ಶನಿ ಕಣ್ಣು ತೆರೆಯುತ್ತಿದ್ದಾನೆ! ಧನರಾಜ ಯೋಗ ಶುರು.. ಈ 3 ರಾಶಿಯವರಿಗೆ ಅಪಾರ ಸಂಪತ್ತು

ಶನಿ ಕಣ್ಣು ತೆರೆಯುತ್ತಿದ್ದಾನೆ! ಶನಿ ದೃಷ್ಟಿ ಬಿದ್ದ ತಕ್ಷಣ, ಈ 3 ರಾಶಿಯವರು ಕೋಟ್ಯಾಧಿಪತಿಗಳಾಗ್ತಾರೆ. ಧನರಾಜ ಯೋಗದಿಂದ ಇವರಿಗೆ ರಾಶಿಯವರಿಗೆ ಬಂಪರ್ ಅದೃಷ್ಟ. ಹೌದು, ಜುಲೈ 13 ರಂದು ಶನಿಯು ತನ್ನ ಹಿಮ್ಮುಖ ಚಲನೆಯನ್ನು ಮೀನ ರಾಶಿಯಲ್ಲಿ (Saturn Retrograde in Pisces 2025) ಪ್ರಾರಂಭಿಸುತ್ತಾನೆ. ಶನಿಯ ಪ್ರತಿಯೊಂದು ಬದಲಾವಣೆಯು ನಿಮಗೆ ಒಂದೊಂದು ರೀತಿಯಲ್ಲಿ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಅನೇಕ ಬಾರಿ ಅನುಕೂಲಕರವಾಗಿದ್ದರೆ, ಕೆಲವೊಮ್ಮೆ ಪ್ರತಿಕೂಲವೂ ಆಗಬಹುದು. ಆದರೆ, ಇದು ನಿಮ್ಮ ಜೀವನದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಶನಿಯ ಹಿಮ್ಮುಖ ಚಲನೆಯ (Shani Vakri 2025) ಪರಿಣಾಮವಾಗಿ, ಶುಭ ಮತ್ತು ಅಶುಭ ಫಲಿತಾಂಶಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಶನಿಯ ಬದಲಾವಣೆಯು ಕೆಲವು ರಾಶಿಗಳಿಗೆ ಧನಲಾಭವನ್ನು ನೀಡುತ್ತದೆ. ಸಾಮಾನ್ಯವಾಗಿ ಹಿಮ್ಮುಖ ಚಲನೆಯು ದೋಷಪೂರಿತ ಫಲಿತಾಂಶಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಆದರೆ, ಶನಿಯ ಈ ಬದಲಾವಣೆಯು 12 ರಾಶಿಗಳಲ್ಲಿ 3 ರಾಶಿಗಳ ಜೀವನವನ್ನೇ ಬದಲಾಯಿಸುತ್ತದೆ. ಇದರ ಪರಿಣಾಮವಾಗಿ ಧನರಾಜ ಯೋಗ (Dhan Rajyog)ಸೃಷ್ಟಿಯಾಗುತ್ತದೆ. ಈ 3 ರಾಶಿಯವರ ಜೀವನದಲ್ಲಿ ಶನಿಯು ಅನೇಕ ಸಕಾರಾತ್ಮಕ ಅನುಭವಗಳನ್ನು ನೀಡುತ್ತಾನೆ. ಆ ರಾಶಿಗಳು ಯಾವುವು ಮತ್ತು ಅವರಿಗೆ ಕಾಯುತ್ತಿರುವ ಅದೃಷ್ಟದ ಫಲಗಳು ಯಾವುವು ಎಂದು ತಿಳಿಯೋಣ.

Shani Vakri

138 ದಿನಗಳ ಕಾಲ ಹಿಮ್ಮುಖ ಚಲನೆ

ಹಿಮ್ಮುಖವಾಗಿ ಚಲಿಸುವಾಗ ಗ್ರಹವು ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಆದರೆ, ನಿಜವಾಗಿ ಸಂಭವಿಸುವುದು ಬೇರೆಯೇ. ವಾಸ್ತವವಾಗಿ ಆ ಗ್ರಹವು ತನ್ನ ದಿಕ್ಕಿನಲ್ಲಿಯೇ ಚಲಿಸುತ್ತದೆ. ಆದರೆ, ಹಿಮ್ಮುಖವಾಗಿ ಚಲಿಸುವ ಆ ಗ್ರಹವು ಭೂಮಿಗೆ ಹತ್ತಿರವಾಗುತ್ತದೆ. ಇದರಿಂದಾಗಿ ಅದು ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ಭಾಸವಾಗುತ್ತದೆ. ಶನಿಯು ವರ್ಷದಲ್ಲಿ ಸುಮಾರು 138 ದಿನಗಳ ಕಾಲ ಹಿಮ್ಮುಖವಾಗಿ ಚಲಿಸುತ್ತಾನೆ. ಈ ಬದಲಾವಣೆಯಿಂದ ಧನರಾಜ ಯೋಗ ಪಡೆಯುವ ರಾಶಿಗಳು ಯಾವುವು ಗೊತ್ತಾ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಮಾಹಿತಿ.

