Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2026ರಲ್ಲಿ ಶನಿ ಉದಯ; ಮಹಾಧನ ರಾಜಯೋಗದಿಂದ ಯಾರಿಗೆಲ್ಲಾ ಜಾಕ್‌ಪಾಟ್, ಯಾರಿಗೆ ಅದೃಷ್ಟಕರ!?
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳನ್ನು ಪ್ರಮುಖ ಎಂದು ಹೇಳಲಾಗಿದೆ. ಹಾಗೆ ಎಲ್ಲಾ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುತ್ತವೆ. ವೈದಿಕ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳು ನಿರ್ಧಿಷ್ಟ ಸಮಯದಲ್ಲಿ ಸ್ಥಾನ ಬದಲಾಯಿಸುವುದು ನೋಡಬಹುದು. ಇನ್ನು ಶನಿಯು ಸಹ ಆಗಾಗ ತನ್ನ ಸ್ಥಾನ ಬದಲಾಯಿಸುವುದು ಹಾಗೆ ಶನಿಯಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ.
ಶನಿ ನಿಧಾನವಾಗಿ ಚಲಿಸುವ ಕಾರಣ ಒಂದೇ ರಾಶಿಯಲ್ಲಿ ಆತ ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಇದರಿಂದ ಹಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತೆ. ಹಾಗೆ ಒಂದೇ ರಾಶಿಯಲ್ಲಿ ಎಲ್ಲಾ ಗ್ರಹಗಳ ಜೊತೆಗೂ ಸಂಯೋಗವಾಗುವುದು ನೋಡಬಹುದು. ಜ್ಯೋತಿಷ್ಯದಲ್ಲಿ ಶನಿದೇವನನ್ನು ಕರ್ಮವನ್ನು ನೀಡುವವನು ಮತ್ತು ನ್ಯಾಯಾಧೀಶನೆಂದು ಪರಿಗಣಿಸಲಾಗುತ್ತದೆ.

ಶನಿ ಒಂದೇ ರಾಶಿಯಲ್ಲಿ ಅಸ್ತಮ ಸ್ಥಿತಿ ಹಾಗೂ ಉದಯ ಸ್ಥಿತಿಯಲ್ಲಿ ಸಾಗುವುದು ಕೂಡ ನೋಡಬಹುದು. ಇನ್ನು 2026ರಲ್ಲಿ ಶನಿಯು ಮೀನ ರಾಶಿಯಲ್ಲಿ ಉದಯಿಸುತ್ತಾನೆ. ಇದು ಮಹಾಧನ ಯೋಗವನ್ನು ರೂಪಿಸಲು ಕಾರಣವಾಗುತ್ತದೆ. ಇದರಿಂದ ಹಲವರಿಗೆ ಅದೃಷ್ಟಕರ ಹಾಗೆ ಆರ್ಥಿಕ ಲಾಭ ನೋಡಬಹುದು. ಹಾಗಾದ್ರೆ ಶನಿ ಉದಯದಿಂದ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕ? ಯಾರಿಗೆ ಅದೃಷ್ಟಕರ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತುಲಾ ರಾಶಿ
ಮಹಾಧನ ಯೋಗದ ರಚನೆಯು ತುಲಾ ರಾಶಿಯವರಿಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಶನಿಯು ನಿಮ್ಮ ರಾಶಿಯ ಆರನೇ ಮನೆಯಲ್ಲಿ ಸಾಗುತ್ತಿದ್ದಾನೆ. ಪರಿಣಾಮವಾಗಿ ನ್ಯಾಯಾಲಯದ ಪ್ರಕರಣ ಹೊಂದಿರುವವರು ಗೆಲ್ಲಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ವೈವಾಹಿಕ ಜೀವನವು ಸ್ಥಿರವಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳಕ್ಕೆ ಅವಕಾಶವಿರುತ್ತದೆ. ಕುಟುಂಬದಲ್ಲಿದ್ದ ದೊಡ್ಡ ಹಣಕಾಸಿನ ವಿಚಾರಗಳು ಅಥವಾ ಸಮಸ್ಯೆಗಳು ನಿವಾರಣೆಯಾಗಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡುವುದು ನೆಮ್ಮದಿಯ ದಿನಗಳ ತರಲು ಕಾರಣವಾಗಲಿದೆ. ದಾಂಪತ್ಯ ಸಂಬಂಧವಾಗಿ ಸಂತೋಷದ ದಿನಗಳು ಬರಲಿವೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಧನ ರಾಜಯೋಗವು ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಶನಿಯು ನಿಮ್ಮ ಜಾತಕದಲ್ಲಿ ಅದೃಷ್ಟದ ಮನೆಯಲ್ಲಿ ಸಾಗುತ್ತಾನೆ. ಪರಿಣಾಮವಾಗಿ ನಿಮ್ಮ ಹಳೆಯ ಸಾಲಗಳು ಮರುಪಾವತಿ ನೋಡಬಹುದು. ನೀವು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಅನುಭವಿಸುವಿರಿ. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಬಹುದು. ಅವಿವಾಹಿತರಿಗೆ ವಿವಾಹ ಸಂಬಂಧಿತ ವಿಚಾರವಾಗಿ ದೊಡ್ಡ ಲಾಭವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುವುದು ನೋಡಬಹುದು. ಮಕ್ಕಳ ವಿಚಾರದಲ್ಲಿದ್ದ ಚಿಂತೆಯನ್ನು ನಿವಾರಿಸಿಕೊಳ್ಳಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಧನ ರಾಜಯೋಗವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಶನಿಯು ನಿಮ್ಮ ರಾಶಿಯ ಮೂರನೇ ಸ್ಥಾನದಲ್ಲಿ ಹಿಮ್ಮುಖವಾಗುತ್ತಾನೆ. ನಿಮ್ಮ ಧೈರ್ಯ, ಆತ್ಮವಿಶ್ವಾಸದ ಕೆಲಸಗಳು ಹೆಚ್ಚಾಗುತ್ತವೆ. ಹೊಸ ಆಸ್ತಿಗಳ ಖರೀದಿ ಅಥವಾ ಮಾರಾಟ ಮಾಡುವ ಸಲುವಾಗಿ ನಿಮಗೆ ಲಾಭದಾಯಕ ದಿನಗಳ ನೋಡಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ಇದು ನಿಮ್ಮ ಆಸೆಗಳನ್ನು ಈಡೇರಿಸುವ ದಿನವಾಗಿರುತ್ತದೆ. ಪ್ರವಾಸಗಳಲ್ಲಿ ಶುಭವಿದೆ. ನಿಮ್ಮ ವಾಹನ ಖರೀದಿ ಸಂಬಂಧಿತ ವಿಚಾರವಾಗಿ ಇಷ್ಟು ದಿನದಿಂದ ಇದ್ದಂತಹ ಅಡ್ಡಿಗಳು ನಿವಾರಣೆಯಾಗಲಿದೆ. ಆಪ್ತರೊಬ್ಬರಿಂದ ಹಣಕಾಸಿನ ಸಹಾಯ ಉಂಟಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications
