Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರ ಗ್ರಹಣದ ಬಳಿಕ ಶನಿ ಅಸ್ತಮ: ಶನಿಯ ಪ್ರಭಾವ ಇಳಿಕೆಯಿಂದ ಈ ರಾಶಿಯವರಿಗೆ ಅನುಕೂಲ
ಮಾರ್ಚ್‌ನಲ್ಲಿ ಹಲವು ರೀತಿಯ ಗ್ರಹಗತಿಗಳ ವಿದ್ಯಮಾನಗಳ ನೋಡಬಹುದು. ಆರಂಭದಲ್ಲೇ ಚಂದ್ರಗ್ರಹಣ ಉಂಟಾಗುತ್ತಿರುವುದು ಹಾಗೆ ಶನಿ ಸೇರಿದಂತೆ ಹಲವು ಗ್ರಹಗಳ ಪಥದಲ್ಲಿ ಬದಲಾಗುವುದು ಸಹ ನೋಡಬಹುದು. ಅದ್ರಲ್ಲೂ ಮಾರ್ಚ್ ಮೊದಲ ವಾರದಲ್ಲಿ ಈ ಚಂದ್ರಗ್ರಹಣವಿದ್ದರೆ ಮಾರ್ಚ್ 2ನೇ ವಾರದಲ್ಲಿ ಶನಿಯ ಚಲನೆಯಲ್ಲಿನ ಬದಲಾವಣೆಯು ಹಲವು ರೀತಿಯ ವಿದ್ಯಮಾನಗಳಿಗೆ ಕಾರಣವಾಗುತ್ತದೆ.
ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ಬಹಳ ಮುಖ್ಯ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ನಿಧಾನವಾಗಿ ಚಲಿಸುವ ಕಾರಣ ಒಂದೇ ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಚಲಿಸಲಿದ್ದಾನೆ. ಹಾಗೆ ಕೆಲವು ಬಾರಿ ಅಸ್ತಮ ಸ್ಥಿತಿಯಲ್ಲಿ ಮತ್ತೆ ಕೆಲವು ಬಾರಿ ಉಗಮ ಸ್ಥಿತಿಯಲ್ಲಿರುವುದು ನೋಡಬಹುದು. ಈಗ ಮಾರ್ಚ್ 13ರಂದು ಶನಿ ಅಸ್ತಮ ಸ್ಥಿತಿಯಲ್ಲಿರಲಿದ್ದಾನೆ.

ಮಾರ್ಚ್ 13ರಿಂದ ಏಪ್ರಿಲ್ 22ರ ವರೆಗೂ ಶನಿ ಅಸ್ತಮ ಸ್ಥಿತಿಯಲ್ಲಿ ಮುಂದುವರೆಯುತ್ತಾನೆ. ಹೀಗಾಗಿ ಈ ಸಮಯದಲ್ಲಿ ಶನಿಯ ಪ್ರಭಾವವು ಗಣನೀಯವಾಗಿ ಇಳಿಕೆಯಾಗುತ್ತದೆ. ಇದು ಹಲವರಲ್ಲಿ ವೃತ್ತಿ, ಕೌಟುಂಬಿಕ ವಿಚಾರ, ಆರೋಗ್ಯ, ಆರ್ಥಿಕತೆ ಸೇರಿದಂತೆ ಹಲವು ವಿಚಾರದಲ್ಲಿ ಶುಭದಾಯಕವಾಗುವುದು ನೋಡಬಹುದು. ಸಾಮಾನ್ಯವಾಗಿ ಈ ಸಮಯದಲ್ಲಿ ಹೊಸ ಆರಂಭಗಳು ಶುಭ ತರುವುದು ನೋಡಲಿದ್ದೇವೆ.
