Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
30 ವರ್ಷಗಳ ಬಳಿಕ ಶನಿಯಿಂದ ಕೇಂದ್ರ ತ್ರಿಕೋನ ರಾಜಯೋಗ: ಅದೃಷ್ಟದ ರಾಶಿಗಳಿವು
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಬಹಳ ಪ್ರಭಾವಕಾರಿ ಹಾಗೂ ಬದಲಾವಣೆಗಳ ತರಲಿರುವ ಗ್ರಹವೆಂದು ಪರಿಗಣಿಸಲಾಗಿದೆ. ಅದರಲ್ಲೂ ನಿಮ್ಮ ಎಲ್ಲಾ ಆಗು ಹೋಗುಗಳಲ್ಲಿ ಶನಿಯ ಹಸ್ತಕ್ಷೇಪ ಇರಲಿದೆ ಎಂಬುದೊಂದು ನಂಬಿಕೆಯಾಗಿದೆ. ಶನಿ ಬಹಳ ನಿಧಾನವಾಗಿ ಚಲಿಸುವ ಗ್ರಹ ಆಗಿರುವುದರಿಂದ ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ನೆಲೆಸುತ್ತಾನೆ. ಹಾಗೆ ಅದರ ಪರಿಣಾಮಗಳು ಕೂಡ ರಾಶಿಯಿಂದ ರಾಶಿಗೆ ಬದಲಾಗುವುದು ನಾವು ನೋಡಬಹುದು.
ಶನಿ ಮಕರ ಹಾಗೂ ಕುಂಭ ರಾಶಿಯ ಅಧಿಪತಿಯಾಗಿರುತ್ತಾನೆ. ಆದ್ರೆ ಆತನ ಸ್ಥಾನಪಲ್ಲಟದ ಮೂಲಕ ಯಾವ ರಾಶಿಯವರಲ್ಲಿ ಒಳಿತು ತರಲಿದ್ದಾನೆ ಹಾಗೆ ಯಾರಿಗೆ ಆತನಿಂದ ಸಂಕಷ್ಟಗಳು ಎದುರಾಗಲಿದೆ ಎಂಬುದನ್ನು ತಿಳಿಯಲಾಗುತ್ತದೆ. ಶನಿ ಈಗ ಮೀನ ರಾಶಿಯಲ್ಲಿ ಚಲಿಸುತ್ತಿದ್ದು, 30 ವರ್ಷಗಳ ಬಳಿಕ ಮೀನ ರಾಶಿಗೆ ಶನಿ ತೆರಳಿದ್ದು 2027ರ ವರೆಗೂ ಅದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.

2027ರ ಬಳಿಕ ಶನಿ ಮೇಷ ರಾಶಿಗೆ ಚಲಿಸಲಿದ್ದಾನೆ. ಶನಿ ಮೀನ ರಾಶಿಯಲ್ಲಿರುವುದರಿಂದ ಕೇಂದ್ರ ತ್ರಿಕೋನ ರಾಜಯೋಗಕ್ಕೆ ಕಾರಣವಾಗಲಿದ್ದಾನೆ. ಈ ರಾಜಯೋಗವು ಎಲ್ಲಾ ರಾಶಿಗಳ ಮೇಲೂ ತನ್ನ ಪರಿಣಾಮ ಉಂಟು ಮಾಡಲಿದೆ. ಕೆಲವು ರಾಶಿಗಳಿಗೆ ಇದು ಶುಭಕರವಾಗಿ ಹಾಗೆ ಮತ್ತೆ ಕೆಲವೊಂದು ರಾಶಿಗಳಿಗೆ ಅಶುಭಕಾರವಾಗಿ ಕಾಣಿಸಲಿದ್ದಾನೆ.
ನಾವಿಂದು ಶನಿಯಿಂದ ರೂಪಿತವಾಗುವ ಈ ಕೇಂದ್ರ ತ್ರಿಕೋನ ರಾಜಯೋಗದಿಂದ ಯಾರಿಗೆ ಲಾಭವಾಗಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗವು 10 ನೇ ಮನೆಯಲ್ಲಿ ರೂಪುಗೊಂಡಿದೆ. ಇದರಿಂದಾಗಿ ನಿಮ್ಮಲ್ಲಿ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ. ನೀವು ಬಹಳ ವರ್ಷಗಳಿಂದಲೂ ಕಟ್ಟಿಕೊಂಡಿದ್ದ ಆಸೆಗಳ ಈಡೇರಿಸಿಕೊಳ್ಳಲು ಹಾಗೆ ಅದರಲ್ಲಿ ಮುಂದುವರೆಯಲು ಇದು ಬಹಳ ಉತ್ತಮ ಸಮಯವಾಗಲಿದೆ. ಮನೆ ನಿರ್ಮಾಣ, ಮದುವೆಯಂತಹ ಶುಭ ಕಾರ್ಯಗಳಲ್ಲಿ ಧನಾತ್ಮಕ ಬದಲಾವಣೆಗೆ ಇದು ಕಾರಣವಾಗಲಿದೆ. ನಿಮ್ಮ ಜಾತಕದಲ್ಲಿನ ದೋಷ ನಿವಾರಣೆಯ ಸಾಧ್ಯತೆ ಹೆಚ್ಚಾಗಿದೆ. ಶತ್ರುನಾಶ, ವ್ಯಾಪಾರಿಗಳಿಗೆ ಇದ್ದ ಅಡ್ಡಿ ನಿವಾರಣೆಯಾಗುವುದು ಸಹ ಇದೇ ಸಮಯದಲ್ಲಿ ಎನ್ನಬಹುದು. ನಿಮ್ಮ ಪ್ರಯಾಣಗಳಲ್ಲಿ ಸಫಲತೆ ನೋಡಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ, ಮನೆಯಲ್ಲಿ ಸಂತೋಷ ಉಂಟು ಮಾಡುವ ವಸ್ತುವನ್ನು ನೀವು ಖರೀದಿಸಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ 3 ನೇ ಮನೆಯಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿದೆ. ಇದರಿಂದಾಗಿ ನಿಮ್ಮ ಶನಿಯಿಂದ ಎದುರಾಗಿದ್ದ ಸಮಸ್ಯೆಗಳು ನಿವಾರಣೆಯಾಗಬಹುದು. ನಿಮ್ಮ ಅದೃಷ್ಟಗಳಿಗೆ ಇದು ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ. ನಿಮ್ಮ ಕೆಲಸದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ವ್ಯಾಪಾರಿಗಳಿಗೆ ಪ್ರಗತಿಯ ಹಾದಿ ಸುಗಮವಾಗಲಿದೆ. ವಿದ್ಯಾರ್ಥಿಗಳಲ್ಲಿ ಇದ್ದಂತಹ ಆತಂಕವೊಂದು ದೂರಾಗಲಿದೆ. ಉದ್ಯೋಗಿಗಳಿಗೆ ಹಠಾತ್ ಲಾಭದಾಯಕ ದಿನಗಳು ಎದುರಾಗಲಿವೆ. ನಿಮ್ಮಲ್ಲಿ ಹಲವು ದಿನಗಳಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸಂಕಷ್ಟವಿದ್ದರೆ ಸುಧಾರಣೆಯಾಗಲಿದೆ.
ಮೀನ ರಾಶಿ
ಮೀನ ರಾಶಿಯ ಮೊದಲ ಮನೆಯಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿದೆ. ಇದರಿಂದ ಶನಿ ದೋಷದ ಎರಡನೇ ಹಂತ ಆರಂಭವಾಗಲಿದೆ, ಹಾಗೆ ಇದರಿಂದ ನಿಮ್ಮ ಆದಾಯಗಳಲ್ಲಿ ಹೆಚ್ಚಳವಾಗುವುದು, ಸಂಪತ್ತು ವೃದ್ಧಿ, ರಾಜಕೀಯ ರಂಗದಲ್ಲಿ ಯಶಸ್ಸು, ಪ್ರವಾಸಗಳು ಸುಖಮಯವಾಗಿರಲಿದೆ. ಹಾಗೆ ನೀವು ಸರ್ಕಾರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದರೆ ಈ ಸಮಯದಲ್ಲಿ ಲಾಭದಾಯಕ ಫಲಿತಾಂಶ ಪಡೆಯುವ ಸಾಧ್ಯತೆ ಇದೆ. ನೀವು ಬಹಳ ಸಮಯದಿಂದ ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











