಸುವ ಪ್ರಕ್ರಿಯೆಯಿಂದ ಯಾವ ರಾಶಿಯವರಿಗೆ ದಾಂಪತ್ಯ ಸಂಬಂಧದಲ್ಲಿ ಸಮಸ್ಯೆ ಕಾಡಬಹುದು ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಸೂರ್ಯ ಮತ್ತು ಶನಿಯ ಸಂಯೋಗವು ವೃಷಭ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತಿದೆ. ನಿಮ್ಮ ದಾಂಪತ್ಯ ಸಂಬಂಧದಲ್ಲಿ ವಿರಸ ಉಂಟಾಗಬಹುದು, ಸಣ್ಣ ಪುಟ್ಟ ಸಮಸ್ಯೆಗಳು ದೊಡ್ಡದಾಗಿ ಕಾಡಬಹುದು. ಹಾಗೆ ನಿಮ್ಮ ಸಣ್ಣಪುಟ್ಟ ಆರ್ಥಿಕ ಸಮಸ್ಯೆಗಳು ದೊಡ್ಡದಾಗಿ ತಲೆನೋವಿಗೆ ಕಾರಣವಾಗಬಹುದು. ಈ ಸಮಯದಲ್ಲಿ ಹಣಕಾಸಿನ ಸಮಸ್ಯೆ ಇದ್ದರೂ ಸಾಲ ಮಾಡಲು ಮುಂದಾಗಬೇಡಿ. ಆರೋಗ್ಯದಲ್ಲೂ ಏರುಪೇರಾಗಬಹುದು, ಹೀಗಾಗಿ ಹೆಚ್ಚಿನ ಜಾಗೃತೆ ಅವಶ್ಯ.
ಸಿಂಹ ರಾಶಿ
ಸೂರ್ಯ-ಶನಿ ಸಂಯೋಗವು ಸಿಂಹ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಲಿದೆ. ಕುಟುಂಬಸ್ಥರಿಂದ ಕಿರಿಕಿರಿ, ದಾಂಪತ್ಯ, ಪ್ರೀತಿಯ ಜೀವನದಲ್ಲು ಕಿರಿಕಿರಿ ಉಂಟಾಗಲಿದೆ. ಹಾಗೆ ನಿಮ್ಮ ಹಣಕಾಸಿನ ಪರಿಸ್ಥಿತಿಯು ಅಷ್ಟು ಉತ್ತಮವಾಗಿರುವುದಿಲ್ಲ. ಪ್ರತಿ ಸಮಸ್ಯೆಗಳ ಪರಿಹಾರ ಮಾರ್ಗ ಮತ್ತಷ್ಟು ಕಷ್ಟ ಎನಿಸಲು ಆರಂಭಿಸುತ್ತದೆ. ನಿಮ್ಮ ಕೆಲಸಗಳಲ್ಲಿ ಅಡೆತಡೆಗಳು, ಕಷ್ಟದ ಅನುಭವ ಉಂಟಾಗಬಹುದು. ನಿಮ್ಮ ಅರಿವಿಲ್ಲದೆ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ನಿಮ್ಮ ವ್ಯಪಾರ ವ್ಯವಹಾರದಲ್ಲೂ ಅಡೆತಡೆಗಳ ಎದುರಿಸುತ್ತೀರಿ. ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿ ಲಾಭ ಕಡಿಮೆಯಾಗಬಹುದು. ಹಾಗೆ ನಿಮ್ಮ ಆದಾಯದ ಮೂಲದಲ್ಲೂ ಕೂಡ ಏರುಪೇರು ಉಂಟಾಗಬಹುದು.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿ ಒಟ್ಟಿಗೆ ಚಲಿಸುವುದು ಪ್ರಯೋಗಳಿಗೂ ಕಾರಣವಾಗುತ್ತಿದೆ. ಆದರೆ ಶನಿ ಮತ್ತು ಸೂರ್ಯ ವಿರೋಧಾಭಾಸ ಉಂಟುಮಾಡಲಿದೆ. ಕೆಲವು ಗಂಭೀರ ರೀತಿಯ ಸಮಸ್ಯೆಗಳು ಕೂಡ ಎದುರಾಗಲಿವೆ. ಕೆಲವೊಂದು ಹೂಡಿಕೆ, ಉಳಿತಾಯದಲ್ಲಿ ನಿಮಗೆ ಲಾಭವಾಗುವ ಬದಲಾಗಿ ನಷ್ಟಕ್ಕೆ ಕಾರಣವಾಗಬಹುದು. ನೀವು ಕೌಟುಂಬಿಕ ಕಲಹದಂತಹ ಸಮಸ್ಯೆಗಳು, ಸಂಬಂಧಲ್ಲಿ ಗಲಾಟೆ, ಕಿರಿಕಿರಿಯು ಕೂಡ ಉಂಟಾಗಬಹುದು. ಮೂಳೆ, ಉದರ , ಹೃದಯ ಸಂಬಂಧಿ ಸಮಸ್ಯೆ ಇದ್ದವರು ಹೆಚ್ಚು ಎಚ್ಚರಿಕೆ ವಹಿಸಬೇಕಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications