Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರಗ್ರಹಣದ ಸಮಯದಲ್ಲಿ 50 ವರ್ಷದ ಬಳಿಕ ಶನಿ ಹಿಮ್ಮುಖ ಚಲನೆ: 3 ರಾಶಿಯವರ ಸಾಲ ಸಮಸ್ಯೆ ನಿವಾರಣೆ!
ಈ ವರ್ಷದ 2ನೇ ಚಂದ್ರಗ್ರಹಣವು ಇದೇ ಸೆಪ್ಟೆಂಬರ್ 07ರಂದು ಸಂಭವಿಸುತ್ತಿದೆ. ಗ್ರಹಣವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಗ್ರಹಗಳ ಚಲನೆಯ ಮೇಲೆ ಗ್ರಹಣದ ಪರಿಣಾಮವು ವ್ಯತಿರಿಕ್ತವಾಗಿ ಬೀಳಲಿದೆ ಎಂದು ಹೇಳಲಾಗುತ್ತೆ. ಆದ್ರೆ ಈ ಗ್ರಹಙಣ ಸಮಯದಲ್ಲಿ ಚಂದ್ರ ಕುಂಭ ರಾಶಿಯಲ್ಲಿರುತ್ತಾನೆ. ಮೀನ ರಾಶಿಯಲ್ಲಿ ಶನಿ ಈಗ ಹಿಮ್ಮುಖ ಚಲನೆಯಲ್ಲಿದ್ದಾನೆ.
ಈ ಚಂದ್ರಗ್ರಹಣವು ಶನಿಯ ರಾಶಿ ಮೀನವನ್ನು ಪ್ರವೇಶಿಸಿದಾಗ ಶನಿ ಹಿಮ್ಮುಖ ಚಲನೆಯಲ್ಲಿರುವುದು ಬಹಳ ಅಪರೂಪ. ಅದ್ರಲ್ಲೂ 50 ವರ್ಷದ ಬಳಿಕ ಈಗ ಗ್ರಹಣವು ಹಿಮ್ಮುಖ ಚಲನೆಯಲ್ಲಿ ಉಂಟಾಗುತ್ತಿದೆ. ಈ ಘಟನೆಯ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಬೀರುತ್ತದೆ. ಹಾಗೆ ಹಲವು ರಾಶಿಯವರಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳ ನೋಡಬಹುದು.

ಹಾಗಾದ್ರೆ ಈ ಚಂದ್ರಗ್ರಹಣವು ಯಾವೆಲ್ಲಾ ರಾಶಿಯವರ ಮೇಲೆ ಪರಿಣಾಮ ಉಂಟು ಮಾಡಲಿದೆ. ಯಾರಿಗೆ ಈ ಚಂದ್ರಗ್ರಹಣದಿಂದ ಯಾರಿಗೆ ಲಾಭಕರ ಅನ್ನೋದನ್ನು ನೋಡೋಣ. ಯಾವ ರಾಶಿಯವರಿಗೆ ಶುಭವಾಗುತ್ತದೆ. ಯಾರಿಗೆ ಅಚ್ಚರಿಯ ದಿನಗಳಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಚಂದ್ರಗ್ರಹಣದ ಸಮಯದಲ್ಲಿ ಶನಿ ಹಿಮ್ಮುಖವಾಗಿರುವುದರಿಂದ, ಮಿಥುನ ರಾಶಿಯ ಜನರಲ್ಲಿ ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಅದ್ರಲ್ಲೂ ನಿಮ್ಮ ಬಹಳ ಸಮಯದಿಂದಲೂ ಅಡಚಣೆಯಲ್ಲಿದ್ದ ಸಮಸ್ಯೆಯೊಂದು ಈಡೇರಲಿದೆ ಅಥವಾ ಬಗೆಹರಿಯಲಿದೆ. ಸೃಜನಶೀಲತೆ ಮತ್ತು ನಾಯಕತ್ವ ಕೌಶಲ್ಯಗಳು ಸುಧಾರಿಸುತ್ತವೆ. ಕೆಲಸದಲ್ಲಿ ಕಾರ್ಯಕ್ಷಮತೆಯ ಹೆಚ್ಚಿಸಿಕೊಳ್ಳುವಿರಿ. ನೀವು ಬಹಳ ಕಾಲದಿಂದ ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಉತ್ತಮ ಹೊಸ ಅವಕಾಶಗಳ ಪಡೆಯುತ್ತೀರಿ. ಹಲವು ರೀತಿಯಲ್ಲಿ ನಿಮಗೆ ಹಣಕಾಸು ಹರಿದು ಬರಬಹುದು. ಅದ್ರಲ್ಲೂ ಸಾಲದ ಸಮಸ್ಯೆಯಿಂದ ನೀವು ಮುಕ್ತರಾಗಬಹುದು. ಉದ್ಯಮಿಗಲ್ಲಿ ಇಷ್ಟು ಸಮಯದಿಂದ ಕಾಡಿದ್ದ ಆರ್ಥಿಕ ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ
ಚಂದ್ರಗ್ರಹಣದ ಸಮಯದಲ್ಲಿ ಶನಿ ವಕ್ರವಾಗಿ ಚಲಿಸುವುದರಿಂದ ವೃಶ್ಚಿಕ ರಾಶಿಯವರಿಗೆ ಅನುಕೂಲವಾಗುತ್ತಿದೆ. ಮಕ್ಕಳ ಕುರಿತಾದ ಬಹಳ ವರ್ಷದ ಸಮಸ್ಯೆಯೊಂದು ಪರಿಹಾರವಾಗಲಿದೆ. ಜಾತಕದಲ್ಲಿನ ದೋಷಗಳ ನಿವಾರಣೆಯ ಸಾಧ್ಯತೆ ಇದೆ. ನಿಮ್ಮ ವ್ಯವಹಾರ ಸಂಬಂಧ ನಿಮಗೆ ಉತ್ತಮ ದಿನಗಳು ಬರುತ್ತವೆ. ಪಾಲುದಾರಿಕೆ ವ್ಯವಹಾರ, ಹೋಟೆಲ್ ಉದ್ಯಮಿಗಳು, ಸ್ವಂತ ಉದ್ಯಮಿಗಳು, ಪಿತ್ರಾರ್ಜಿತವಾಗಿ ಬಂದ ಕೆಲಸದಲ್ಲಿ ನಿರತರಾದ ಮಂದಿಗೆ ಈ ಸಮಯ ಉತ್ತಮ ಲಾಭ ತರಲಿದೆ. ದೀರ್ಘಕಾಲದ ಸಾಲದ ಸಮಸ್ಯೆಯಿಂದ ಮುಕ್ತರಾಗುತ್ತೀರಿ, ನೀವು ಬಯಸಿದಾಗ ನಿಮ್ಮ ಕೈಗೆ ಹಣ ಸೇರಬಹುದು. ನಿಮ್ಮ ಎಲ್ಲಾ ದುಂದು ವೆಚ್ಚಗಳು ಕಡಿಮೆಯಾಗುವ ಸಮಯವಿದು.
ಮೀನ ರಾಶಿ
ಚಂದ್ರಗ್ರಹಣದ ಸಮಯದಲ್ಲಿ ಶನಿ ಚಲನೆಯಿಂದಾಗಿ ಮೀನ ರಾಶಿಯವರು ಸಮಾಜದಲ್ಲಿ ಉತ್ತಮ ಹೆಸರು ಗಳಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಅವಿವಾಹಿತರಿಗೆ ತಮ್ಮ ಸಂಗಾತಿಯನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ದೀರ್ಘ ಸಮಯದ ಅನಾರೋಗ್ಯ ಸಮಸ್ಯೆಯಿಂದ ಹೊರಬರಬಹುದು. ನಿಮ್ಮ ಹಣಕಾಸಿಗೆ ಸಂಬಂಧಿಸಿದಂತೆ ಬೇರೆಯವರಿಂದ ಉತ್ತಮ ಸಲಹೆ ಪಡೆಯುತ್ತೀರಿ. ಹಾಗೆ ನಿಮ್ಮಲ್ಲಿ ಆದಾಯ ಮೂಲ ಹೆಚ್ಚಿಸಿಕೊಳ್ಳುವ ಅವಕಾಶ ಪಡೆಯುತ್ತಿರಿ. ಕೌಟುಂಬಿಕ ಕಲಹ ಸಂಬಂಧವಾಗಿ ನಿಮ್ಮಲ್ಲಿ ಸಮಸ್ಯೆಗಳು ಕಡಿಮೆಯಾಗಬಹುದು. ಬಹಳ ಜನರಿಗೆ ಈ ಸಮಯವು ಅನಿರೀಕ್ಷಿತ ಪ್ರಯಾಣ ಹಾಗೂ ಅದರಿಂದ ಲಾಭ ಬರಬಹುದು. ವ್ಯಾಪಾರಿಗಳು ಅಂದುಕೊಂಡಂತೆಯೇ ತಮ್ಮ ಪ್ರಗತಿ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications