Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಭ ರಾಶಿಯಲ್ಲಿ ಶನಿ ಅಸ್ತ: ಏಪ್ರಿಲ್‌ವರೆಗೂ ಇವರಿಗೆ ಕಾಡಲಿದ್ದಾನೆ ಶನಿ..!!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ಗ್ರಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಶನಿ ಗ್ರಹವು ಒಂದೇ ರಾಶಿಯಲ್ಲಿ ಒಂದೂವರೆ ವರ್ಷಗಳ ಕಾಲ ಸಂಚರಿಸಲಿದ್ದಾನೆ. ಹೀಗೆ ಒಂದೇ ರಾಶಿಯಲ್ಲಿ ಇಷ್ಟು ದೀರ್ಘ ಪ್ರಯಾಣವು ಹಲವು ರಾಶಿಯವರಿಗೆ ಲಾಭದಾಯಕವಾಗಲಿದೆ. ಸದ್ಯ ಶನಿ ಈಗ ಕುಂಭ ರಾಶುಯಲ್ಲಿ ಚಲಿಸುತ್ತಿದ್ದಾನೆ. ಈ ಚಲನೆಯ ನಡುವೆ ಶನಿ ಅಸ್ತಮಿಸಿ ಮತ್ತ ಉದಯಿಸುವ ಕಾರ್ಯ ಕೂಡ ನಡೆಯಲಿದೆ.
ಸದ್ಯ ಶನಿ ಕುಂಭ ರಾಶಿಯಲ್ಲಿರುವ ಶನಿಯು ಮಾರ್ಚ್‌ನಲ್ಲಿ ತನ್ನ ರಾಶಿ ಬದಲಿಸಲಿದ್ದಾನೆ. ಅಲ್ಲಿಯವರೆಗೆ ಕುಂಭ ರಾಶಿಯಲ್ಲಿ ವೇಗದ ಚಲನೆ ನೋಡಬಹುದು. ನಂತರ ಮಾರ್ಚ್ 29ರಂದು ಮೀನ ರಾಶಿಗೆ ಚಲಿಸುತ್ತಾನೆ. ಈ ನಡುವಿನ ದಿನದಲ್ಲಿ ಶನಿ ಅಸ್ತಮಿಸಲಿದ್ದಾನೆ. ಫೆಬ್ರವರಿ 28 ರಂದು ಸಂಜೆ 7:05 ಕ್ಕೆ ಶನಿಗ್ರಹವು ಅಸ್ತಮಿಸಲಿದೆ. ಹಾಗೆ ಏಪ್ರಿಲ್ 9ರಂದು ಉದಯಿಸಲಿದ್ದಾನೆ.

ಈ ಸಮಯದಲ್ಲಿ ಹಲವು ರಾಶಿಗಳಿಗೆ ಲಾಭದಾಯಕ ಸಮಯ ಎಂಬುದನ್ನು ನಾವು ನೋಡಬಹುದು. ಕರ್ಮಗಳ ಅನುಸಾರ ಲಾಭ ನಷ್ಟಕ್ಕೆ ಕಾರಣವಾಗುವುದು ಶನಿ ಗ್ರಹವಾಗಿದೆ. ಶನಿ ಅಸ್ತದಿಂದ ಶಕ್ತಿ ದುರ್ಬಲವಾಗುತ್ತದೆ ಎಂದು ನಂಬಲಾಗಿದೆ. ಇದು ಕೆಲ ರಾಶಿಗಳಿಗೆ ಅದೃಷ್ಟದ ಸಮಯವಾಗಲಿದೆ, ಒಟ್ಟು 37 ದಿನಗಳ ಕಾಲ ಶನಿ ಸ್ಥಾನಪಲ್ಲಟವು ಕೆಲವು ರಾಶಿಗೆ ಲಾಭ ತರುತ್ತಿದೆ. ಶನಿ ಅಸ್ತ ಹಾಗೂ ಉದಯದ ನಡುವೆ 37 ದಿನಗಳ ಅಂತರವಿದೆ. ಹಾಗಾದ್ರೆ ಈ ಸಮಯದಲ್ಲಿ ಯಾವ ರಾಶಿಯವರು ಶನಿಯಿಂದ ಸಮಸ್ಯೆಗೆ ಒಳಗಾಗುತ್ತಾರೆ ಎಂಬುದನ್ನು ಇಲ್ಲಿ ತಿಳಿದಕೊಳ್ಳೋಣ.
