30 ವರ್ಷಗಳ ಬಳಿಕ ಶನಿ-ಸೂರ್ಯ ಮುಖಾಮುಖಿ: ಈ 3 ರಾಶಿಗಳಿಗೆ ಕಾದಿದೆ ಕಷ್ಟ! ಆರ್ಥಿಕ ನಷ್ಟ ಗ್ಯಾರಂಟಿ

30 ವರ್ಷಗಳ ಬಳಿಕ ಸೂರ್ಯ ಮತ್ತು ಶನಿ ಮುಖಾಮುಖಿ. ಈ ರಾಶಿಗಳಿಗೆ ಕಾದಿದೆ ಕಷ್ಟ, ಆರ್ಥಿಕ ನಷ್ಟ ಗ್ಯಾರಂಟಿ. ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯನು ಸೆಪ್ಟೆಂಬರ್ 17ರಂದು ಬೆಳಗ್ಗೆ 1.54ಕ್ಕೆ ಕನ್ಯಾ ರಾಶಿಯನ್ನು ಪ್ರವೇಶಿಸಿದ್ದಾನೆ. ಅಕ್ಟೋಬರ್ 17ರವರೆಗೆ ಸೂರ್ಯ ಇದೇ ರಾಶಿಯಲ್ಲಿ ಇರುತ್ತಾನೆ. ಈ ಗ್ರಹಗಳ ಸಂಚಾರವು ಮನುಷ್ಯರ ಜೀವನದ ಮೇಲೆ ಹಾಗೂ ಪ್ರತಿಯೊಂದು ರಾಶಿಯ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರುತ್ತದೆ. ಈ ಸಮಯದಲ್ಲಿ ಯಾವ ರಾಶಿಯವರು ಹೆಚ್ಚು ಎಚ್ಚರದಿಂದಿರಬೇಕು ಮತ್ತು ಯಾವ ಸವಾಲು ಎದುರಾಗಲಿವೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಪ್ರತಿ ಗ್ರಹವೂ ನಿಶ್ಚಿತ ಅವಧಿಯ ನಂತರ ರಾಶಿ ಬದಲಾಯಿಸುತ್ತದೆ. ಸೂರ್ಯನು ಮೀನ ರಾಶಿಯಲ್ಲಿ ಇರುವುದರಿಂದ ಶನಿಯ ಜೊತೆ ಸೇರಿ ಸಮಸಪ್ತಕ ಯೋಗ (Samsaptak Yog 2025) ನಿರ್ಮಾಣವಾಗಲಿದೆ. ಸೂರ್ಯ ಮತ್ತು ಶನಿ ಒಂದಕ್ಕೊಂದು ಏಳನೇ ಸ್ಥಾನದಲ್ಲಿರುವುದರಿಂದ ಈ ಸಮಸಪ್ತಕ ಯೋಗ ಉಂಟಾಗುತ್ತಿದೆ. ವಿಶೇಷವಾಗಿ, 30 ವರ್ಷಗಳ ನಂತರ ಶನಿ ಮತ್ತು ಸೂರ್ಯ ಮುಖಾಮುಖಿಯಾಗುತ್ತಿರುವುದು (Surya Shani Gochar 2025) ಕುತೂಹಲ ಮೂಡಿಸಿದೆ. ಸಮಸಪ್ತಕ ಯೋಗವು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅದರಲ್ಲೂ ಈ 3 ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಆ ರಾಶಿಗಳು ಯಾವುವು ಮತ್ತು ಅವುಗಳ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Samsaptak Yog 2025

