Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಸೂರ್ಯ ಮತ್ತು ಶನಿ ಒಂದೇ ರಾಶಿಯಲ್ಲಿ ಚಲನೆ.! 2025ರಲ್ಲಿ ಈ ರಾಶಿಯವರಿಗೆ ಆರ್ಥಿಕ ಪ್ರಗತಿ..!
2025ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗೆ ಮುಂದಿನ ವರ್ಷದಲ್ಲಿ ಹಲವು ಗ್ರಹಗತಿಗಳ ಬದಲಾವಣೆಯು ಹಲವು ರಾಶಿಯವರಲ್ಲಿ ದೊಡ್ಡ ದೊಡ್ಡ ಬದಲಾವಣೆ ನೋಡಬಹುದಾಗಿದೆ. ಅದ್ರಲ್ಲೂ 2025ರಲ್ಲಿ ಸೂರ್ಯ ಮತ್ತು ಶನಿ ಒಂದೇ ರಾಶಿಗೆ ಸಾಗುವುದು ಅತೀ ದೊಡ್ಡ ಪ್ರಕ್ರಿಯೆಯಾಗಿದೆ. ಗ್ರಹಗಳ ರಾಜ ಸೂರ್ಯ ಮತ್ತು ಶನಿ 2025 ರಲ್ಲಿ ಕುಂಭ ರಾಶಿಯಲ್ಲಿ ಚಲಿಸಲಿದ್ದು, ಇದು ಅಪರೂಪದ ಪ್ರಕ್ರಿಯೆಯಾಗಿದೆ.
ಸಾಮಾನ್ಯವಾಗಿ ಶನಿ ಸಂಚಾರವು ಕೆಡುಕಿನ ಮುನ್ಸೂಚನೆಯಾಗಿ ನೋಡಲಾಗಿದೆ. ಆದ್ರೆ ಸೂರ್ಯನಿಂದಿಗಿನ ಈ ಚಲನೆಯನ್ನು ವಿಶೇಷ ಹಾಗೂ ಅಪರೂಪದ ಪ್ರಕ್ರಿಯೆಯೆಂದು ಪರಿಗಣಿಸಬಹುದು,. ಹೀಗಾಗಿ ಈ ಸೂರ್ಯ ಹಾಗೂ ಶನಿಯ ಸಂಚಾರವು ಹಲವರಿಗೆ ಲಾಭದಾಯಕವಾಗಿ ಮಾರ್ಪಡಲಿದೆ.

ಸೂರ್ಯನನ್ನು ಸಾಮಾನ್ಯವಾಗಿ ಗೌರವ, ಘನತೆ ಮತ್ತು ಆತ್ಮ ವಿಶ್ವಾಸವನ್ನು ಆಳುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಆದರೆ ಶನಿಯು ಕರ್ಮ, ಸದಾಚಾರ ಮತ್ತು ಕಠಿಣ ಪರಿಶ್ರಮವನ್ನು ಆಳುತ್ತಾನೆ ಎಂದು ಪರಿಗಣಿಸಲಾಗಿದೆ. ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಸಂಚರಿಸಲಿದೆ.
ಮುಂಬರುವ ವರ್ಷದಲ್ಲಿ ಶನಿಯು ಮೀನು ರಾಶಿಯಲ್ಲಿ ಸಂಚರಿಸಲಿದೆ. ಮಾರ್ಚ್ 29 2025 ರಂದು ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತಾನೆ. ಆದರೆ ಜನವರಿ ತಿಂಗಳ ಆರಂಭದಲ್ಲಿ ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಶನಿ ಒಟ್ಟಿಗೆ ಸಾಗುತ್ತಾರೆ. ಈ ಅಪರೂಪದ ಘಟನೆಯಿಂದಾಗಿ ಕೆಲವು ರಾಶಿ ಜನರಿಗೆ ಇದು ಉತ್ತಮ ಫಲಿತಾಂಶ ತರಲಿದೆ.
