Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2025ರಲ್ಲಿ ಶನಿ-ರಾಹು ಸಂಯೋಗ: 5 ರಾಶಿಯವರಲ್ಲಿ ಸಂಕಷ್ಟಗಳ ಸರಮಾಲೆ..!!
2025ನೇ ವರ್ಷದಲ್ಲಿ ಹಲವು ರೀತಿಯ ಯೋಗಗಳು ರೂಪುಗೊಳ್ಳುವುದು ನಾವು ನೋಡಬಹುದು. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಟ್ಟ ಅಥವಾ ಸಂಕಷ್ಟಕರ ಗ್ರಹಗಳೆಂದು ಹೇಳಲಾಗಿರುವ ರಾಹು ಹಾಗೂ ಶನಿಯು ಮೀನ ರಾಶಿಯಲ್ಲಿ ಸಂಯೋಗವಾಗುತ್ತಿವೆ. ಇದು 30 ವರ್ಷದ ಬಳಿಕ ಉಂಟಾಗುತ್ತಿರುವುದು 2025ರಲ್ಲಿ ಹಲವರಿಗೆ ಲಾಭ ನಷ್ಟದ ಲೆಕ್ಕಾಚಾರ ಆರಂಭಗೊಂಡಿದೆ.
ಈ ವರ್ಷ ಅನೇಕ ಗ್ರಹಗಳು ತಮ್ಮ ಸಂಚಾರವನ್ನು ಬದಲಾವಣೆ ಮಾಡುತ್ತಿವೆ. ಶನಿ, ರಾಹು, ಗುರು ಸೇರಿ ಪ್ರಮುಖ ಗ್ರಹಗಳು ತಮ್ಮ ರಾಶಿ ಬದಲಾಯಿಸುತ್ತಿವೆ. ಇದು ಹಲವರಿಗೆ ಲಾಭದಾಯಕವಾಗಿದ್ದರೆ ಮತ್ತೆ ಕೆಲವರಿಗೆ ಒಂದಿಷ್ಟು ಸಂಕಷ್ಟಗಳ ತರಲಿದೆ. ಈ ಪ್ರಮುಖ ಗ್ರಹಗಳ ಸ್ಥಾನಗಳ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.

ಶನಿಯು ಮಾರ್ಚ್ 2025 ರಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸುತ್ತಿದೆ. ಹಾಗೆ ರಾಹು ಕೂಡ ಮೀನ ರಾಶಿಗೆ ಸಂಚರಿಸುವುದರಿಂದ ಅಪರೂಪದ ಪ್ರಕ್ರಿಯೆ ನಡೆಯುತ್ತಿದೆ. ಇದು ಹಲವರಲ್ಲಿ ಲಾಭಕ್ಕೆ ಕಾರಣವಾಗುತ್ತಿದೆ, ಹಾಗೆ ಮತ್ತೆ ಕೆಲವರಲ್ಲಿ ಇದು ಸಂಕಷ್ಟಗಳ ಸರಮಾಲೆಗೆ ಕಾರಣವಾಗುತ್ತಿದೆ. ನಾವಿಂದು ಶನಿ ಹಾಗೂ ರಾಹುವಿನ ಸಂಯೋಗವು ಯಾವೆಲ್ಲಾ ರಾಶಿಯವರಿಗೆ ಸಂಕಟ ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕರ್ಕ ರಾಶಿ
ಶನಿ ಹಾಗೂ ರಾಹು ಮೀನರಾಶಿಯಲ್ಲಿ ಸಂಯೋಗ ಆಗುತ್ತಿರುವುದು ಕರ್ಕ ರಾಶಿಯವರಲ್ಲಿ ಒಂದಿಷ್ಟು ಸಮಸ್ಯೆ ತರಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವುದು. ನಿಮ್ಮ ಯೋಚನೆಗೆ ತಕ್ಕ ಕೆಲಸಗಳು ನಡೆಯದೆ ಇರಬಹುದು. ಒಂದಿಷ್ಟು ಆರ್ಥಿಕ ಸಮಸ್ಯೆಗಳು, ಕೆಲಸದ ಸ್ಥಳದಲ್ಲಿ ಅಡೆತಡೆಗಳ ಎದುರಿಸಬೇಕಾಗಬಹುದು. ಪಂಚೇಂದ್ರಿಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಎದುರಿಸಬೇಕಾಗಬಹುದು. ಕುಟುಂಬಸ್ಥರಿಂದ ನಿಮ್ಮ ಕನಸುಗಳಿಗೆ ಬೆಂಬಲ ಸಿಗದೆ ಇರಬಹುದು, ಹೊಸ ವ್ಯವಹಾರದಲ್ಲಿ ನಷ್ಟ ಸಂಭವಿಸುವ ಸಂಭವವಿದೆ.
