Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ಶುಕ್ರ-ಗುರುವಿಂದ ಸಮಸಪ್ತಕ ಯೋಗ; ಮೂರು ರಾಶಿಯವರ ಅದೃಷ್ಟ ಬದಲು!!
ವೈದಿಕ ಕ್ಯಾಲೆಂಡರ್ ಪ್ರಕಾರ ಐಷಾರಾಮಿ ಮತ್ತು ಸಮೃದ್ಧಿಯ ದಾತ ಎಂದು ಪರಿಗಣಿಸಲಾಗಿರುವ ಶುಕ್ರನು 2026ರಲ್ಲಿ ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಆದ್ರೆ 2026ರಲ್ಲಿ ಗುರು ಕೂಡ ಧನು ರಾಶಿಗೆ ಪ್ರವೇಶಿಸುವುದು ಹಲವು ರೀತಿಯ ಯೋಗಕ್ಕೆ ಕಾರಣವಾಗಲಿದೆ. ಯೋಗವು 100 ವರ್ಷಗಳಿಗೊಮ್ಮೆ ಸಂಭವಿಸಲಿದೆ. ಹೀಗಾಗಿ ಇದು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಅದ್ರಲ್ಲೂ ಕೆಲವೊಂದು ರಾಶಿಗಳಿಗೆ ಈ ಸಂಚಾರವು ಹಲವು ರೀತಿಯ ಲಾಭಗಳಿವೆ ಕಾರಣವಾಗುತ್ತಿದೆ. ಶುಕ್ರ ಹಾಗೂ ಗುರುವಿನ ಈ ಸಂಯೋಗವು ಧನು ರಾಶಿಯಲ್ಲಿ ಸಮಷ್ಟಕ ಅಥವಾ ಸಮಸಪ್ತಕ ಯೋಗ ರೂಪುಗೊಳ್ಳಲಿದೆ. ಇದು ಎಲ್ಲಾ ರಾಶಿಗಳಿಗೂ ಮುಂದಿನ ವರ್ಷ ಅದೃಷ್ಟ ಹೊತ್ತು ತರಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಈ ಯೋಗವು ಲಾಭಕರ? ಯಾರಿಗೆ ಅದೃಷ್ಟ ತರಲಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ.

ಕರ್ಕ ರಾಶಿ
ಸಮಸಪ್ತಕ ರಾಜಯೋಗದ ರಚನೆಯು ಕರ್ಕಾಟಕ ರಾಶಿ ಜನರಿಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ನಿಮ್ಮ ಉದ್ಯೋಗದಲ್ಲಿನ ವಿಚಾರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಎದುರಾಗಲಿದೆ. ಇದು ನಿಮ್ಮ ಬಡ್ತಿ, ವೇತನ ಕುರಿತಾದ ವಿಚಾರದಲ್ಲಿ ಶುಭವಿದೆ. ನಿಮ್ಮ ಪ್ರೇಮ ವಿವಾಹ ಕುರಿತಾದ ಅಡ್ಡಿಗಳು ನಿವಾರಣೆಯಾಗಲಿದೆ, ಅವಿವಾಹಿತರು ವಿವಾಹ ಯೋಗ ಪಡೆಯುವ ವರ್ಷವಿದು. ಹಲವು ಹೊಸ ಅವಕಾಶಗಳು ನಿಮಗೆ ಒಲಿದು ಬರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಠಾತ್ ಲಾಭಗಳಂತಹ ವಿಚಾರಗಳು ನಿಮಗೆ ಶುಭತರಲಿದೆ. ಅದ್ರಲ್ಲೂ ಆಸ್ತಿ ಖರೀದಿ, ಮನೆ ಖರೀದಿಯಂತಹ ವಿಚಾರದಲ್ಲಿ ಈ ವರ್ಷ ಅಧಿಕ ಲಾಭ ನೋಡಬಹುದು.