ಮೀನ ರಾಶಿ: ವ್ಯವಹಾರದಲ್ಲಿ ಆರ್ಥಿಕ ಲಾಭ

ಪ್ರಸ್ತುತ ಮೀನ ರಾಶಿಯಲ್ಲಿರುವ ಶನಿಯು ಜುಲೈ 13 ರಂದು ತನ್ನ ಹಿಮ್ಮುಖ ಚಲನೆಯನ್ನು ಪ್ರಾರಂಭಿಸುತ್ತಾನೆ. ಇದರ ಪರಿಣಾಮವಾಗಿ, ಈ ರಾಶಿಯಲ್ಲಿ ಶನಿಯು ತನ್ನ ಏಳನೇ ಮನೆಯ ಎರಡನೇ ಹಂತವನ್ನು ಪ್ರವೇಶಿಸುತ್ತಾನೆ. ಆದರೆ, ಈ ಹಿಮ್ಮುಖ ಚಲನೆಯು ಏಳನೇ ಮನೆಯ ದೋಷವನ್ನು ಹೋಗಲಾಡಿಸುತ್ತದೆ. ಇದರಿಂದಾಗಿ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿಯೂ ಸಕಾರಾತ್ಮಕ ಅನುಭವಗಳು ದ್ವಿಗುಣವಾಗುತ್ತವೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ನಿಮಗಿರುತ್ತದೆ. ಈ ಸಮಯದಲ್ಲಿ ಶನಿಯು ನಾಲ್ಕನೇ ಮನೆಯಲ್ಲಿರುತ್ತಾನೆ. ವೃತ್ತಿಜೀವನದಲ್ಲಿ ಉತ್ತಮ ಉದ್ಯೋಗ ದೊರೆಯುತ್ತದೆ ಮತ್ತು ವ್ಯವಹಾರದಲ್ಲಿ ಸಾಕಷ್ಟು ಆರ್ಥಿಕ ಲಾಭಗಳು ಲಭಿಸುತ್ತವೆ. ಇದರೊಂದಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ.

ಮಕರ ರಾಶಿ: ವಿದೇಶ ಪ್ರವಾಸಕ್ಕೆ ತಯಾರಿ

ಶನಿಯ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಸಹ ಅನೇಕ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯ ಮೂರನೇ ಮನೆಯಲ್ಲಿ ಶನಿಯು ಚಲಿಸುತ್ತಾನೆ. ಇದು ಈ ರಾಶಿಯವರಿಗೆ ಹಲವು ರೀತಿಯ ಸಕಾರಾತ್ಮಕ ಅನುಭವಗಳನ್ನು ನೀಡುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ಅತ್ಯುತ್ತಮ ಸಮಯ. ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿಯೂ ಕುಟುಂಬದ ಬೆಂಬಲವಿರುತ್ತದೆ. ವಿದೇಶ ಪ್ರವಾಸಕ್ಕೆ ತಯಾರಿ ನಡೆಸುತ್ತಿರುವವರಿಗೆ ಇದು ಅನುಕೂಲಕರ ಸಮಯ. ವ್ಯಾಪಾರ ಮಾಡುವವರಿಗೆ ಇದು ಅತ್ಯುತ್ತಮ ಸಮಯ. ಇವರಿಗೆ ಅನಿರೀಕ್ಷಿತವಾಗಿ ಧನಲಾಭವಾಗುತ್ತದೆ.

ವೃಶ್ಚಿಕ ರಾಶಿ: ಉದ್ಯೋಗ ಬದಲಾಯಿಸುವುದು ಲಾಭ

ವೃಶ್ಚಿಕ ರಾಶಿಯವರಲ್ಲಿ ಶನಿಯ ಹಿಮ್ಮುಖ ಚಲನೆಯು ಧನರಾಜ ಯೋಗವನ್ನು ಸೃಷ್ಟಿಸುತ್ತದೆ. ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ. ಆರೋಗ್ಯದ ವಿಷಯದಲ್ಲಿಯೂ ಇದು ಉತ್ತಮ ಸಮಯ. ಆರ್ಥಿಕ ಲಾಭಗಳು ದ್ವಿಗುಣವಾಗುತ್ತವೆ. ವಿದೇಶದಲ್ಲಿ ಓದಲು ಬಯಸುವವರಿಗೆ ಇದು ಅತ್ಯುತ್ತಮ ಸಮಯ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಇದು ಲಾಭದಾಯಕವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ.

ಹೀಗೆ ಮೂರು ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯಿಂದಾಗಿ ಧನಯೋಗ ಪ್ರಾಪ್ತಿಯಾಗುತ್ತದೆ. ಇವರ ಜೀವನದಲ್ಲಿ ಸಂತೋಷ, ಸಮೃದ್ಧಿ ಉಂಟಾಗುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Saturn Retrograde in Pisces 2025: Dhan Raj Yoga to Bless These 3 Zodiac Signs

Saturn Retrograde in Pisces 2025: Dhan Raj Yoga to Bless These 3 Zodiac Signs
Story first published: Thursday, July 10, 2025, 14:00 [IST]
X
Desktop Bottom Promotion