Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೀನ ರಾಶಿಯಲ್ಲಿ 138 ದಿನಗಳ ಕಾಲ ಶನಿ ಹಿಮ್ಮುಖ ಚಲನೆ: ಯಾರಿಗಿದು ಶುಭದಾಯಕ ಗೊತ್ತಾ
ವೈದಿಕ ಶಾಸ್ತ್ರದಲ್ಲಿ ಶನಿ ದೇವರನ್ನು ಅಥವಾ ಶನಿ ಗ್ರಹವನ್ನು ಬಹಳ ಪ್ರಮುಖ ಸ್ಥಾನ ನೀಡಲಾಗುತ್ತದೆ. ಶನಿ ಗ್ರಹದ ಚಲನೆಯು ಪ್ರತಿಯೊಬ್ಬರಿಗೂ ಹಾಗೆ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಶನಿ ಬಹಳ ನಿಧಾನವಾಗಿ ಚಲಿಸುವ ಗ್ರಹ ಆಗಿರುವುದರಿಂದ ಒಂದೂವರೆ ವರ್ಷಕ್ಕೊಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ. ಶನಿ ತನ್ನ ರಾಶಿ ಬದಲಾಯಿಸಿದಾಗಲೆಲ್ಲ ಬಹಳಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದೇವೆ.
ಶನಿ ಇತ್ತೀಚಿಗೆ ಮೀನ ರಾಶಿಗೆ ಚಲಿಸಿರುವುದು ನೋಡಬಹುದು. ಗುರುವಿನ ಆಡಳಿತವಿರುವ ಮೀನ ರಾಶಿಯಲ್ಲಿ ಶನಿಯು ಒಂದೂವರೆ ವದರ್ಷಗಳ ಕಾಲ ಚಲಿಸಲಿದೆ. ಹಾಗೆ ಮುಂದಿನ ಜುಲೈನಲ್ಲಿ ಶನಿ ಗ್ರಹದ ಹಿಮ್ಮುಖ ಚಲನೆ ಆರಂಭವಾಗಲಿದೆ. ಜುಲೈ 13ರಿಂದ ಶನಿ ಹಿಮ್ಮುಖ ಚಲನೆಗೆ ಒಳಗಾಗುತ್ತಾನೆ. 138 ದಿನಗಳ ಕಾಲ ಹಿಮ್ಮುಖ ಚಲನೆಯಲ್ಲಿ ಶನಿ ಚಲಿಸುವುದು ಹಲವು ರಾಶಿಗಳಿಗೆ ಲಾಭದಾಯಕ ಹಾಗೆ ಹಲವು ರಾಶಿಗಳಿಗೆ ಅನಾನುಕೂಲತೆ ತರಬಹುದು.

ಹೀಗಾಗಿ ನಾವಿಂದು ಮೇಷ ರಾಶಿಯಿಂದ ಕುಂಭ ರಾಶಿಯವರೆಗೆ ಯಾರಿಗೆಲ್ಲಾ ಶನಿಯ ಈ ಹಿಮ್ಮುಖ ಚಲನೆಯ ಅದೃಷ್ಟ ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕರ್ಕ ರಾಶಿಯ 9ನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದು ಕರ್ಕ ರಾಶಿಯವರ ಆರ್ಥಿಕ ಬೆಂಬಲವನ್ನು ಹಚ್ಚಿಸಬಹುದು. ಹಾಗೆ ನಿಮಗೆ ಆದಾಯದಲ್ಲಿ ಎದುರಾಗಿದ್ದ ತೊಡಕುಗಳ ನಿವಾರಣೆ ಸಹ ಈ ಸಮಯದಲ್ಲಿ ಸಾಧ್ಯವಿದೆ. ಈ ಸಮಯದಲ್ಲಿ ಹೆಚ್ಚಿನ ಖರ್ಚುಗಳ ಮಾಡುತ್ತೀರಿ. ಅದು ಕೂಡ ಶುಭ ಕಾರ್ಯಗಳ ಕುರಿತಾದ ಖರ್ಚು ಹೆಚ್ಚಾಗಬಹುದು. ಉದ್ಯಮಿಗಳು ಅನಿರೀಕ್ಷಿತ ಲಾಭ ನೋಡಬಹುದು. ಉತ್ತಮ ಪ್ರಗತಿ ನೋಡಲು ನೀವು ಶ್ರಮ ಹೆಚ್ಚು ಹಾಕಬೇಕಿದೆ. ವ್ಯಾಪಾರಿಗಳಲ್ಲಿ ಇಷ್ಟು ದಿನ ಕಾಡಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಯಾವುದೇ ಕೆಲಸ ಮಾಡುವಾಗ ಅದರಿಂದ ಬರುವ ಲಾಭದ ಕುರಿತು ಆಲೋಚಿಸಬೇಡಿ. ಆರೋಗ್ಯದಲ್ಲಿಯೂ ಸುಧಾರಣೆ ನೋಡುವಿರಿ.
ವೃಷಭ ರಾಶಿ
ವೃಷಭ ರಾಶಿಯ 11 ನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಹೀಗಾಗಿ ಈ ರಾಶಿಯವರ ಆದಾಯ ಹೆಚ್ಚಾಗುವ ಕೆಲಸಗಳು ನಡೆಯಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ಅಥವಾ ಕೆಲಸ ಬದಲಾಯಿಸಲು ಮುಂದಾಗುವುದಾದರೆ ಈ ಸಮಯದಲ್ಲಿ ದೊಡ್ಡ ಯಶಸ್ಸು ಪಡೆಯಲಿದ್ದೀರಿ. ಶನಿಯ ಅನುಗ್ರಹದಿಂದ ನಿಮಗೆ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಒಳ್ಳೆಯ ಉದ್ದೇಶದಿಂದ ಹಣ ಖರ್ಚು ಮಾಡಿದರೆ ಅದರಿಂದ ನಿಮಗೆ ಲಾಭವೂ ಆಗಲಿದೆ. ಆಸ್ತಿ ಸಂಬಂಧಿಸಿದಂತೆ ಯಾವುದಾದು ಅಡೆತಡೆಯಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಲಿದೆ.
ಧನು ರಾಶಿ
ಧನು ರಾಶಿಯ 4 ನೇ ಮನೆಯಲ್ಲಿ ಶನಿ ಗ್ರಹವು ಚಲಿಸಲಿದೆ. ಹೀಗಾಗಿ ರಾಶಿ ಜನರ ಸೌಕರ್ಯಗಳನ್ನು ಹೆಚ್ಚಿಸುತ್ತದೆ. ಹೊಸ ವಾಹನ ಖರೀದಿ ಅಥವಾ ಮನೆ ಖರೀದಿಯ ಸಂಬಂಧ ನಿಮಗೆ ಒಳಿತಾಗಲಿದೆ. ಸರ್ಕಾರಿ ನೌಕರಿಗಳಿಗೆ ಬಡ್ತಿ, ವರ್ಗಾವಣೆಯಂತಹ ವಿಚಾರದಲ್ಲಿ ಲಾಭ ನೋಡಬಹುದು. ಮನೆಯಲ್ಲಿ ಹಳೆಯ ವಿಚಾರಗಳು ಅಥವಾ ಪಿತ್ರಾರ್ಜಿತ ವಿಚಾರಗಳ ಕುರಿತಾದ ಚರ್ಚೆ ದೊಡ್ಡದಾಗಬಹುದು. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಆರ್ಥಿಕ ಸಮಸ್ಯೆಯೊಂದು ಬಗೆಹರಿಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡದ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
