Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
30 ವರ್ಷದ ಬಳಿಕ ಅಪರೂಪದ ಸಮಸಪ್ತಕ ಯೋಗ: 3 ರಾಶಿಯವರ ಹಣ ಡಬಲ್!
ಜ್ಯೋತಿಷ್ಯದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಪುಂಜಗಳು ತಮ್ಮ ಚಲನೆಯನ್ನು ಬದಲಾಯಿಸಿದಾಗ ಹಲವರ ಜೀವನದಲ್ಲಿ ಬದಲಾವಣೆಗಳ ನೋಡಬಹುದು. ಹಾಗೆ ಹಲವರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದು ನೋಡಬಹುದು. ಇನ್ನು ಮಂಗಳ ಗ್ರಹವು ಐಶ್ವರ್ಯದ ಸಂಕೇತ ಎಂದು ಪರಿಗಣಿಸಲಾಗಿದ್ದು, ಸದ್ಯ ಮಂಗಳನು ಕನ್ಯಾ ರಾಶಿಯ ಪ್ರವೇಶಿಸುತ್ತಿದೆ.
ಮಂಗಳನು ಕನ್ಯಾ ರಾಶಿಯಲ್ಲಿದ್ದಾಗ ಶನಿಯು ಮೀನ ರಾಶಿಯಲ್ಲಿ ನೇರವಾಗಿ ಚಲಿಸುವಾಗ ಅಪರೂಪದ ಯೋಗ ರೂಪುಗೊಳ್ಳಲಿದೆ. ಕನ್ಯಾ ಹಾಗೂ ಶನಿಯ ನೇರ ಕೋನದ ಚಲನೆಯಿಂದ ಪ್ರಬಲವಾದ ಸಮಸಪ್ತಕ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು 30 ವರ್ಷಗಳ ನಂತರ ರೂಪುಗೊಳ್ಳುತ್ತದೆ. ಈ ಯೋಗವನ್ನು ವಿಶೇಷ ಎಂದು ಪರಿಗಣಿಸಲಾಗುತ್ತದೆ.
ಈ ಪ್ರಬಲ ಯೋಗದ ಪರಿಣಾಮವು ಕೆಲವು ವಿಶೇಷ ರಾಶಿಗಳ ಮೇಲೆ ಬಹಳ ಶುಭವಾಗಲಿದೆ. ಹಲವರಿಗೆ ವೃತ್ತಿ ಪ್ರಗತಿ, ಆದಾಯದಲ್ಲಿ ಹೆಚ್ಚಳ, ಹಣದಲ್ಲಿ ಸಿಲುಕಿಕೊಳ್ಳುವಂತಹ ಕಾಕತಾಳೀಯಗಳು ರೂಪುಗೊಳ್ಳುತ್ತಿವೆ. ಯಾರ ಜಾತಕದಲ್ಲಿ ಈ ಯೋಗವು ಅನುಕೂಲಕರ ಪರಿಣಾಮವನ್ನು ಬೀರುತ್ತಿದೆಯೋ, ಅವರಿಗೆ ಈ ಸಮಯವು ಜೀವನದಲ್ಲಿ ಹೊಸ ತಿರುವು ಎಂದು ಸಾಬೀತುಪಡಿಸಬಹುದು. ಈ ಸಮಸಪ್ತಕ ಯೋಗವು ಯಾವ ರಾಶಿಯವರಿಗೆ ಅದೃಷ್ಟ ತರಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ವೃಷಭ ರಾಶಿ