ಮೇಷ ರಾಶಿ

ಸೂರ್ಯ ಗ್ರಹವು ಮೇಷ ರಾಶಿಯ ಆರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದರಿಂದ, ನಿಮ್ಮ ಮಕ್ಕಳ ಕಲಾ ಪ್ರತಿಭೆಗಳು ಬೆಳಗಲು ಉತ್ತಮ ಅವಕಾಶಗಳು ದೊರೆಯುತ್ತವೆ. ವೃತ್ತಿಜೀವನದಲ್ಲಿ ಪ್ರಗತಿ ಹೊಂದಲು ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆದರೂ, ನೀವು ಸಮಸಪ್ತಕ ಯೋಗದ ಕಾರಣದಿಂದ ಕೆಲವು ತೊಂದರೆಗಳನ್ನು ಎದುರಿಸಬಹುದು. ಕೆಲಸದ ಸ್ಥಳದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಈ ಅವಧಿಯಲ್ಲಿ ನಿಮ್ಮ ಮೇಲೆ ಹೊಸ ಜವಾಬ್ದಾರಿಗಳು ಬೀಳಬಹುದು. ಆದರೆ, ಒತ್ತಡಕ್ಕೆ ಒಳಗಾಗದಂತೆ ಜಾಗ್ರತೆ ವಹಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ.

ವೃಷಭ ರಾಶಿ

ವೃಷಭ ರಾಶಿಯ ಐದನೇ ಮನೆಯಲ್ಲಿ ಸೂರ್ಯ ಗ್ರಹವು ಸಂಚಾರ ಮಾಡುತ್ತಿದೆ. ಸೂರ್ಯನು ನಿಮ್ಮ ರಾಶಿಯ ನಾಲ್ಕನೇ ಮನೆಯ ಅಧಿಪತಿಯಾಗಿದ್ದು, ಸಮಸಪ್ತಕ ಯೋಗವು ನಿಮ್ಮ ಕರ್ಮ ಸ್ಥಾನದಲ್ಲಿ ರೂಪುಗೊಳ್ಳುತ್ತಿದೆ. ಗ್ರಹಗಳ ಸ್ಥಿತಿ ಸಾಮಾನ್ಯವಾಗಿ ಅನುಕೂಲಕರವಾಗಿದೆ. ಆದರೂ, ವೃತ್ತಿಜೀವನದಲ್ಲಿ ನೀವು ಕೆಲವು ಜವಾಬ್ದಾರಿಗಳು ಮತ್ತು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಪ್ರತಿಯೊಂದು ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳುವುದು ಒಳ್ಳೆಯದು. ಈ ಅವಧಿಯಲ್ಲಿ ಹೊಸ ಹೂಡಿಕೆಗಳನ್ನು ಮಾಡುವುದು ಬೇಡ. ಹಣಕಾಸಿನ ವಿಷಯಗಳಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ.

ಮಿಥುನ ರಾಶಿ

ಸೂರ್ಯ ಗ್ರಹವು ಮಿಥುನ ರಾಶಿಯ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುತ್ತಿದೆ. ಇದರಿಂದ ನಿಮಗೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಕುಟುಂಬದಲ್ಲಿ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಮನೆಯಲ್ಲಿ ಶಾಂತಿಯನ್ನು ಕಾಪಾಡಲು ಪ್ರಯತ್ನಿಸಿ. ಜೊತೆಗೆ, ಸಣ್ಣ ಪುಟ್ಟ ಅಪಘಾತಗಳಂತಹ ಘಟನೆಗಳು ನಡೆಯುವ ಸಾಧ್ಯತೆಯೂ ಇದೆ. ಸೂರ್ಯ ಮತ್ತು ಶನಿಯ ಸಮಸಪ್ತಕ ಯೋಗದ ಕಾರಣದಿಂದಾಗಿ, ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವಾಗ ಮತ್ತು ಹಣಕಾಸಿನ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಹೆಚ್ಚು ಎಚ್ಚರಿಕೆ ವಹಿಸಿ. ಆದರೂ, ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಅವಕಾಶಗಳು ಒದಗಿ ಬರಲಿವೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

samsaptak yog 2025: shani & surya face to face after 30 year, These 3 Zodiac Face financial problems

samsaptak yog 2025: shani and surya face to face after 30 years, These Zodiac Sign Will Face financial problems
Story first published: Wednesday, September 17, 2025, 16:22 [IST]
X
Desktop Bottom Promotion