ಕರ್ಕ ರಾಶಿ
ಶನಿ ಗ್ರಹವು ಕರ್ಕ ರಾಶಿಯ 8ನೇ ಮನೆಯಲ್ಲಿ ಸ್ಥಾನ ಪಡೆಯಲಿದೆ. ಇದರಿಂದ ಈ ಕರ್ಕ ರಾಶಿಯವರ ವೃತ್ತಿ ಮತ್ತು ವ್ಯವಹಾರವು ಯಾವ ಅಡೆತಡೆಗಳ ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗೆ ಸವಾಲು ಒಡ್ಡುವ ಪರಿಸ್ಥಿತಿಗಳು ಎದುರಾಗಲಿದೆ. ಹಾಗೆ ಒತ್ತಡ, ಅಶಾಂತಿ ಹೆಚ್ಚಾಗುವ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆ, ಅನಾರೋಗ್ಯದಂತಹ ಸಮಸ್ಯೆಗಳಿಗೂ ನೀವು ಒಳಗಾಗಬಹುದು. ಹಾಗೆ ವ್ಯಾಪಾರದಲ್ಲಿ ಹಣದ ಓಡಾಟ ಕಷ್ಟವಾಗಬಹುದು. ಕುಟುಂಬಸ್ಥರಿಗೆ ನಿಮ್ಮಿಂದ ನೋವು, ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಸಿಂಹ ರಾಶಿ
ಶನಿ ಸಿಂಹ ರಾಶಿಯ 7ನೇ ಮನೆಯಲ್ಲಿ ಸ್ಥಾನ ಪಡೆಯಲಿದ್ದಾನೆ. ಹೀಗಾಗಿ ಈ ರಾಶಿಯವರಲ್ಲಿ ದಾಂಪತ್ಯ ಜೀವನದ ಅಷ್ಟೊಂದು ಸುಖಕರವಾಗಿರುವುದಿಲ್ಲ. ಕುಟುಂಬಸ್ಥರೊಂದಿಗೆ ವಾಗ್ವಾದ, ಕಲಹಗಳು ಈ ಸಮಯದಲ್ಲಿ ನೋಡಬಹುದು. ಹಾಗೆ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುವಂತಹ ಹಲವು ಘಟನೆಗಳಿಗೆ ನೀವು ಸಾಕ್ಷಿಯಾಗುತ್ತೀರಿ. ಉದ್ಯೋಗ, ಕಚೇರಿ ವಿಚಾರಗಳಲ್ಲಿಯೂ ಹಿನ್ನಡೆ ಅನುಭವಿಸಬೇಕಾಗಲಿದೆ. ಹಲವು ಭಿನ್ನಾಭಿಪ್ರಾಯಗಳಿಂದ ನಿಮ್ಮ ಕುಟುಂಬದಲ್ಲಿ ಅಶಾಂತಿ ನೆಲೆಸಬಹುದು. ಆರೋಗ್ಯದಲ್ಲಿ ಏರುಪೇರು ನೋಡಬಹುದು. ವಾಹನ ಮಾಲಿಕರು ಎಚ್ಚರಿಕೆಯ ತೆಗೆದುಕೊಳ್ಳಬೇಕು. ಹಾಗೆ ಬಹುಕಾಲದ ನಿಮ್ಮ ಬಯಕೆಗಳು ಮತ್ತೆ ಮುಂದೂಡಬೇಕಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ 4ನೇ ಮನೆಯಲ್ಲಿ ಶನಿ ಸಂಚಾರ ನೋಡಬಹುದು. ಹೀಗಾಗಿ ನಿಮ್ಮಲ್ಲಿ ಆಸ್ತಿ ವ್ಯವಹಾರ, ಸಾಲದಂತಹ ವ್ಯವಹಾರದಲ್ಲಿ ಎಚ್ಚರಿಕೆ ಇಡಬೇಕು. ನಿಮ್ಮ ವ್ಯಾಪಾರದಲ್ಲಿ ತೊಡಕುಗಳು ಎದುರಾಗಬಹುದು. ಸರ್ಕಾರಿ ನೌಕರರಲ್ಲಿ ದಿಢೀರ್ ವರ್ಗಾವಣೆಯಂತಹ ಪ್ರಕ್ರಿಯೆ ಉಂಟಾಗಬಹುದು. ಆರೋಗ್ಯದ ಕುರಿತು ಹೆಚ್ಚು ಗಮನವಿಡಿ. ಹಳೆಯ ಬಾಕಿ ಸಾಲಗಳು, ಕೆಲಸಗಳು ಹಾಗೆ ಉಳಿದುಬಿಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications