Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಮೀನ ರಾಶಿಯಲ್ಲಿ ಶನಿ ಉದಯ: ಈ ರಾಶಿಯವರಿಗೆ ಏಪ್ರಿಲ್ ಮಾಸದಿಂದ ಅದೃಷ ಬದಲು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಶನಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹವಾಗಿದೆ. ಹೀಗಾಗಿ ಶನಿ ಒಂದೇ ರಾಶಿಯಲ್ಲಿ ಹಲವು ಕಾಲ ಉಳಿಯುತ್ತಾನೆ. ಹೀಗಾಗಿ ಶನಿಯ ಪ್ರಭಾವ ಕೂಡ ದೀರ್ಘಕಾಲವಾಗಿರುತ್ತೆ. ವ್ಯಕ್ತಿಯೊಬ್ಬನ ಜೀವನದ ಮೇಲೆ ಶನಿಯ ಪ್ರಭಾವ ಅತ್ಯಂತ ಪ್ರಮುಖವಾಗಿರುತ್ತದೆ. ಇದರಿಂದ ಆತ ಲಾಭ ನಷ್ಟದ ಜೀವನಕ್ಕೆ ತೆರೆದುಕೊಳ್ಳುತ್ತಾನೆ. ಶನಿ ಪ್ರತಿ ಎರಡೂವರೆ ವರ್ಷಕ್ಕೊಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ.
ಈಗ ಶನಿ ಮೀನರಾಶಿಯಲ್ಲಿ ಚಲಿಸಲಿದ್ದಾನೆ. ಇದೇ ಮಾರ್ಚ್ 29ರಂದು ಶನಿಯು ಮೀನರಾಶಿಯಲ್ಲಿ ಉದಯಿಸಲಿದ್ದಾನೆ. ಈ ಮೂಲಕ ಎಲ್ಲಾ 12 ರಾಶಿಗಳ ಮೇಲೆಯೂ ತನ್ನ ಪರಿಣಾಮ ಬೀರಲಿದ್ದಾನೆ. ಹಾಗಾದ್ರೆ ಈ ಶನಿಯ ಸಂಚಾರವು ಯಾವೆಲ್ಲಾ ರಾಶಿಗಳಿಗೆ ಶುಭ ಯೋಗ ತರಲಿದ್ದಾನೆ. ಇದರಿಂದ ಯಾರಿಗೆಲ್ಲಾ ಲಾಭದಾಯಕವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೀನ ರಾಶಿಯು ಗುರುವಿನ ಪ್ರಾಬಲ್ಯ ಇರುವ ರಾಶಿಯಾಗಿದೆ. ಗುರುವಿನ ಅದೃಷ್ಟದೊಂದಿಗೆ ಮೀನ ರಾಶಿಯವರಲ್ಲಿ ಈಗ ಶನಿಯ ಪ್ರಭಾವ ಕೂಡ ನೋಡಬಹುದು. ಹಾಗೆ ಉಳಿದಂತೆ ಈ ಮೂರು ರಾಶಿಯವರಲ್ಲೂ ಶನಿಯ ಪ್ರಭಾವದಿಂದ ಧನಾತ್ಮಕ ಲಾಭವನ್ನು ನೋಡಬಹುದು. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಈ ಶನಿ ಸಂಚಾರ ಲಾಭದಾಯಕವಾಗುತ್ತಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಶನಿದೇವನು ಮೇಷ ರಾಶಿಯ 12ನೇ ಮನೆಯಲ್ಲಿ ಉದಯಿಸುತ್ತಾನೆ. ಇದು ನಿಮ್ಮ ಜೀವನದಲ್ಲಿ ಹಲವು ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಇಲ್ಲಿಯವರೆಗೆ ನೀವು ವ್ಯಾಪಾರ, ವ್ಯವಹಾರ ಸಂಬಂಧ ಎದುರಿಸಿದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಹಾಗೆ ನಿಮ್ಮ ಆರ್ಥಿಕ ಸಮಸ್ಯೆಗಳಲ್ಲಿ ಬಹಳಷ್ಟು ನಿವಾರಣೆಯಾಗುತ್ತಿವೆ. ಹೊಸ ಉದ್ಯೋಗಗಳು, ಉದ್ಯಮಗಳು ನಿಮ್ಮ ಕೈ ಹಿಡಿಯಲಿವೆ. ದಾಂಪತ್ಯ ಜೀವನದಲ್ಲಿ ನೀವು ಅನುಭವಿಸಿರುವ ನೋವು, ಕಷ್ಟಗಳು ಕೂಡ ಈ ಸಮಯದಲ್ಲಿ ದೂರಾಗಬಹುದು. ಮಕ್ಕಳ ಭವಿಷ್ಯಕ್ಕಾಗಿ ನಿಮ್ಮ ನಿರ್ಧಾರವನ್ನು ಎಲ್ಲರು ಬೆಂಬಲಿಸಲಿದ್ದಾರೆ. ಹೂಡಿಕೆ, ಉಳಿತಾಯದ ಕಡೆಗೆ ಹೆಚ್ಚು ಒಲವು ಹೊಂದಿರುತ್ತೀರಿ. ಆರೋಗ್ಯ ಸುಧಾರಿಸಿಕೊಳ್ಳುವ ಒಳ್ಳೆಯ ಅವಕಾಶಗಳಿವೆ. ನಿಮ್ಮ ಆಧ್ಯಾತ್ಮಿಕ ನಿಲುವುಗಳು ಈ ಸಮಯದಲ್ಲಿ ಮತ್ತಷ್ಟು ಬಲಗೊಳ್ಳುತ್ತವೆ. ನ್ಯಾಯಾಲಯ, ಬ್ಯಾಂಕಿಂಗ್, ಆಸ್ತಿ ಸಂಬಂಧಿ ವಿಚಾರಗಳಲ್ಲಿ ನಿಮ್ಮ ಗೆಲುವಾಗಲಿದೆ.
ಮಿಥುನ ರಾಶಿ
ಶನಿಯು ಮಿಥುನ ರಾಶಿಯ 10ನೇ ಮನೆಯಲ್ಲಿ ಉದಯಿಸುತ್ತಾನೆ. ಈ ಪರಿಣಾಮದಿಂದ ಮಿಥುನ ರಾಶಿಯವರ ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಯಾಗಲಿದೆ. ಈ ಬದಲಾವಣೆಗಳು ನಿಮ್ಮಲ್ಲಿ ಹೊಸ ಹುರುಪು, ಹೊಸ ಅವಕಾಶ, ಹೊಸ ಆದಾಯಗಳಿಗೆ ಕಾರಣವಾಗಲಿದೆ. ನೀವು ಅಂದುಕೊಂಡಿದ್ದ ಗುರಿ ತಲುಪಲು ಈ ಸಮಯದಲ್ಲಿ ಬಹಳ ಸುಲಭದ ದಾರಿ ಹಾಗೂ ನೆರವು ಕೂಡ ಸಿಗಲಿದೆ. ಕೆಲಸದ ಸ್ಥಳದಲ್ಲಿದ್ದ ಒತ್ತಡಗಳು ಒಂದೊಂದಾಗಿ ನಿವಾರಣೆಯಾಗಲಿದೆ. ನೀವು ಅವಿವಾಹಿತರಾಗಿದ್ದರೆ ವಿವಾಹ ಬಂಧನದಲ್ಲಿ ನಂಬಿಕೆ ಇಟ್ಟು ಮುಂದಿನ ಹೆಜ್ಜೆ ಇಡಬಹುದು. ಈ ಸಮಯದಲ್ಲಿ ನಿಮ್ಮ ಗೌರವ, ಘಟತೆ ಹೆಚ್ಚಾಗುವುದನ್ನು ನೋಡಬಹುದು. ಮನೆಗಾಗಿ ಅಮೂಲ್ಯ ವಸ್ತುವೊಂದನ್ನು ಖರೀದಿಸಬಹುದು.
ಕರ್ಕ ರಾಶಿ
ಶನಿ ಗ್ರಹವು ಕರ್ಕ ರಾಶಿಯ 9ನೇ ಮನೆಯಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ರಾಶಿ ಜನರು ಯಾವುದೇ ಕೆಲಸದಲ್ಲಾಗಲಿ ಹಾಗೆ ಯಾವುದೇ ಪ್ರಯತ್ನದಲ್ಲಾಗಲಿ ವಿಫಲವಾಗುವುದು ಕಡಿಮೆಯಾಗಲಿದೆ. ನಿಮ್ಮ ಯಶಸ್ಸು ಹೆಚ್ಚಾಗುತ್ತದೆ. ಆದಾಯದ ಪ್ರಮಾಣದಲ್ಲಿ ಏರಿಕೆಯಾಗುವುದು ನೀವೇ ನೋಡಲಿದ್ದೀರಿ. ನಿಮ್ಮ ವ್ಯಾಪಾರಗಳು, ಸಾಲಗಳ ವಿಚಾರದಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ನಿಮ್ಮ ಬಹಕಾಲದ ಚಿಂತೆ ದೂರಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಉತ್ತಮವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