ಧನು ರಾಶಿ
ಸಮಸಪ್ತಕ ಯೋಗದ ರಚನೆಯು ಧನು ರಾಶಿಯವರಿಗೆ ಉತ್ತಮ ದಿನಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚು ಪಡೆಯಬಹುದು. ನಿಮ್ಮ ಕೆಲಸದ ಶೈಲಿ ಸುಧಾರಿಸುತ್ತದೆ ಮತ್ತು ನಿಮ್ಮ ವ್ಯಕ್ತಿತ್ವವು ಅಭಿವೃದ್ಧಿ ಹೊಂದುತ್ತದೆ. ನಿಮ್ಮ ದೊಡ್ಡ ಸಾಲದ ಪ್ರಮಾಣ ಈ ವರ್ಷ ಕಡಿಮೆಯಾಗಲಿದೆ. ಅವಿವಾಹಿತರಲ್ಲಿದ್ದ ದೊಡ್ಡ ಹಣಕಾಸು ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳುವಿರಿ. ಸಂಬಂಧಿಕರ ನಡುವಿನ ಮನಸ್ತಾಪಗಳು ನಿವಾರಣೆಯಾಗಲಿದೆ. ವಾಹನ ಖರೀದಿಯ ಲಾಭವಿದೆ, ಈ ವರ್ಷ ಉಳಿತಾಯದ ಹಣವನ್ನು ನೀವು ಸರಿಯಾದ ಕೆಲಸಕ್ಕೆ ಬಳಸುತ್ತೀರಿ. ತಂದೆ ತಾಯಿಯೊಂದಿಗಿದ್ದ ಮನಸ್ತಾಪಗಳು ನಿವಾರೆಯಾಗಲಿದೆ. ಮನೆಯಿಂದ ನಿಮಗೆ ಹಣಕಾಸಿನ ನೆರವು ಸಿಗಲಿದೆ. ಮನೆಗಾಗಿ ದುಬಾರಿ ಅಥವಾ ಐಷಾರಾಮಿ ವಸ್ತುವೊಂದನ್ನು ಖರೀದಿಸುವ ಸಮಯವಿದು.
ಮಕರ ರಾಶಿ
ಸಮಸಪ್ತಕ ಯೋಗದ ರಚನೆಯು ಮಕರ ರಾಶಿಯವರಿಗೆ ಅನುಕೂಲಕರವೆಂದು ಸಾಬೀತುಪಡಿಸಬಹುದು. ನಿಮ್ಮ ಕೆಲಸ ಕಾರ್ಯಗಲ್ಲಿ ಶುಭವಾಗುವುದು ನೋಡಬಹುದು. ವ್ಯಾಪಾರಿ ವಲಯದಲ್ಲಿ ನಿಮ್ಮ ಹಲವು ಯೋಜನೆಗಳು ಲಾಭದತ್ತ ತಿರುಗಲಿವೆ. ಅವಿವಾಹಿತರು ಈ ವರ್ಷದ ಹಲವು ಕೆಲಸಗಳಲ್ಲಿ ಪ್ರಗತಿ ನೋಡುವರು, ಅವಿವಾಹಿತರಲ್ಲಿ ವಿವಾಹ, ವಾಹನ ವಿಚಾರದಲ್ಲಿ ಅನಿರೀಕ್ಷಿತ ಲಾಭಗಳಿವೆ. ಹೊಸ ಆದಾಯ ಮೂಲಗಳ ಹುಡುಕುವ ನಿಮ್ಮ ಪ್ರಯತ್ನದಲ್ಲಿ ಶುಭವಾಗುತ್ತಿದೆ. ಅದ್ರಲ್ಲೂ ನೀವು ಕೃಷಿ ಸಂಬಂಧಿತ ವಿಚಾರಗಳಲ್ಲಿ ತೊಡಗಿದ್ದರೆ ಅಧಿಕ ಲಾಭವಿದೆ. ಕುಟುಂಬದ ಸದಸ್ಯರೊಬ್ಬರಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದು ಈ ವರ್ಷ ನಿವಾರಣೆಯಾಗಲಿದೆ. ಮನೆ ನಿರ್ಮಾಣಕ್ಕೆ ಮುಂದಾಗುವ ಮಂದಿಗೆ ಶುಭಕರ ಆರಂಭಗಳು ಸಿಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