ಕನ್ಯಾ ರಾಶಿ
ರಾಹು ಹಾಗೂ ಶನಿಯು ಮೀನ ರಾಶಿಯಲ್ಲಿ ಸಂಚರಿಸುವುದು ಕನ್ಯಾ ರಾಶಿಯವರಲ್ಲಿ ಹಲವು ರೀತಿ ಸಮಸ್ಯೆಗೆ ಕಾರಣವಾಗುತ್ತಿದೆ. ನಿಮ್ಮಲ್ಲಿ ಆರ್ಥಿಕ ನಷ್ಟ ಹಾಗೂ ಒಳ್ಳೆಯ ಕೆಲಸಕ್ಕೆ ಹಣಕಾಸು ಕೊರತೆ ಎದುರಿಸಬೇಕಾಗಬಹುದು. ಹೊಸ ವ್ಯವಹಾರಗಳು ನಿಮ್ಮ ಕೈ ಹಿಡಿಯದೆ ಇರಬಹುದು. ಬಹು ವರ್ಷದ ಅನಾರೋಗ್ಯ ಸಮಸ್ಯೆಗಳು ಮತ್ತಷ್ಟು ಕಾಡಬಹುದು.
ತುಲಾ ರಾಶಿ
ರಾಹು ಹಾಗೂ ಶನಿಯು ತುಲಾ ರಾಶಿಯವರಲ್ಲಿ ಉತ್ತಮ ಫಲ ನೀಡದೆ ಇರಬಹುದು, ಒಂದಿಷ್ಟು ಮಿಶ್ರ ಫಲವಿದ್ದರೂ ಕೂಡ ಅನೇಕ ಅಡ್ಡಿ ಆತಂಕ ನೀವು ಎದುರಿಸಬೇಕಾಗಬಹುದು. ಕೌಟುಂಬಿಕ ಕಲಹಗಳು ಈ ಸಮಯದಲ್ಲಿ ಹೆಚ್ಚಾಗಬಹುದು. ಒತ್ತಡ ಹಾಗೂ ಒಂಟಿತನ ಕಾಡಬಹುದು. ಅನಾರೋಗ್ಯ ಸಮಸ್ಯೆ ಅಧಿಕವಾಗುವ ಸಂಭವವಿದೆ. ಸಂಬಂಧಗಳಲ್ಲಿ ಅಪಸ್ವರ, ಅವಿಶ್ವಾಸ, ಕಲಹ ಹೆಚ್ಚಾಗುವ ಸಾಧ್ಯತೆ. ವೃತ್ತಿ ಜೀವನದ ಪ್ರಗತಿಯಲ್ಲಿ ಇಳಿಮುಖ ಹಾಗೆ ಒತ್ತಡ, ಕೆಲಸ ಹೆಚ್ಚಾಗಬಹುದು.
ಮಕರ ರಾಶಿ
ಮಕರ ರಾಶಿಯವರಲ್ಲಿ ರಾಹುವಿನ ಸಂಚಾರ ಕೆಡುಕಿಗೆ ಕಾರಣವಾಗುತ್ತದೆ. ಅದರಲ್ಲೂ ಶನಿಯೊಂದಿಗಿನ ಸಂಯೋಗವು ಹಲವು ರೀತಿ ಸಮಸ್ಯೆಗೆ ಕಾರಣವಾಗಬಹುದು. ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು. ಸಾಲ ಹೆಚ್ಚಳ, ಹಣಕಾಸು ಕೊರತೆ, ಅಗತ್ಯ ಕೆಲಸದಲ್ಲಿ ಅಡೆತಡೆಯಂತಹ ಸಮಸ್ಯೆ ಎದುರಾಗಬಹುದು. ಅವಿವಾಹಿತರಲ್ಲಿ ಶುಭ ಕಾರ್ಯದ ಸೂಚನೆ ಮುಂದೂಡಬೇಕಾಗಬಹುದು. ಒತ್ತಡ ಹಾಗೆ ಸಣ್ಣಪುಟ್ಟ ಅನಾರೋಗ್ಯಗಳು ಕಾಡಬಹುದು.
ಕುಂಭ ರಾಶಿ
ಮೀನ ರಾಶಿಯಲ್ಲಿ ಶನಿ ರಾಹು ಸಂಯೋಗವು ಕುಂಭ ರಾಶಿಯವರಲ್ಲಿ ಮಿಶ್ರ ಪ್ರತಿಫಲಕ್ಕೆ ಕಾರಣವಾಗುತ್ತಿದೆ, ನಿಮ್ಮಲ್ಲಿ ಧನಲಾಭವಿದ್ದರೂ ಆ ಹಣ ಮತ್ತೆ ಕೆಲಸ ಕಾರ್ಯಗಳಿಗೆ ವಿನಿಯೋಗಿಸಬೇಕಾಗಿ ಬರಲಿದೆ. ದೂರ ಪ್ರಯಾಣಗಳಿಗಾಗಿ ನೀವು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ನಿಮ್ಮ ಹಲವು ದಿನಗಳ ಕನಸನ್ನು ಈಡೇರಿಸುವ ನಿಮ್ಮ ಕಾರ್ಯವನ್ನು ಮತ್ತೆ ಮುಂದೂಡಬೇಕಾಗಬಹುದು. ಅನಗತ್ಯ ಖರ್ಚು ಹೆಚ್ಚಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











