Latest Updates
-
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ
ಜುಲೈನಲ್ಲಿ ಶನಿ-ಗುರು ಅನುಗ್ರಹ: ಈ ರಾಶಿಯವರು ರಾಜನಂತೆ ಬಾಳಬಹುದು!
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಹಾಗೂ ಅವುಗಳ ಸ್ಥಾನ ಪಲ್ಲಟವನ್ನು ಮುಖ್ಯ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಅದ್ರಲ್ಲೂ ಕೆಲವೊಂದು ಗ್ರಹಗಳ ಚಲನೆಯು ವಿವಿಧ ರಾಶಿಗಳ ಮೇಲೆ ಹಲವು ರೀತಿಯಾಗಿ ಪ್ರಭಾವ ಬೀರುವುದು ನಾವು ನೋಡಬಹುದು. 12 ರಾಶಿಗಳು ಜನರ ಜೀವನದ ಪ್ರತಿ ವಿಚಾರವನ್ನು ನಿರ್ಧರಿಸುತ್ತವೆ. ಹಾಗೆ ಗ್ರಹಗಳು ಆಯಾ ರಾಶಿಯಲ್ಲಿ ಚಲಿಸುವುದು ಹಲವು ಬದಲಾವಣೆಗಳು, ಪರಿಣಾಮಗಳಿಗೆ ಕಾರಣವಾಗುತ್ತದೆ.
ಇನ್ನು ಈ ಜುಲೈ ತಿಂಗಳಿನಲ್ಲಿ ಹಲವು ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗುವುದು ನೋಡಬಹುದು. ಹಾಗೆ ಜುಲೈನಲ್ಲಿ ಗ್ರಹಗಳ ಚಲನೆಯಲ್ಲಿ ಬಹಳ ಬದಲಾವಣೆಗಳಾಗುವುದು ನೋಡಬಹುದು. ಪ್ರಮುಖ ಗ್ರಹಗಳಾದ ಶನಿ ಹಾಗೂ ಗುರು ಗ್ರಹದ ಚಲನೆಯ ತಿಂಗಳು ಎನ್ನಬಹುದು. ಜುಲೈನಲ್ಲಿ ಗುರು ಉದಯ ಹಾಗೆ ಶನಿಯ ಚಲನೆಯು ಹಲವು ರಾಶಿಗಳ ಮೇಲೆ ಶುಭ ಹಾಗೂ ಅಶುಭ ಕಾರಕ ಪರಿಣಾಮಕ್ಕೆ ಕಾರಣವಾಗುತ್ತಿದೆ.

ಈ ಜುಲೈ 13, 2025 ರಂದು 7:24 ಕ್ಕೆ ಶನಿ ಗ್ರಹವು ವಕ್ರ ಚಲನೆಯಲ್ಲಿ ತೊಡಗಲಿದೆ. ಇದು ನವೆಂಬರ್ 28ರ ವರೆಗೂ ಮುಂದುವರೆಯಲಿದೆ. ಹಾಗೆ ಇನ್ನೊಂದು ಕಡೆ ಗುರು ಜುಲೈ 9 ರಂದು 22:50ರಂದು ಮಿಥುನ ರಾಶಿಯಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಜುಲೈ ಈ ಎರಡು ಮುಖ್ಯ ಗ್ರಹಗಳ ಚಲನೆಯಿಂದಾಗಿ ಹಲವರಲ್ಲಿ ಲಾಭದಾಯಕ ದಿನಗಳ ನೋಡಬಹುದಾಗಿದೆ.