ಸಮಸಪ್ತಕ ಯೋಗವು ವೃಷಭ ರಾಶಿಯ ಜನರಿಗೆ ಅನೇಕ ಪ್ರಯೋಜನಗಳ ತರಲಿದಿ. ನಿಮ್ಮ ಆದಾಯ ಹೆಚ್ಚಾಗಬಹುದು. ದೀರ್ಘಕಾಲದ ನಿಮ್ಮ ಕೆಲಸಗಳಿಂದ ಆದಾಯ ಹೆಚ್ಚಳ ನೋಡಬಹುದು. ನಿಮ್ಮ ಪ್ರತಿಭೆಗೆ ತಕ್ಕ ಫಲ ಸಿಗವುದು. ಮಕ್ಕಳ ಮದುವೆ ಕುರಿತಾಗಿ ಶುಭ ಸುದ್ದಿ ಕೇಳಿ ಬರಲಿದೆ. ಔದ್ಯೋಗಿಕ ಸಂಬಂಧವಾಗಿ ನಿಮಗೆ ಶುಭ ಸುದ್ದಿ ಇರಲಿದೆ. ಅದ್ರಲ್ಲೂ ವರ್ಗಾವಣೆ, ಬಡ್ತಿ, ವೇತನ ವಿಚಾರವಾಗಿ ಹಳೆಯ ಸಮಸ್ಯೆಗಳು ನಿವಾರಣೆಯಾಗಲಿದೆ. ಹೊಸ ಆದಾಯಗಳ ಪಡೆಯೋದು ಸುಲಭವಾಗಲಿದೆ. ದಾಂಪತ್ಯ ವಿಚಾರವಾಗಿ ನಿಮಗೆ ಸುಖಕರ ದಿನವಾಗಿರಲಿದೆ.
ಮಕರ ರಾಶಿ
ಸಮಸಪ್ತಕ ಯೋಗವು ಮಕರ ರಾಶಿಯ ಜನರಿಗೆ ಹೊಸ ಶುಭ ಅವಕಾಶಗಳ ತರಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಹಣದ ಹೊಸ ಮೂಲಗಳು ತೆರೆದುಕೊಳ್ಳಬಹುದು. ಅವಿವಾಹಿತರಿಗೆ ಮದುವೆ ಯೋಗವಿದೆ. ವಾಹನ ಸಂಬಂಧಿ ವಿಚಾರಗಳಲ್ಲಿ ಬಹಳ ಸಮಯದಿಂದ ಕಾಡಿದ್ದ ಕನಸು ಈಡೇರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ನಾಯಕತ್ವದ ಸಾಮರ್ಥ್ಯವು ಎಲ್ಲರ ಗಮನವನ್ನು ಸೆಳೆಯುತ್ತದೆ. ಬಡ್ತಿ ಅಥವಾ ಹೊಸ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆಗಳೂ ಇವೆ. ವೈವಾಹಿಕ ಜೀವನದಲ್ಲಿ ಮಾಧುರ್ಯ ಇರಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ವಿದೇಶ ಪ್ರಯಾಣದಲ್ಲಿ ನಿಮಗೆ ಶುಭವಿದೆ.
ಕುಂಭ ರಾಶಿ
ಈ ಸಮಸಪ್ತಕ ಯೋಗವು ಕುಂಭ ರಾಶಿಯ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ, ಜೊತೆಗೆ ದೀರ್ಘಕಾಲದವರೆಗೆ ಸಿಲುಕಿಕೊಂಡಿದ್ದ ಹಣವನ್ನು ಸಹ ಮರಳಿ ಪಡೆಯಬಹುದು. ಸ್ವಂತ ಉದ್ಯೋಗ ಮಾಡುವವರು. ಪಿತ್ರಾರ್ಜಿತವಾಗಿ ನಡೆಸಿಕೊಂಡು ಬಂದಿದ್ದ ಕೆಲಸದಲ್ಲಿ ಅತ್ಯಧಿಕ ಲಾಭ ನೋಡಬಹುದು. ಕುಟುಂಬ ಜೀವನದಲ್ಲಿ ಆಹ್ಲಾದಕರ ದಿನಗಳಿವೆ. ನಿಮ್ಮ ಉಳಿತಾಯದ ದೊಡ್ಡ ಮೊತ್ತವೊಂದು ನಿಮ್ಮ ಕೈ ಸೇರಲಿದೆ. ನಿಮ್ಮ ಆಸ್ತಿ ಸಂಬಂಧಿತ ಹಲವು ವಿಚಾರಗಳಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications