Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಟೋಬರ್‌ನಲ್ಲಿ ಶನಿ ನಕ್ಷತ್ರ ಬದಲಾವಣೆ: ಯಾರಿಗೆ ಶನಿ ದೋಷ ನಿವಾರಣೆ..ಕಷ್ಟದ ದಿನ ದೂರ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿ ಬದಲಾಯಿಸುವುದು ನೋಡಬಹುದು. ಹಾಗೆ ನಿಗದಿತ ಸಮಯದಲ್ಲಿ ನಕ್ಷತ್ರಗಳನ್ನು ಕೂಡ ಬದಲಾಯಿಸುವುದು ನೋಡಬಹುದು. ಗ್ರಹಗಳು ರಾಶಿ ಬದಲಾಯಿಸಿದಾಗ ಹಾಗೆ ನಕ್ಷತ್ರಗಳ ಬದಲಾಯಿಸಿದಾಗ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟು ಮಾಡುವುದು ನೋಡಬಹುದು. ಒಂಬತ್ತು ಗ್ರಹಗಳಲ್ಲಿ ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ಎಂದು ಶನಿಯನ್ನು ಪರಿಗಣಿಸುವುದು ನೋಡಬಹುದು.
ಶನಿಯ ಚಲನೆಯು ಹಲವರಿಗೆ ಹಲವು ರೀತಿಯ ಪರಿಣಾಮ ಉಂಟು ಮಾಡುವುದು ನೋಡಬಹುದು. ಶನಿ ಒಮ್ಮೆ ರಾಶಿಗೆ 30 ವರ್ಷಗಳ ತೆಗೆದುಕೊಳ್ಳಲಿದೆ. ಹಾಗೆ ಶನಿ ಒಂದು ನಕ್ಷತ್ರವನ್ನು ಚಲಿಸಲು 27 ವರ್ಷ ತೆಗೆದುಕೊಳ್ಳಲಿದೆ. ಅಕ್ಟೋಬರ್ ತಿಂಗಳಲ್ಲಿ ಶನಿಯು ಪೂರ್ವ ಭಾದ್ರಪದ ನಕ್ಷತ್ರಕ್ಕೆ ಚಲಿಸಲಿದ್ದಾನೆ.

ಪ್ರಸ್ತುತ ಶನಿಯು ಮೀನ ರಾಶಿಯಲ್ಲಿ ವಕ್ರ ಸ್ಥಾನದಲ್ಲಿದ್ದಾನೆ, ಈ ಸ್ಥಾನದಲ್ಲಿ ಶನಿಯು ಅಕ್ಟೋಬರ್ 03, 2025 ರಂದು ರಾತ್ರಿ 09:49 ಕ್ಕೆ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದು ಕೆಲವು ರಾಶಿ ಜನರಿಗೆ ಧನಾತ್ಮಕ ಲಾಭ ತರಲಿದೆ. ಮತ್ತೆ ಕೆಲವು ರಾಶಿ ಜನರಿಗೆ ನಕಾರಾತ್ಮಕ ಬದಲಾವಣೆಗಳ ತರಲಿದೆ. ಹಾಗಾದ್ರೆ ಶನಿಯ ನಕ್ಷತ್ರ ಬದಲಾವಣೆಯು ಯಾರಿಗೆ ಶುಭಕರವಾಗಲಿದೆ? ಯಾರಿಗೆ ಅದೃಷ್ಟ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಶನಿ ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಂತೆ, ಕರ್ಕ ರಾಶಿಯ ಜನರಲ್ಲಿ ಉತ್ತಮ ಪ್ರಯೋಜನಗಳ ನೋಡಬಹುದು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ವೃತ್ತಿಪರ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲು ಇದು ಉತ್ತಮ ಸಮಯ ಆಗಿರಲಿದೆ. ಕರ್ಕ ರಾಶಿಯ 9ನೇ ಮನೆಯಲ್ಲಿ ಶನಿ ಚಲನೆ ಇರಲಿದೆ. ಇದರಿಂದ ಹಠಾತ್ ಹಣಕಾಸಿನ ಲಾಭಗಳ ನೋಡಬಹುದು. ಹಾಗೆ ಹಲವು ಕಾಲದಿಂದ ಹಣಕಾಸು ಸಂಬಂಧವಾಗಿ ಅರ್ಧಕ್ಕೆ ನಿಂತ ವಿಚಾರವೊಂದು ಪೂರ್ಣವಾಗಲಿದೆ. ಉದ್ಯಮಿ ಗಳು, ವ್ಯಾಪಾರಿಗಳು ಸಕಾರಾತ್ಮಕ ಬೆಳವಣಿಗೆಗಳ ಹಾಗೆ ಆರ್ಥಿಕ ಲಾಭಗಳ ನಿರೀಕ್ಷಿಸಬಹುದು. ಹೂಡಿಕೆಗಳು ಉತ್ತಮ ಲಾಭವನ್ನು ನೀಡಬಹುದು. ಕೌಟುಂಬಿಕ ವಿಚಾರಗಳು ನೀವು ಅಂದುಕೊಂಡಂತೆ ಇರಲಿದೆ.
ಕುಂಭ ರಾಶಿ
ಶನಿಯು ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಚಲಿಸುವುದರಿಂದ ಕುಂಭ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರಲಿದೆ. ಈ ಅವಧಿಯಲ್ಲಿ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಧನಾತ್ಮಕ ದಿನಗಳ ನೋಡುವರು. ವಿದೇಶ ಪ್ರಯಾಣ, ಕನಸಿನ ಕೆಲಸಗಳ ಪಡೆಯಲು ಉತ್ತಮ ದಿನಗಳಾಗಿವೆ. ಗೃಹಿಣಿಯರು ಬಹಳ ಸಮಯದಿಂದ ಬಯಸಿದಂತಹ ವಸ್ತುವನ್ನು ಖರೀದಿಸಹುದು. ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಅವರು ಹೊಸ ವಾಹನ ಮತ್ತು ಆಸ್ತಿಯ ವಿಚಾರದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಕಳೆದುಕೊಂಡ ವಸ್ತವೊಂದು ನಿಮ್ಮ ಕೈ ಸೇರಲಿದೆ.
ಮೀನ ರಾಶಿ
ಶನಿ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಚಲಿಸುವುದು ಮೀನ ರಾಶಿಯವರಿಗೆ ಅನಿರೀಕ್ಷಿತ ಪ್ರಯೋಜನಗಿವೆ. ಅದ್ರಲ್ಲೂ ವೃತ್ತಿ ಜೀವನ, ದಾಂಪತ್ಯ, ಹಣಕಾಸು ವಿಚಾರದಲ್ಲಿ ಬಹಳ ಲಾಭವಿದೆ. ಕರ್ಮಫಲಗಳ ನೀಡುವ ಶನಿ ಈ ರಾಶಿಯ ಲಗ್ನ ಮನೆಯಲ್ಲಿ ನೆಲೆಸುತ್ತಾನೆ. ಈ ಅವಧಿಯಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಕಚೇರಿ ವಿಚಾರವಾಗಿ ನಿಮಗೆ ಬಹಳ ಅನುಕೂಲಕರ ದಿನಗಳವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿದ್ದ ದೊಡ್ಡ ಹಣಕಾಸು ಸಮಸ್ಯೆಯೊಂದು ನಿಮ್ಮಿಂದ ಬಗೆಹರಿಯಲಿದೆ. ಹೊಸ ವ್ಯವಹಾರಕ್ಕೆ ಇದು ಉತ್ತಮ ಸಮಯ ಆಗಿರಲಿದೆ. ಗೃಹಿಣಿರಲ್ಲಿ ಬಹುಕಾಲದ ಬಯಕೆಯೊಂದು ಈಡೇರಲಿದೆ. ಖರ್ಚುಗಳಿಗೆ ಕಾರಣವಾಗಿದ್ದ ವಿಚಾರವೊಂದು ಬಗೆಹರಿಯಲಿದೆ.



Click it and Unblock the Notifications