ಶನಿ ಮೀನ ರಾಶಿಯಲ್ಲಿ ಅಸ್ತಮನಾಗುತ್ತಾನೆ. ಇದು ಹಲವು ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುವುದು ನೋಡಬಹುದು. ಅವಧಿಯಲ್ಲಿ ಪ್ರಮುಖ 4 ರಾಶಿ ಜನರ ಮೇಲೆ ಉತ್ತಮ ಪ್ರಭಾವ ಉಂಟು ಮಾಡಲಿದೆ. ವೃತ್ತಿ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಪರಿಹಾರ ಮತ್ತು ಯಶಸ್ಸಿನ ಅವಕಾಶಗಳು ಉಂಟಾಗುತ್ತವೆ. ಈ ಸಮಯದಲ್ಲಿ ವಿಶೇಷ ಪ್ರಯೋಜನಗಳನ್ನು ಅನುಭವಿಸುವ ಸಾಧ್ಯತೆಯಿದೆ. ಹಾಗಾದ್ರೆ ಶನಿ ಪ್ರಭಾವ ಕಡಿಮೆಯಾಗುವ ಕಾರಣ ಯಾವ ರಾಶಿಯವರಿಗೆ ಈ ಸಮಯ ಅನುಕೂಲಕರವಾಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಸಿಂಹ ರಾಶಿ
ಶನಿ ಅಸ್ತಮದಿಂದಾಗಿ ಸಿಂಹ ರಾಶಿಯವರಿಗೆ ಆತನ ಪ್ರಭಾವದಿಂದ ವಿರಾಮ ಸಿಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಮಾನಸಿಕ ಸ್ಥಿರತೆಯನ್ನು ಸಹ ಅನುಭವಿಸುವಿರಿ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಕೆಲಸದ ಸ್ಥಳದಲ್ಲಿ ಯಶಸ್ಸಿಗೆ ಹೊಸ ಅವಕಾಶಗಳು ಹೊರಹೊಮ್ಮುತ್ತವೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಲವು ಸಮಯದಿಂದ ಪೂರ್ಣಗೊಳ್ಳದೆ ಇದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ವ್ಯಾಪಾರ ಸಂಬಂಧಿತ ವಿಚಾರದಲ್ಲಿನ ನಷ್ಟಗಳು ಕಡಿಮೆಯಾಗುವ ಸಮಯವಿದು. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ.
ಧನು ರಾಶಿ
ಶನಿಯ ಅಸ್ತಮದ ಕಾರಣದಿಂದ ಧನು ರಾಶಿಯ ಜನರಿಗೆ ಸಕಾರಾತ್ಮಕವಾಗಿರಲಿದೆ. ಸೌಕರ್ಯಗಳು ಹೆಚ್ಚಾಗುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಜೀವನದಲ್ಲಿ ಹೊಸ ಗುರಿಗಳನ್ನು ಹೊಂದಿಸುವ ಸಮಯ ಇದು. ವೃತ್ತಿ ಅಥವಾ ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿನ ಅಡ್ಡಿಗಳು ನಿವಾರಣೆಯಾಗುವುದು ನೋಡಲಿದ್ದೀರಿ. ಮನೆ ನಿರ್ಮಾಣ ವಿಚಾರದಲ್ಲಿ ಮತ್ತೆ ವೇಗ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವ ಸಮಯವೂ ಇದಾಗುತ್ತಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಶನಿಯ ಅಸ್ತಮವು ಪ್ರಯೋಜನಕಾರಿಯಾಗಿರುತ್ತದೆ. ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ದೊಡ್ಡ ವ್ಯವಹಾರಗಳು ಅಥವಾ ಲಾಭಗಳಿಗೆ ಅವಕಾಶಗಳು ಉದ್ಭವಿಸುತ್ತವೆ. ದೀರ್ಘಕಾಲದಿಂದ ಬಾಕಿ ಇರುವ ಹಣ ಹಿಂತಿರುಗುವ ಸಾಧ್ಯತೆಯಿದೆ. ಮನೆಯ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ಎಲ್ಲರು ಒಪ್ಪುವಂತೆ ಇರಲಿದೆ. ಬಹು ಸಮಯದ ಕೆಲಸವೊಂದನ್ನು ಪೂರ್ಣ ಮಾಡುವಿರಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಸಮಯವು ಹೆಚ್ಚಿದ ಆತ್ಮವಿಶ್ವಾಸವನ್ನು ತರುತ್ತದೆ. ಶನಿ ಪ್ರಭಾವದ ಕಾರಣದಿಂದ ಅರ್ಧಕ್ಕೆ ನಿಂತ ಹಲವು ಕೆಲಸಗಳನ್ನು ಪೂರ್ಣ ಮಾಡುವಿರಿ. ಆಪ್ತರೊಬ್ಬರಿಗೆ ನಿಮ್ಮಿಂದ ಹಣಕಾಸಿನ ನೆರವು ಸಿಗಲಿದೆ. ಪಾಲುದಾರಿಕೆಗೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಲಾಭದ ಅವಕಾಶಗಳು ಉದ್ಭವಿಸುತ್ತವೆ. ವೈವಾಹಿಕ ಜೀವನದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಕುಟುಂಬ ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ.



Click it and Unblock the Notifications











