ಶನಿ-ಶುಕ್ರರಿಂದ ರೂಪುಗೊಂಡ ಅಪೂರ್ವ ಯೋಗ: ಈ ರಾಶಿಯವರಿಗೆ ಸಂಪತ್ತು ವೃದ್ಧಿ..!

ಗ್ರಹಗತಿಗಳ ವಿಚಾರದಲ್ಲಿ ಶನಿ ಹಾಗೂ ಶುಕ್ರ ಎರಡು ಪ್ರಮುಖ ಗ್ರಹಕಾಯಗಳಾಗಿವೆ. ಈ ಎರಡು ಗ್ರಹಗಳು ಶುಭ ಹಾಗೂ ಆಶುಭ ಕಾರ್ಯಕ್ಕೂ ಕಾರಣವಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಶನಿ ಮತ್ತು ಶುಕ್ರ ಪ್ರಮುಖ ಗ್ರಹಗಳು. ಏಕೆಂದರೆ ಶನಿ ದೇವರು ಒಬ್ಬರ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲ ನೀಡುತ್ತದೆ. ಒಬ್ಬರ ಸಂಪತ್ತು ಹೆಚ್ಚಳಕ್ಕೆ ಸಂಪತ್ತು ಕೊರತೆಗೂ ಕಾರಣವಾಗುತ್ತಾನೆ.

ಅಂತೆಯೇ ಶುಕ್ರವು ಸೌಂದರ್ಯ, ಐಷಾರಾಮಿ, ಸಂಪತ್ತು, ಪ್ರೀತಿ ಮತ್ತು ಅದೃಷ್ಟದ ಸಂಕೇತವಾಗಿರುತ್ತದೆ. ಯಾವ ರಾಶಿಯವರಲ್ಲಿ ಶುಕ್ರ ಸಂಚಾರ ಇರಲಿದ್ಯೋ ಅವರಿಗೆ ಲಾಭದಾಯಕ ದಿನಗಳು ಖಚಿತವಾಗಿರಲಿದೆ. ಹಾಗೆ ಶನಿ ಕೂಡ ಉತ್ತಮ ವಿಚಾರಗಳಿಗೆ ಸಾಕ್ಷಿಯಾಗುತ್ತಾನೆ. ಇನ್ನು ಎರಡೂ ಗ್ರಹಗಳು ಒಂದೆ ಮನೆಯಲ್ಲಿದ್ದರೆ ಕೂಡ ಹಲವು ರಾಶಿಯವರಿಗೆ ಲಾಭದಾಯಕವಾಗಲಿದೆ.

Saturn And Venus Yoga These 3 Zodaic Sign Will Get Lucky

ಈ ಎರಡು ಗ್ರಹಗಳು ಒಂದೇ ಮನೆಯಲ್ಲಿ ಸಂಚರಿಸುವುದರಿಂದ ಅರ್ಥ ಕೇಂದ್ರ ಯೋಗವು ರೂಪುಗೊಳ್ಳುತ್ತದೆ. ಈ ಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಡಿಸೆಂಬರ್ 28 ರವರೆಗೆ ಶುಕ್ರನು ಮಕರ ರಾಶಿಯಲ್ಲಿ ಸಂಚರಿಸುತ್ತಾನೆ. ಹೀಗಾಗಿ ಈ ಯೋಗ ಹಲವು ರಾಶಿಯವರಿಗೆ ಲಾಭದಾಯಕವಾಗಲಿದೆ. ಹಾಗಾದ್ರೆ ಶನಿ-ಶುಕ್ರ ಸಂಚಾರವು ಯಾವ ರಾಶಿಯವರಿಗೆ ಲಾಭ ತರಲಿದೆ ಎಂಬುದನ್ನು ನೋಡೋಣ.

ಮೇಷ ರಾಶಿ

ಮೇಷ ರಾಶಿಯ 10ನೇ ಮನೆಯಲ್ಲಿ ಶುಕ್ರ ಮತ್ತು 11ನೇ ಮನೆಯಲ್ಲಿ ಶನಿ ಇರುವುದರಿಂದ ಈ ರಾಶಿಯವರಲ್ಲಿ ಅತ್ಯಧಿಕ ಲಾಭ ನೋಡಬಹುದು. ನೀವು ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ನೋಡುತ್ತೀರಿ. ನಿಮಗೆ ಹಣವು ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ಹಾಗೂ ಲಾಭದಾಯಕ ರೀತಿಯಲ್ಲಿ ಬರಲಿದೆ. ನಿಮ್ಮ ಅದೃಷ್ಟದ ಚಿಹ್ನೆಗಳು ಬದಲಾಗಲಿದೆ. ನಿಮ್ಮ ಹಳೆಯ ಸಾಲಗಳು ನಿವಾರಣೆಯಾಗಲಿದೆ. ಹಣಕಾಸು ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ವ್ಯಾಪಾರಸ್ಥರಿಗೆ ಅತ್ಯಧಿಕ ಲಾಭವಾಗುವ ನಿರೀಕ್ಷೆ ಇದೆ.

ಕನ್ಯಾ ರಾಶಿ

ಕನ್ಯಾರಾಶಿಯಲ್ಲಿ ಶುಕ್ರ 5 ನೇ ಮನೆಯಲ್ಲಿ ಮತ್ತು ಶನಿ 6 ನೇ ಮನೆಯಲ್ಲಿ ಇರುವುದರಿಂದ ನಿಮ್ಮ ಬಹು ದಿನಗಳ ಆಸೆ ಫಲಿಸದೆ. ಉದ್ಯೋಗ ಹುಡುಕುತ್ತಿದ್ದವರಿಗೆ ಅಪೇಕ್ಷಿತ ಲಾಭಗಳು ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ಬೇಡಿಕೆಗಳು ಈಡೇರಲಿದೆ. ಹೊಸ ವಸ್ತು ಖರೀದಿಸುವ ನಿಮ್ಮ ಆಲೋಚನೆಗಳು ಈ ಕಾಲದಲ್ಲಿ ನನಸಾಗಲಿದೆ. ನಿಮ್ಮ ಸಂಬಂಧಿಕರ ಅನಿರೀಕ್ಷಿತ ಬೇಟಿ ವೇಳೆ ನಿಮಗೆ ಶುಭ ಸುದ್ದಿಯೊಂದು ಬರಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಹಾಗೆ ಆರೋಗ್ಯದಲ್ಲೂ ಸುಧಾರಣೆ ನೋಡಬಹುದು.

ಮಕರ ರಾಶಿ

ಮಕರ ರಾಶಿಯ 1ನೇ ಮನೆಯಲ್ಲಿ ಶುಕ್ರ ಮತ್ತು 2 ನೇ ಮನೆಯಲ್ಲಿ ಶನಿ ಇರುವುದರಿಂದ ಈ ರಾಶಿಯವರು ಒಂದಿಷ್ಟು ದಿನ ಪ್ರಯಾಣದಲ್ಲಿ ಕಳೆಯಬೇಕಾಗಬಹುದು. ಹಾಗೆ ಈ ಪ್ರವಾಸಗಳು ನಿಮಗೆ ಲಾಭದಾಯಕವಾಗಿಯೂ ಬದಲಾಗಲಿದೆ. ಉದ್ಯೋಗದಲ್ಲಿ ಲಾಭದಾಯಕವಾಗುವ ನಿರೀಕ್ಷೆ ಇದೆ. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವೇತನ ಹೆಚ್ಚಳ ಸಾಧ್ಯತೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Saturn And Venus Yoga: These 3 Zodiac Sign Will Get Lucky

Artha Kendra Yoga is formed when two planets transit in the same house. This yoga is considered auspicious. Venus will transit in Capricorn till December 28.
Story first published: Sunday, December 1, 2024, 14:23 [IST]
X
Desktop Bottom Promotion