ಮೇಷ ರಾಶಿ
ಶನಿ ಮತ್ತು ಸೂರ್ಯನು ಒಟ್ಟಿಗೆ ಚಲಿಸುವುದು ಮೇಷ ರಾಶಿಯವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಅವರಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿದೆ. ಇದರಿಂದ ಆರ್ಥಿಕ ಪ್ರಗತಿಯನ್ನು ನೋಡಲಿದ್ದಾರೆ. ಹಾಗೆ ಈ ಸಮಯದಲ್ಲಿ ನಿಮ್ಮ ಖರ್ಚು ಕೂಡ ಹೆಚ್ಚಾಗುತ್ತದೆ. ಆದ್ರೆ ಈ ಖರ್ಚುಗಳಿಂದ ನಿಮ್ಮ ಸಂತೋಷ ಹೆಚ್ಚಾಗಲಿದೆ. ನೀವು ಬಯಸಿದ ವಸ್ತುಗಳು ನಿಮಗೆ ಸಿಗಲಿದೆ. ಹಾಗೆ ಕುಟುಂಬಸ್ಥರಿಂದಲೂ ಇದಕ್ಕೆ ಸಹಕಾರ ಸಿಗಲಿದೆ. ದಾಂಪತ್ಯ ಜೀವನ ಕೂಡ ಸಂತಸಮಯವಾಗಿರಲಿದೆ.
ವೃಷಭ ರಾಶಿ
ಸೂರ್ಯ ಮತ್ತು ಶನಿಯ ಸಂಯೋಜನೆಯು ವೃಷಭ ರಾಶಿಯವರಿಗೆ ಅನೇಕ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಸರ್ಕಾರಿ ನೌಕರರಿಗೆ ಬಡ್ತಿ, ವರ್ಗಾವಣೆಯಂತಹ ಕೆಲಸಗಳು ಸುಗಮವಾಗುತ್ತವೆ. ಹೊಸ ಉದ್ಯೋಗಾಕಾಂಕ್ಷಿಗಳಿಗೆ ಇದು ಭರವಸೆಯ ಅವಧಿಯಾಗಿದೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ದೊರೆಯಲಿದೆ. ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುವುದರಿಂದ ಅವರು ಸಂತೋಷದ ಜೀವನವನ್ನು ನಡೆಸುತ್ತಾರೆ. ಹಲವು ದಿನಗಳಿಂದ ನೀವು ಮಾಡಬೇಕಿದ್ದ ಕೆಲಸಗಳು ಅಡೆತಡೆಯಿಲ್ಲದೆ ನೆರವೇರಲಿದೆ. ಅವಿವಾಹಿತರಲ್ಲಿ ಒಳ್ಳೆಯ ವರ್ಷವಾಗಿರಲಿದೆ.
ಮಕರ ರಾಶಿ
ಸೂರ್ಯ ಮತ್ತು ಶನಿಯ ಸಂಯೋಜನೆಯು ಮಕರ ರಾಶಿಯವರಿಗೆ ಅನೇಕ ಅನುಕೂಲಕರ ದಿನಗಳ ತರಲಿದೆ. ನೀವು ಅನಿರೀಕ್ಷಿತ ಲಾಭಗಳ ನೋಡಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿಗಳು ಸುಧಾರಿಸಲಿದೆ. ವ್ಯವಹಾರಗಳು ಲಾಭದಾಯಕವಾಗಲಿದೆ. ಯಂತ್ರೋಪಕರಣ ಮಾರಾಟಗಾರರು ಲಾಭ ಗಳಿಸಲಿದ್ದಾರೆ. ಅವಿವಾಹಿತರು ಅದರಲ್ಲೂ ಪ್ರೇಮ ವಿವಾಹವಾಗುವವರಿಗೆ ಈ ವರ್ಷ ಬಹಳ ಒಳಿತಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಆಶ್ಚರ್ಯಕರವಾದ ಏರಿಕೆ ನಿಮ್ಮ ಕಷ್ಟಗಳ ದೂರಮಾಡಲಿದೆ. ವಾಹನ ಲಾಭದಂತಹ ಕನಸುಗಳು ಈಡೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