ವೃಷಭ ರಾಶಿ
ಜುಲೈ ತಿಂಗಳಲ್ಲಿ ಗುರು ಮತ್ತು ಶನಿಯ ಸ್ಥಾನ ಬದಲಾವಣೆಗಳು ವೃಷಭ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತವೆ. ಈ ತಿಂಗಳು ಹೊಸ ಒಪ್ಪಂದಗಳ ಮೂಲಕ ಹಣ ಗಳಿಸಲು ಅವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಪಿತ್ರಾರ್ಜಿತ ವ್ಯಾಪಾರಗಳು, ವ್ಯವಹಾರಗಳು, ಲಾಭದಾಯಕವಾಗಲಿವೆ. ಹೊಸ ಆದಾಯಗಳ ಪಡೆಯಬಹುದು. ನಿಮ್ಮ ಹೊಸ ಉದ್ಯಮ, ಅಥವಾ ಸ್ವಂತ ಉದ್ಯೋಗವು ನಿಮಗೆ ಲಾಭದಾಯಕವಾಗಲಿದೆ. ಪ್ರೇಮ ಅಥವಾ ಪ್ರೀತಿಯ ವಿಚಾರದಲ್ಲಿ ನಿಮಗೆ ಒಲವು ಇರಲಿದೆ. ಉದ್ಯಮಿಗಳಲ್ಲಿ ಧನಾತ್ಮಕ ವಿಚಾರಗಳು ಮೂಡಲಿವೆ. ನೀವು ಉದ್ಯೋಗ ಬದಲಿಸಿ ಮತ್ತೊಂದು ಯಶಸ್ವಿ ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ತುಲಾ ರಾಶಿ
ಜುಲೈ ತಿಂಗಳಲ್ಲಿ ಗುರು-ಶನಿಯ ಬದಲಾವಣೆಗಳು ತುಲಾ ರಾಶಿಯವರಿಗೆ ಅದ್ಭುತ ಪ್ರಯೋಜನಗಳ ತರಲಿದೆ. ಈ ರಾಶಿಯವರ ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ. ಅವರ ಕೆಲಸ ಕಾರ್ಯಗಳು ಬಹಳ ಸರಾಗವಾಗಿ ನಡೆಯಲಿದೆ. ಕಠಿಣ ಶ್ರಮಗಳಿಗೆ ತಕ್ಕ ಪ್ರತಿಫಲ ಪಡೆಯಬಹುದು. ನಿಮ್ಮ ಬಯಕೆಯಂತೆ ದುವಾರಿ ವಸ್ತುಗಳ ಖರೀದಿಗೆ ಇದು ಸೂಕ್ತ ಸಮಯ ಆಗಿರಲಿದೆ, ಅದಕ್ಕೆ ಬೇಕಾದ ಸಿದ್ಧತೆಯಲ್ಲೂ ನಿಮಗೆ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ನೋಡುವಿರಿ. ವ್ಯಾಪಾರಿಗಳಲ್ಲಿ ಹಿಂದಿನ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಮಯ ಇದಾಗಿರಲಿದೆ.
ಕುಂಭ ರಾಶಿ
ಗುರು ಹಾಗೂ ಶನಿಯ ಚಲನೆಯಿಂದಾಗಿ ಕುಂಭ ರಾಶಿಯವರಲ್ಲು ಒಂದಿಷ್ಟು ಶುಭಕರ ಲಾಭಗಳ ನೋಡಬಹುದಾಗಿದೆ. ನಿಮ್ಮ ಆಸೆಗಳ ಈಡೇರಿಸಿಕೊಳ್ಳಲು ಇದು ಸೂಕ್ತ ಸಮಯ. ನಿಮ್ಮ ಪ್ರೇಮ ನಿವೇದನೆಗೂ ಇದು ಸೂಕ್ತ ಕಾಲ. ನೀವು ಯಾವುದಾದರು ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರೆ ನಿಮಗೆ ಉತ್ತಮ ಸಮಯ ಆಗಿರಲಿದೆ. ನಿಮ್ಮ ಹಣಕಾಸು ವಿಚಾರವಾಗಿ ನಡೆಯುತ್ತಿದ್ದ ದೀರ್ಘ ಸಮಯದ ಸಮಸ್ಯೆ ಬಗೆಹರಿಯಬಹುದು. ಕುಟುಂಬದಲ್ಲಿ ಈ ಸಮಯ ಶಾಂತಿ ನೆಲೆಸಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











